Bandanthe Raajakumara – Manasa Holla , Santhosh Venky Lyrics
Singer | Manasa Holla , Santhosh Venky |
About the song
▪ Film: Bharaate
▪ Music: Arjunjanya
▪ Song: Bandanthe Rajakumara
▪ Singer: Manasa Holla, Santosh Venky
▪ Lyrics : Chethan Kumar
Bandanthe Raajakumara Lyrics
ಬಂದಂತೆ
ರಾಜಕುಮಾರ,
ಇಳಿಸೋಕೆ
ನನ್ನೆದೆಯ ಬಾರ,,
ಇವನಂದ್ರೆ
ಪ್ರೀತಿ ಅಪಾರ,
ಇರಲಾಗದು
ಬಿಟ್ಟು ದೂರ,,
ಹೃದಯದ ಜೋಪಡಿಗೆ
ಭರವಸೆಯ ದೀಪವನು
ಹಚ್ಚಿಟ್ಟು ಮುತ್ತಿಟ್ಟ
ಪ್ರೀತಿಯ
ರಾಜಕುಮಾರ,,,.
ನನಗಾಗಿ
ನೀನು
ಹುಟ್ಟಿರುವೆ
ಏನು,
ಕೊನೆತನಕ ಜೊತೆಯಲ್ಲೇ
ಇರಬಹುದೆ ನಾನು,
ಈ ಜೀವ
ನೀನು
ಆಶ್ಚರ್ಯವೇನು,
ಏಳೇಳು ಜನುಮಕ್ಕು
ಜೊತೆಗಿರುವೆ ನಾನು,
ಬಂದಂತೆ
ರಾಜಕುಮಾರ,
ಇಳಿಸೋಕೆ
ನನ್ನೆದೆಯ ಬಾರ,,
ಮೇರು ಪರ್ವತದ ಅರಸ,
ನನ್ನ ಕಾಯುವನು ದಿವಸ,
ಕೊಹಿನೂರು ವಜ್ರದ
ಮನುಷ್ಯನಿವನು,
ಅ.. ಆ…………….
ನೋಡಿ ಒಂದೆ ಸಮನೇ,
ಹೃದಯ ಸೋತಿಹುದು ಶ್ಯಾನೆ,
ಇವನ ಕಣ್ಣೇ ಜಾದು
ಗಂಧರ್ವರು,,
ನನಗಾಗಿ ನೂರು
ಸಮರವನು ಎದುರಿಸಿ,
ಸೋಲನ್ನೆ ಕಾಣದ
ಪ್ರೀತಿಯಾ ರಾಜಕುಮಾರ…
ಪಲ್ಲಕ್ಕಿಯಲ್ಲೇ
ಮೆರೆಸುವೆನು ನಿನ್ನ,
ಕೊನೆತನಕ ಜೋಪಾನ
ಮಾಡುವೆನು ನಾನು,
ಈ ಜೀವ
ನೀನು
ಆಶ್ಚರ್ಯವೇನು,
ಏಳೇಳು ಜನುಮಕ್ಕು
ಜೊತೆಬರುವೆ ನಾನು,
ತಲೆಯಾ ಬಾಗದ ಸೂರ್ಯ,
ನನಗೇ ಇವನೇ ಧೈರ್ಯ,
ನೋಟದಲೀ ನೂರಾನೆ
ಪಳಗಿಸುವ ಶೌರ್ಯ…
ಮಿಂಚು ಚದುರಿಸೊ ಕೋಪ,
ಉಲ್ಕೆ ತಡೆಯುವ ಭೂಪ,
ಜಗವನ್ನೆ ನಗುವಿನಲೀ
ಜಯಿಸುವ ಸ್ಥೈರ್ಯ,
ಸ್ವಾರ್ಥವೇ ಇರದಾ,
ಪ್ರೀತಿಗೆ ಮಣಿಯುವ,
ಅಭಿಮಾನ ಗಳಿಸುವ
ಪ್ರೀತಿಯಾ ರಾಜಕುಮಾರ….
ಮುತ್ತುಗಳ ಸುರಿದು
ಮಾಲೆಯನು ಹೊಸೆದು
ಉಡುಗೊರೆಯ ನಿನಗೆ
ದಿನ ಕೊಡುವೆ ನಾನು…,
ಈ ಜೀವ
ನೀನು
ಆಶ್ಚರ್ಯವೇನು,
ಏಳೇಳು ಜನುಮಕ್ಕು
ಜೊತೆಗಿರುವೆ ನಾನು,