Arivilladhe shuruvadantidhe lyrics ( ಕನ್ನಡ ) – Sneharshi

Arivilladhe shuruvadantidhe song details

  • Song : Arivilladhe shuruvadantidhe
  • Singer : Supriyaa Ram
  • Lyrics : Raju N K Gowda
  • Movie : Sneharshi
  • Music : Akash Ayyappa
  • Label : D beats

Arivilladhe shuruvadantidhe lyrics in kannada

ಅರಿವಿಲ್ಲದೆ ಶುರುವಾದಂತಿದೆ ಸಾಂಗ್ ಲಿರಿಕ್ಸ್

ಅರಿವಿಲ್ಲದೆ ಶುರುವಾದಂತಿದೆ
ನನ್ನ ಎದೆಯ ಬಡಿತ
ಗುರಿ ಇಲ್ಲದೇ ಅಲೆದಾಡಿದೆ ನಿನ್ನ ಪ್ರೀತಿಯ ಸೆಳೆತ
ಮನಸೋತ ಕ್ಷಣ ಮನಸಾರೆ ಹೇಳುವೆ
ನೀ ಕಾಡಿದ ಕಥೆಯನ್ನು ನಾನು ಪರಿಯಾಗಿ ಸಾರುವೆ

ಕರೆ ನೀಡಿದೆ ಮುದ್ದು ಮೊಗವದು
ಸದ್ದು ಮಾಡಿದೆ ನನ್ನೆದೆ
ಕರೆ ನೀಡಿದೆ ಮುದ್ದು ಮೊಗವದು
ಸದ್ದು ಮಾಡಿದೆ ನನ್ನೆದೆ
ತುಂಬಿ ಬಂದಿದೆ ಕಣ್ಣ ಅಂಚಿದು
ಖುಷಿಯ ಬೇಗೆಯ ತಾಳದೆ
ತುಂಬಿ ಬಂದಿದೆ ಕಣ್ಣ ಅಂಚಿದು
ಖುಷಿಯ ಬೇಗೆಯ ತಾಳದೆ
ಮೊರೆ ಇಡುತಿದೆ ನನ್ನ ಉಸಿರಿದು
ನಿನ್ನ ಹೆಸರನು ಹೇಳಲು
ಬಿದ್ದು ಬೇಡಿದೆ ನನ್ನ ಕಿವಿ ಇದು
ನಿನ್ನ ಕಲರವ ಕೇಳಲು…

ಅರಿವಿಲ್ಲದೆ ಶುರುವಾದಂತಿದೆ
ನನ್ನ ಎದೆಯ ಬಡಿತ
ಗುರಿ ಇಲ್ಲದೇ ಅಲೆದಾಡಿದೆ ನಿನ್ನ ಪ್ರೀತಿಯ ಸೆಳೆತ

ನನ್ನ ಮಾತು ನಿಜವಿದು ಕನಸಾಗಿ ಕಾಯುವೆ
ನೀ ಕೂಗಿದ ಆ ಕ್ಷಣ ನನಸಾಗಿಯೇ ಸೇರುವೆ
ಬರದಾಗಿದೆ ನನ್ನ ನೆರಳಿದು
ನಿನ್ನ ಜೊತೆಯಲ್ಲಿ ಸಾಗಿದೆ
ಮರೆಯಾಗದೆ ನನ್ನ ನೋವಿದು
ನಿನ್ನ ಬಿಸಿಯದು ತಾಗದೆ

ಅರಿವಿಲ್ಲದೆ ಶುರುವಾದಂತಿದೆ
ನನ್ನ ಎದೆಯ ಬಡಿತ
ಗುರಿ ಇಲ್ಲದೇ ಅಲೆದಾಡಿದೆ ನಿನ್ನ ಪ್ರೀತಿಯ ಸೆಳೆತ

Arivilladhe shuruvadantidhe song video :

Advertisement Advertisement

Leave a Comment

Advertisement Advertisement

Contact Us