Chithaal pathaal song details
- Song : Chithaal pathaal
- Singer’s : Raghu Gowda , Gubbi
- Lyrics : Raghu Gowda , Gubbi
- Music : Sai Menon
- Director : Anup K R
Chithaal pathaal lyrics in Kannada
ಚಿತ್ತಾಲ್ ಪತ್ತಾಲ್ ಲಿರಿಕ್ಸ್
ಕೂತು ಕೇಳಿ ನೋಡಿ ಈ
ಕ್ಯಾಂಡಿಡೇಟ್ ನಾ ಸ್ಟೋರಿ
ಕೇಳಿ ಚೈಲ್ಡ್ ಹುಡ್ ಇಂದಲೇ
ಹುಡುಗ ಬಾರಿ ಬಾರಿ -ಫಿಸಿಕ್
ರಿಪೋರ್ಟ್ ಕಾರ್ಡ್ ತೋರಿಸಿ
ಹೋದ ಓಡಿ ಓಡಿ -ರನ್ನಿಂಗ್
ಹುಡುಗ ತುಂಬಾ ಸ್ವೀಟ್ ಆದ್ರೆ
ಮಾರ್ಕ್ಸ್ ಆಘಾತಕಾರಿ!
ಚಡ್ಡಿ ಹೋಗಿ ಪ್ಯಾಂಟು ಬಂತು
ದೊಡ್ಡೋನ್ ಆದ ಸಿಸ್ಯ -ಸಿಸ್ಯ
ಬಾಯ್ಸ್ ಬಂದು ಕೇಳುದ್ರು
ಏನ ಮಗ ವಿಸ್ಯ?
ಈ ಸೆಕ್ಷನ್ ಹುಡುಗಿ ನೋಡ್ದೆ
ಅವಳೆ ನನ್ನ ಭವಿಷ್ಯ
ಆದ್ರೆ ಅವಳ ಕಣ್ಣಲ್ಲಿ ಇವನು
ಇನ್ನೂ ಅನೌನ್ ಮನುಷ್ಯ -ಸ್ಯಾಡ್!
ಮನೇಲಿ ಯಾರೂ ಇಲ್ಲದಾಗ
ನೋಡುತಿದ್ದ p#rn’u!
ತುಂಬಾ ಹುಷಾರು ನಮ್ಮ ಹುಡುಗ
ಬ್ರೌಸರ್ ಹಿಸ್ಟರಿ ಕ್ಲೀನು -ಹೆಂಗೆ!
ಚಿಲ್ಕ ಹಾಕೊಂಡೆ ಕೈಗೆ ಎತ್ಕೊಂಡು ಇದ್ದ ಕಾನೂನು
ಸರ್ಪೈಸ್ ಎಂಟ್ರಿ ಕೊಟ್ರು ಅಪ್ಪ
ಬೆಳಿಗ್ಗೆ ಬಿತ್ತು ಮೀನು!
ಟ್ಯೂಶನ್ ಗೆ ಹೋದ್ರು ಇವನು
ಇವ್ನ್ CET rank’u gone’u-ಬ್ಯಾಡ್
ಆದ್ರೂ ಹೇಳುದ್ರು ಅಪ್ಪ :
ಇಂಜಿನಿಯರಿಂಗ್ ಸೇರ್ಕೊಳೊ ನೀನು
ಇಂಟರ್ನಲ್ಸು ಪ್ರಾಕ್ಟಿಕಲ್ಸು
ಬ್ಯಾಕ್ ಟು ಬ್ಯಾಕು ಬ್ಯಾಕು!
ಇವನ ಮಾರ್ಕ್ಸ್ ನೋಡಿ ಅಂದ್ರು ಅಪ್ಪ
ಇವನ ದನ ಕಾಯಕ್ಕೆ ಹಾಕು!
ಚಿತ್ತಾಲ್ ಪತ್ತಾಲ್!
ಜೀವನವೇ ಚಿತ್ತಾಲ್ ಪತ್ತಾಲು
ಚಿತ್ತಾಲು ಪತ್ತಾಲು!
ಜೀವನವೆ ಚಿತ್ತಾಲ್ ಪತ್ತಾಲು..
ಚಿತ್ತಾಲ್ ಪತ್ತಾಲು!
ಜೀವನವೇ ಚಿತ್ತಾಲ್ ಪತ್ತಾಲು
ಚಿತ್ತಾಲ್ ಪತ್ತಾಲು!
ಜೀವನವೇ ಚಿತ್ತಾಲ್ ಪತ್ತಾಲು
ಹಂಗೋ ಹಿಂಗೋ ಸೈಕಲ್ ಹೊಡೆದು
ಮುಗಿಸಿಕೊಂಡ ಡಿಗ್ರಿ –
ಡಿಗ್ರಿ ಪ್ಲೇಸ್ಮೆಂಟ್ ವಿಚಾರಕ್ ಬಂದಾಗ್
ಬರಿ ಟಾಟಾ ಸಿಂಗ್ರಿ ಸಿಂಗ್ರಿ!
ಇಷ್ಟ ಇಲ್ಲದಿದ್ದ ಕೆಲಸಕ್ಕೆ
ಸೇರ್ಕೊಂಡ
ಹಾಸಿಗೆ ಇದ್ದಷ್ಟು ಕಾಲು ಚಾಚು
ಆದ್ರೆ ಇವ್ನದು ಚಿಕ್ಕದು ಹಾಸಿಗೆ!
ಕ್ಯಾಬ್, ಕೆಲಸ,ಬಾರ್ ಅವನಿಗೆ
ಆಗೆ ಹೋಯ್ತು ಬೋರು ಬೋರು!
ಪ್ಯಾಷನ್ ಫಾಲೋ ಮಾಡಿ ಆಗಬೇಕು
ಅನ್ಕೊಂಡ ಸ್ಟಾರ್!
ಒಂದ ಎರಡ ಮೂರ -EMI ನೂರಾರು
ಅಯ್ಯೋ!
ರಿಯಾಲಿಟಿಲಿ ನಮ್ಮ ಸಾರು
ಪಾತ್ರೆ ತಿಕ್ಕೋ ನಾರು -ಏ ಬಾರೊ ಇಲ್ಲಿ!
ಗೋಲಿ ಆಡ್ತಿದ್ದ ಹುಡುಗ ಈಗ
ಮದುವೆ ವಯ್ಯಸ್ಸಿಗ್ ಬಂದ
ಸಂಧಿ ಗುಂದಿ ಎಲ್ಲ ಹುಡುಕಿ
ಸೆಟ್ ಆಯ್ತು ಒಂದು ಬಂಧ -ಕಳ್ಳ!
ಹುಡುಗಿ ಮನೆ expectation ನೋಡಿ ನೊಂದ
ಒಂದು ವರ್ಷ ಆದಮೇಲೆ
ಸಿಂಗಲ್ ಲೈಫೆ ಬೆಸ್ಟು ಅಂದ!
ನೀನ್ ಉದ್ದಾರ ಮಾಡೋದ್ ಅಷ್ಟ್ರಲ್ಲೇ
ಮಾಡಬೇಡ ಮನೆ ಹಾಳು
ಎಷ್ಟೇ ನಿಗ್ರಾಡುದ್ರು
ಒಂದಿನ ಮನೆ ಮುಂದೆ ಪೆಂಡಲು!
ಎಷ್ಟೇ ಮೇಲುಕ್ ಹೋದ್ರೂ ನೀನ್
ನೆಲದ್ ಮೇಲೆ ಈರ್ಲಿ ಕಾಲು
ಗೊತ್ತಲ್ವ ನಿಂಗೆ ಜೀವನ ಫುಲ್
ಚಿತ್ತಾಲ್ ಪತ್ತಾಲು!
ಚಿತ್ತಾಲ್ ಪತ್ತಾಲು!
ಜೀವನವೆ ಚಿತ್ತಾಲ್ ಪತ್ತಾಲು!
ಚಿತ್ತಾಲ್ ಪತ್ತಾಲು!
ಜೀವನವೆ ಚಿತ್ತಾಲ್ ಪತ್ತಾಲು!
ಚಿತ್ತಾಲ್ ಪತ್ತಾಲು!
ಜೀವನವೆ ಚಿತ್ತಾಲ್ ಪತ್ತಾಲು!
ಡೌಟೇ ಬೇಡ
ಚಿತ್ತಾಲ್ ಪತ್ತಾಲು!
ಜೀವನವೆ ಚಿತ್ತಾಲ್ ಪತ್ತಾಲು …….