Baane baane lyrics ( ಕನ್ನಡ ) – Jaga malla

Baane baane song details

  • Song : Baane baane
  • Singer : Anuradha bhat , Siddharth balmannu
  • Lyrics : Hridaya Shiva
  • Movie : Jaga malla
  • Music : D Imman

Baane baane lyrics in Kannada

ಬಾನೆ ಬಾನೆ ಸಾಂಗ್ ಲಿರಿಕ್ಸ್

ಬಾನೆ ಬಾನೆ ಬಾನೆ
ನಾನು ಮೇಘ ತಾನೆ
ಬಾನೆ ಬಾನೆ ಬಾನೆ
ನಾನು ಮೇಘ ತಾನೆ
ಸನಿಹದಲ್ಲೂ ಸಲಿಗೆಯಲ್ಲೂ
ನೀನಿಲ್ಲವೆ
ಮನೆಯೊಳಗೂ ಇಳೆಯೊಳಗೂ ಒಂದಾಗುವೆ
ಮಾತಲಿ ಹೇಗೆ ಹೇಳಲಿ
ಪ್ರೀತಿ ಭಾಷೆ ಬಲ್ಲೆಯ
ಕಣ್ಣಲಿ ವಿನಿಮಯವಾಗಲಿ
ಹೃದಯಗಳ ವಿಷಯ
ನೀ ತಾನೆ ಅರ್ಧಾಂಗಿ
ನಾ ನಿನ್ನ ಸಹಭಾಗಿ
ನೀ ತಾನೆ ದೊರೆಸಾನಿ
ನಾ ನಿನ್ನ ಅಭಿಮಾನಿ

ಬಾನೇ ಬಾನೆ ಬಾನೆ
ನಾನು ಮೇಘ ತಾನೆ
ಒಲಿದವಳೆ ಜೋಡಿನಯನಗಳ
ಜೇನಗಡಿಗೆಯೊಳು ಇಳಿದ ಇರುವೆತರ ಸಿಲುಕಿರುವೇ
ಮರಳುವಾಸೆಯಿಲ್ಲ ನನಗೆ
ಅತಿಶಯದಿ ಜನಿಸಿ ವರುಷಗಳು
ಉರುಳಿತೆರಳಿದರೂ ಬಾಳ ಪಯಣದಲಿ ಮೊಗ ನಿನ್ನದು ನೆನಪಲುಳಿದು ಬಿಡಲಿ ಕೊನೆಗೆ

ಬೇರಾರಿ ಹೂ ಸಿಗದ ಈ ಜೀವನ
ಮಳೆಸುರಿದ ನೆಲದಂತೆ ರೋಮಾಂಚನ
ಮಗುವಿನ ಮೈಯಾ ಗಂಧಕೆ
ಒಲವಿನ ಬಂಧ ಹೋಲಿಕೆ
ಅರೆಗಳಿಗೆ ತೊರೆದರೆ ನೀ
ಉಸಿರಿನ ಹೂವು ಬಾಡದೆ
ನೀ ತಾನೆ ದೊರೆಸಾನಿ
ನಾ ನಿನ್ನ ಅಭಿಮಾನಿ

ಬಾನೆ ಬಾನೆ ಬಾನೆ
ನಾನು ಮೇಘ ತಾನೆ
ಸನಿಹದಲ್ಲೂ ಸಲಿಗೆಯಲ್ಲೂ ನೀನಿಲ್ಲದೆ
ಮನೆಯೊಳಗೂ ಇಳೆಯೊಳಗೂ ಒಂದಾಗುವೆ
ಮಾತಲಿ ಹೇಗೆ ಹೇಳಲಿ
ಪ್ರೀತಿಯ ಭಾಷೆ ಬಲ್ಲೆಯ
ಕಣ್ಣಲಿ ವಿನಿಮಯವಾಗಲಿ
ಹೃದಯಗಳ ವಿಷಯ

ನೀ ತಾನೆ ಅರ್ಧಾಂಗಿ
ನಾ ನಿನ್ನ ಸಹಭಾಗಿ
ನೀ ತಾನೆ ದೊರೆಸಾನಿ
ನಾ ನಿನ್ನ ಅಭಿಮಾನಿ

ಬಾನೆ ಬಾನೆ ಬಾನೆ…………..

Baane baane song video :

Leave a Comment

Contact Us