Categories
Arman Malik Ashwini Joshi

Bari neene neene Lyrics – Prarambha – super cine lyrics

Bari neene neene – Armaan malik , Ashwini Joshi Lyrics

Singer Armaan malik , Ashwini Joshi

About the song

▪ Movie: Prarambha
▪ Cast: R.Manoranjan Ravichandran, Keerti Kalkeri,
▪ Banner: Jenushree Tanusha Production
▪ Producer: Jagadeesh Kalyadi
▪ Director: Manu Kalyadi
▪ Music: Prajwal Pai
▪ Song: Bari Neene Neene
▪ Singers:Armaan Malik , Ashwini Joshi
▪ Lyrics: Santhosh Naik.
▪ Cinematographer: Suresh Babu

Bari neene neene song lyrics

ನನ್ನಲ್ಲೆ ಕಳುವಾದೆ ನಾನು
ನಿನ್ನಲ್ಲಿ ಹುಡುಕೋಣವೇನು
ನನ್ನನ್ನೇ ಮರೆತೋದೆ ನಾನು
ನನ್ನನ್ನು ಪರಿಚಯಿಸು ನೀನು
ನಿನ್ನ ಕಣ್ಣಿನ ಸನ್ನೆ
ನೋಡಿ ಆಗೋದೆ ಸೊನ್ನೆ ..
ನನ್ನ ಕೆನ್ನೆಯ ದಿನ್ನೆ
ಯಾಕೆ ಕೇಳೋದು ನಿನ್ನೆ
ಬರಿ ನೀನೆ ನೀನೆ
ಬರಿ ನೀನೆ ನೀನೆ
ಜೀವಕೀಗ ನೀನೆ ಬೇಕಿದೆ
ಬರಿ ನೀನೆ ನೀನೆ
ಬರಿ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ….

ಅಂಗೈಲಿ ನಿನ್ನ ಅಂಗಾಲು ಇಟ್ಟು
ನಡೆಸೋದೆ ನನ್ನಾಶಯ
ಕಣ್ಣಲಿ ನಿನ್ನ ಮುಖವನ್ನು ಇಟ್ಟು
ಕಾಣೋದೆ ಅರುಣೋದಯ
ನಾನೆ ನಾನಾ ಇಲ್ಲಾ ನೀನಾ..?
ಅನ್ನೋದೇನೆ ನನ್ನ ಸಂಶಯ
ನೀನೆ ಧ್ಯಾನ ನೀನೆ ಪ್ರಾಣ
ಮೀರಲೇನು ಒಮ್ಮೆ ಅಂಕೆಯ..

ಬರಿ ನೀನೆ ನೀನೆ
ಬರಿ ನೀನೆ ನೀನೆ
ಜೀವಕೀಗ ನೀನೆ ಬೇಕಿದೆ
ಬರಿ ನೀನೆ ನೀನೆ
ಬರಿ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ

ನಾ ಮೆಲ್ಲ ನಾಚಿ
ಕಾಲಲ್ಲಿ ಗೀಚಿ
ಕೆಂಪಾಯ್ತು ಕಣ್ಣ್ ಕಾಡಿಗೆ
ಏನೇನೊ ತೋಚಿ
ಆಗೋದೆ ಬೀಚಿ
ನಾ ಪೋಲಿ ನಿನ್ನ ಪಾಲಿಗೆ
ಜೀವಮಾನ ನಾನೆ ನನ್ನ
ಧಾರೆ ಎರೆದೆ ನಿಂಗೆ ನಾ..
ಏನೋ ನನ್ನ ಕಣ್ಣಾ ಪುಣ್ಯಾ
ಕಣ್ಣ ಮುಂದೆ ಸ್ವರ್ಗ ಕಂಡೆನಾ..

ಬರಿ ನೀನೆ ನೀನೆ
ಬರಿ ನೀನೆ ನೀನೆ
ಜೀವಕೀಗ ನೀನೆ ಬೇಕಿದೆ
ಬರಿ ನೀನೆ ನೀನೆ
ಬರಿ ನೀನೆ ನೀನೆ
ಜೀವಿಸೋಕು ನೀನೆ ಬೇಕಿದೆ….

ಬರಿ ನೀನೆ ನೀನೆ
ಬರಿ ನೀನೆ ನೀನೆ………………

Leave a Reply

Your email address will not be published. Required fields are marked *

Contact Us