Bloodshed of ramarjuna lyrics ( ಕನ್ನಡ ) – Ramarjuna

Bloodshed of ramarjuna song details

  • Song : Bloodshed of Ramarjuna
  • Singer : Vasishhta N simha
  • Music : Anand Rajavikram
  • Lyrics : Sai sarvesh
  • Movie : Ramarjuna

Bloodshed of ramarjuna lyrics in Kannada

ರಾಮಾರ್ಜುನ ಲಿರಿಕ್ಸ್

ನಡುಕ ನಡುಕ ನಡುಕ
ಇರಬೇಕು ಕೊನೆಯ ತನಕ
ಖದಿಮರ ನಡು ಮುರಿದು
ರುಚಿ ನೋಡಿ ಬಿಡಲಿ ಕಟುಕ
ಕೊತ ಕೊತ ಕೊತ ಕುದಿದ ರಕ್ತ
ಆರೋ ಮುನ್ನ ಎದೆಯ ಬಗಿದು ಬಾ

ಕಾದಿತ್ತು ರಣಹದ್ದು
ರಣಬೇಟೆಯು ಸಿಗಲೆಂದು
ಕಣದಲ್ಲಿ ತಿರುಗೇಟು ಬಿಡದೆ ಕೊಡು ಬಾ
ಯಾವುದೇ ಗುಂಪು ಬೇಕಿಲ್ಲ ನೀನೇನೆ ಸೈನ್ಯ
ದೇವ್ರಾಣೆ ನಿನ್ನನ್ನು ಪಡೆದೋರೆ ಧನ್ಯ
ಕೆಣುಕಿ ಧರಣಿ ಮೇಲೆ ತಲೆಯೆತ್ತಿ ನಿಂತಾಗ
ಇವನೇ ಧರೆಗೆ ಇಳಿದ ರಾಮಾರ್ಜುನ
ಕವಿದ ಇರುಳ ಸರಿಸಿ ಬೆಳಕನ್ನು ಸುರಿಸೋನು
ಇವನ ಹೆಸರೇ ಕೇಳಿ ರಾಮಾರ್ಜುನ

ಭಯ ಮೊಳಗಿಸುವ ದಯ ಕರುಣಿಸುವ
ಗಣಗಳ ಜೊತೆ ಸೆಣಸಾಡುವ ನಿಪುಣ ಇವನು
ಗತಿ ಬದಲಿಸುವ ಸ್ಥಿತಿ ಅರಳಿಸುವ
ಸುರನಂತೆ ಸಿಡಿದೇಳುವ ಚತುರ ಇವನು
ವೈರಿಯ ಕೇಡಿಯ ಜನ್ಮ ಜಾಲಾಡೋ ಚಾಣಾಕ್ಷ
ಜನಗಳ ಮನಸಿನ ಗುಡಿಯ ಕಳಶ
ವ್ಯಾಘ್ರದ ಸೊಕ್ಕನು ಮುರಿವ ಗಳಿಗೆಯು ಬಂದಾಗ
ಬಳಸುವ ಸಮಯವು ಕೇಲವೆ ನಿಮಿಷ
ಯಾವುದೆ ಗುಂಪು ಬೇಕಿಲ್ಲ ನೀನೇನೆ ಸೈನ್ಯ
ದೇವ್ರಾಣೆ ನಿನ್ನನ್ನು ಪಡೆದೋರೆ ಧನ್ಯ
ಕೆಡವು ಧರಣಿ ಮೇಲೆ ತಲೆಯೆತ್ತಿ ನಿಂತಾಗ
ಇವನೇ ಧರೆಗೆ ಇಳಿದ ರಾಮಾರ್ಜುನ
ಕವಿದ ಇರುಳ ಸರಿಸಿ ಬೆಳಕನ್ನು ಸುರಿಸೋನು
ಇವನ ಹೆಸರೇ ಕೇಳಿ ರಾಮಾರ್ಜುನ

ನಡುಕ ನಡುಕ ನಡುಕ
ಇರಬೇಕು ಕೊನೆಯ ತನಕ
ಖದಿಮರ ನಡು ಮುರಿದು
ರುಚಿ ನೋಡಿ ಬಿಡಲಿ ಕಟುಕ
ಕೊತ ಕೊತ ಕೊತ ಕುದಿದ ರಕ್ತ
ಆರೋ ಮುನ್ನ ಎದೆಯ ಬಗಿದು ಬಾ

ಕಾದಿತ್ತು ರಣಹದ್ದು
ರಣಬೇಟೆಯು ಸಿಗಲೆಂದು
ಕಣದಲ್ಲಿ ತಿರುಗೇಟು ಬಿಡದೆ ಕೊಡು ಬಾ
ಯಾವುದೇ ಗುಂಪು ಬೇಕಿಲ್ಲ ನೀನೇನೆ ಸೈನ್ಯ
ದೇವ್ರಾಣೆ ನಿನ್ನನ್ನು ಪಡೆದೋರೆ ಧನ್ಯ
ಕೆಣುಕಿ ಧರಣಿ ಮೇಲೆ ತಲೆಯೆತ್ತಿ ನಿಂತಾಗ
ಇವನೇ ಧರೆಗೆ ಇಳಿದ ರಾಮಾರ್ಜುನ
ಕವಿದ ಇರುಳ ಸರಿಸಿ ಬೆಳಕನ್ನು ಸುರಿಸೋನು
ಇವನ ಹೆಸರೇ ಕೇಳಿ ರಾಮಾರ್ಜುನ

Bloodshed of ramarjuna song video :

Leave a Comment

Contact Us