Categories
Dr. Rajkumar

Belli moodithu koli koogithu lyrics ( ಕನ್ನಡ ) – Kaviratna Kalidasa – Super cine lyrics

 Belli moodithu koli koogithu lyrics – Kaviratna kalidasaBelli moodithu koli koogithu song details 

  • Film : Kavirathna Kalidasa
  • Song : Belli Moodithu Koli Koogithu
  • Singer : Dr Rajkumar
  • Lyrics : Chi Udayashankar
  • Music :  M Ranga Rao

Belli moodithu koli koogithu lyrics in Kannada

Tarrrrrrrrrrraaaa

ಬೆಳ್ಳಿ ಮೂಡಿತು ಕೋಳಿ ಕೂಗಿತು 
ಹಾ ಬೆಳ್ಳಿ ಮೂಡಿತೊ ಕೋಳಿ ಕೂಗಿತೊ
ಬಾನಾಗೆ ರಂಗು ಚೆಲ್ಲಿ 
ತೇರನೇರಿ ಸೂರ್ಯ ಬಂದ 
ಬೆಳ್ಳಿ ಮೂಡಿತೊ ಕೋಳಿ ಕೂಗಿತೊ

ಆಹಾ ಬೆಳ್ಳಿ ಮೂಡಿತೊ ಕೋಳಿ ಕೂಗಿತೊ

ಎಳೆ ಬಿಸಿಲು ಎಲ್ಲೆಲ್ಲೂ ಚೆಲ್ಲಾಡೈತೆ
ಎಲೆ ಮ್ಯಾಗಿನ ಮಂಜು ಹನಿ ಪಳ್ ಗುಟ್ಟುತೈತೆ
ಎಳೆ ಬಿಸಿಲು ಎಲ್ಲೆಲ್ಲೂ ಚೆಲ್ಲಾಡೈತೆ

ಎಲೆ ಮ್ಯಾಗಿನ ಮಂಜು ಹನಿ ಪಳ್ ಗುಟುತೈತೆ

ಹಕ್ಕಿ ಹಾರುತಿದೆ, ಕಿಚಿ ಪಚಿ ಎನ್ನುತ್ತಿದೆ
ಹಕ್ಕಿ ಹಾರುತಿದೆ, ಕಿಚಿ ಪಚಿ ಎನ್ನುತಿದೆ

ಮಂಗ ಮರ ಏರುತಿದೆ
ಆ ಕೊಂಬೆ ಈ ಕೊಂಬೆ ಯಗರುತಿದೆ

ಯಾಕ ಲೇ ಹನುಮಂತಪ್ಪ ಗುರ್ ಗುಡ್ತೀಯ? 
ಮಂಗ ಮರ ಏರುತಿದೆ 
ಆ ಕೊಂಬೆ ಈ ಕೊಂಬೆ ಯಗರುತಿದೆ
ಬೆಳ್ಳಿ ಮೂಡಿತೊ ಕೋಳಿ ಕೂಗಿತೊ
ಹಾ ಬೆಳ್ಳಿ ಮೂಡಿತೊ ಕೋಳಿ ಕೂಗಿತೊ
ಬಾನಾಗೆ ರಂಗು ಚೆಲ್ಲಿ 
ತೇರನೇರಿ ಸೂರ್ಯ ಬಂದ 
ಬೆಳ್ಳಿ ಮೂಡಿತೊ ಕೋಳಿ ಕೂಗಿತೊ

ಆಕಾಶದಾಗೆ ಬಣ್ಣ ಬಳಿದವನ್ ಯಾರು? 

ಈ ಬೆಟ್ಟ ಗುಡ್ಡಗಳ ಮಾಡಿದವನ್ ಯಾರು? 
ಮರದ ಮ್ಯಾಲೆ ಹಣ್ಣ ಇಟ್ಟವ್ನ್ ಯಾರು? 
ಹಣ್ಣ ಒಳಗೆ ರುಚಿಯ ತುಂಬಿದವನ್ ಯಾರು? 
ಓಓಓಓಓಓಓ ಓಓಓಓಓಓ ಓಓಓ
ಆಹಾಹಾಹಾಹಾಹಾ ಆ ಆ ಆ ಆ ಆ
ಓ ಕಾಳ? 
ಓ ಕರಿಯ? 
ಓ ಮುನಿಯ?  ಓ ಮರಿಯ?  ಓ ಕೆಂಚ? ಓ ಜವರ? 
ಇಂದು ಈ ಭೂಮಿ ಮ್ಯಾಗಿ 
ನನ್ನ ನಿಮ್ಮ ತಂದವರು ಯಾರೊ

ಬೆಳ್ಳಿ ಮೂಡಿತೊ ಕೋಳಿ ಕೂಗಿತೊ
ಹಾ ಬೆಳ್ಳಿ ಮೂಡಿತೊ ಕೋಳಿ ಕೂಗಿತೊ
ಬಾನಾಗೆ ರಂಗು ಚೆಲ್ಲಿ 
 ತೇರನೇರಿ ಸೂರ್ಯ ಬಂದ 
ಬೆಳ್ಳಿ ಮೂಡಿತೊ ಕೋಳಿ ಕೂಗಿತೊ
ಬೀರಪ್ಪ ಕುಂತವ್ನೆ ಗುಡಿಯ ಒಳಗೆ 
ಬೇಡಿದ ವರದಾನ ಕೊಡುವ ನಮಗೆ 
ಬಕುತರ ಕಂಡರೆ ಆಸೆ ಅವಗೆ
ಕೆಟ್ಟೋರ ಕಂಡರೆ ರೋಷ ಅವಗೆ
ಓಹೋ ಓಓಓಓ ಓಓಓಓ ಓಓಓ 
ಆಹಾಹಾಹಾಹಾ ಆ ಆ ಆ ಆ 
ಓ ಬೀರ? 
ಓ ಮಾರ? 
ಓ ನಂಜ? 
ಓ ಕೆಂಪ? 
ಬರ್ರ ಲಾ ಹೊತ್ತಾಯ್ತು 
ವಟ್ಟೆ ಚುರ್ ಗುಡ್ತೈತೆ
ರಾಗಿ ಮುದ್ದೆ ಉಣ್ಣೋ ಹೊತ್ತು 
ಬೆಳ್ಳಿ ಮೂಡಿತೊ ಕೋಳಿ ಕೂಗಿತೊ
ಹಾ ಬೆಳ್ಳಿ ಮೂಡಿತೊ ಕೋಳಿ ಕೂಗಿತೊ 
ಬಾನಾಗೆ ರಂಗು ಚೆಲ್ಲಿ 
ತೇರನೇರಿ ಸೂರ್ಯ ಬಂದ 
ಬೆಳ್ಳಿ ಮೂಡಿತೊ ಕೋಳಿ ಕೂಗಿತೊ

ಬೆಳ್ಳಿ ಮೂಡಿತೊ ಕೋಳಿ ಕೂಗಿತೊ
ಟರ್ ಟರ್ ಬಾ ಬಾ 
ಟರ್ ಟರ್ ಅಯ್ಯಾ
ಸಂಧಿ ಗುಂಡಿ ಒಳಗೆಲ್ಲಾ ನುಗ್ತವಲ್ಲಪ್ಪ? 
ಲೇ ಬರ್ರ ಲೇ
ಟರ್ ಬಾ ಬಾ ಬಾ

ಟರ್ ರ್ ರ್ ರ್ ರ್


Belli moodithu koli koogithu song video

Leave a Reply

Your email address will not be published. Required fields are marked *

Contact Us