Crazy song details
- Song : Crazy
- Singer : All ok
- Lyrics : All ok
- Music : All ok
Crazy lyrics in Kannada
ನಮಸ್ಕಾರಿ, ಚೊಲೋ ಇದ್ದೀರಾ?
೨೦೨೦ ಯಾರ್ಗು ಮರ್ಯೋಕೆ
ಆಗ್ದೇ ಇರೋವಂಥ ವರ್ಷ
ಸಪ್ಪೆ ಊಟ ಮಾಡದಂಗ್ ಆಯಿತು
ಈಗ ಹೊಸ ವರ್ಷಕ್ಕೆ ಕಾಲಿಡ್ತಿವ್ ರೀ
ಇದೆ ಖುಷಿಲಿ ನಮ್ ದೋಸ್ತ
ನಾಟಿ ಸ್ಟೈಲ್ ಊಟ
ರೆಡಿ ಮಾಡ್ಯಾನ್ ರೀ ಬರ್ರಿ
ಹ್ಮ್ಮ್ ಜೀವನದಲ್ಲಿ ಬಿಜಿ ಆಗಿ ಇರ್ತೀರೋ,
ಲೇಜಿ ಆಗಿ ಇರ್ತೀರೋ ಗೊತ್ತಿಲ್ ರೀ ಎಪ್ಪ!
ಆದ್ರ ಸ್ವಲ್ಪ ಕ್ರೇಜಿ ಆಗಿರೋಣ ಬರ್ರಿ
ಮ್ಯೂಸಿಕ್..
ಇದು ಶಾನೆ ಫಾಸ್ಟ್ ಜಮಾನಾ
ನಾವ್ ಮಿಡಲ್ ಕ್ಲಾಸ್ ಸುಲ್ತಾನ
ನಮ್ ಪಾಡಿಗೆ ಇರ್ತೀವಿ
ತಂಟೆಗ್ ಬಂದ್ರೆ ಚಿಂದಿ ಚಿತ್ರಾನ್ನ
ನಮ್ ಸತ್ವಕ್ಕೆ ಮೊದಲನೇ ಸ್ಥಾನ
ತಾಯಿನಾಡಿಗೆ ಫುಲ್ ಅಭಿಮಾನ
ತಲೆ ಹೋದ್ರು ನಾವು ಬಿಟ್ ಕೊಡೋದಿಲ್ಲ
ಕೇರ್ ಆಫ್ ಹಿಂದುಸ್ತಾನ
ಅವಳು ಲೈಫಲ್ಲಿ ತುಂಬಾ ಮುಖ್ಯ
ಸಿಂಪಲಾಗ್ ಬಾಳೋದು
ಎಲ್ಲಾರು ನಮ್ಮೊರೆ ಇಲ್
ಕೂಲ್.. ಕೂಲ್.. ಕೂಲ್.. ಕೂಲ್!
ಜೀವನ್ದಲ್ ತುಂಬಾ ಐತೆ
ಕಿತ್ತು ದಬ್ಬಾಕೊದು
ಸತ್ಮೇಲ ಮಲ್ಗೊದ್ ಇದ್ದೆ ಐತೆ
ಬದ್ಕಿದಾಗೆ ಮಾಡುದ್ರೆ
ಕ್ರೇಜಿ.. ಕ್ರೇಜಿ.. ಕ್ರೇಜಿ.. ಕ್ರೇಜಿ!
ಒಲಿದರೆ ಕಗ್ಗಂಟು ಕುಂದ
ಮುನಿದರೆ ಬ್ಯಾಡ್ಗೆ ಮೆಣಸಿನಕಾಯಿ
ಹೊರಗಡೆ ರಫ್ ಒಳಗಡೆ ಸ್ವೀಟು
ಜಸ್ಟ್ ಲೈಕ್ ಬಿಗ್ ಹಲಸಿನಕಾಯಿ
5 ಸ್ಟಾರು ಬೃಂಚ್ ಬದನೆಕಾಯಿ
ಬೇಕಿಲ್ಲ ಸಪ್ಪೆ ಸೋರೆಕಾಯಿ
ತಿನ್ನೋದು ನಾಟಿ ಸ್ಟೈಲು ಊಟ
ಸಿಕ್ರೆ ಚಪ್ಪರಿಸ್ಕೊಂತ ಬಾಯಿ
ಹೇ.. ದಾರಿ ಬಿಡಿ ದಾರಿ ಬಿಡಿ ಬರ್ತಾ ಇದ್ದಿವಿ
ನಾವು ಸೇರಿದರೆ ಅನಾಹುತ
ಬೀದರ್ ಇಂದ ಚಾಮರಾಜನಗರ
ಗಿಚ್ಚು ಗಿಲಿ ಗಿಲಿ ಮಾಡ್ಕೊಂತ
ಕ್ಯಾಪು ಚೈನು ಬೇಕಿಲ್ಲ ನಾವು
ಧೋತ್ರ ಪಟಕಾ ಹಾಕೊಂತ
ನಮ್ ಶೋಕಿ ಕೂಡ
ಮೇಡ್ ಇನ್ ಇಂಡಿಯಾ..
ಗೋಲಿ ಬಚ್ಚ ಆಡಿಕೊಡು ಬಂದೋರು
ಕೈತುತ್ತು ಮುದ್ದೆ ಊಟ ತಿಂದೊರು
ಅಣ್ಣಮ್ಮ ಗಣೇಶ್ ಏರಿಯಾಲಿ ಕೂರ್ಸ್ಕೊಂಡ್
ಊರ ತುಂಬಾ ಆಟ ಆಡ್ಕೊಂಡ್ ಬೆಳೆದವ್ರು
ದೋಸ್ತರ ಕಷ್ಟಕ್ಕೆ ನಿಂತವ್ರು
ನಮಕ್ ಹರಾಮುಗಳಿಗ್ ಒದ್ದವ್ರು
ಪ್ರೀತಿ ಕೋಪ ಎರಡು ಜಾಸ್ತಿ
ಎಸ್ಕ್ಯೂಸ್ ಮೀ ಬೈ ಬರ್ತ್ ಎ ಐತೆ
ಕ್ರೇಜಿ! ಕ್ರೇಜಿ!
All ok
ಕ್ರೇಜಿ!