Arivaagide song details
- Song : Arivaagide
- Singer : Karthik
- Lyrics : Kaviraj
- Movie : Buguri
- Music : Micky J Meyar
- Label : Anand audio
Arivaagide lyrics in Kannada
ಅರಿವಾಗಿದೆ ಸಾಂಗ್ ಲಿರಿಕ್ಸ್
ಅರಿವಾಗಿದೆ ಮೊದಲ ಸಲ
ಹೃದಯ ಇರೋ ವಿಷಯ
ಮರುಳಾಗಿದೆ ಮೊದಲ ಸಲ
ಮನಸೇ ಅಯೋಮಯ
ಏನಿದು ಏನಿದು ಸುಂದರ ಸುಮಧುರ ಭಾವ
ಸ್ನೇಹವೋ ಪ್ರೇಮವೋ ಹೇಳೊ ಜೀವ
ತವಕಗಳೆ ಸಿಹಿ ಪುಳಕಗಳೆ
ತುಸು ತಿಳಿಸಿ ಬಿಡಿ ಇದು ಪ್ರೀತಿನಾ
ಅಹಾ ಅಗಾದಗಳ ಇಡೀ ಜಗದಗಲ ಖುಷಿ ಅರಳುತಿದೆ
ಇದೇ ಪ್ರೀತಿನಾ
ಯಾರೊ ಬಂದು ಜೀವದ ಕೆನ್ನೆ ಹಿಂಡಿ ಹೋದ ಹಾಗಿದೆ
ಕಣ್ಣ ಮುಂದೆ ಸ್ವಪ್ನದ ಲೋಕವೊಂದು ರೂಪ ತಾಳಿದೆ
ಹೊಸ ಪರಿಚಯ ಆದರೂ ಅರೆರೆ ಹಳೆ ಜನುಮದ ನಂಟಿರುವಂತೆ
ಬೆಳೆದಿರುವುದು ಸುಂದರ ಸಲುಗೆ ಏನು ಮಾಯವೋ
ತವಕಗಳೆ ಸಿಹಿ ಪುಳಕಗಳೆ ತುಸು ತಿಳಿಸಿ ಬಿಡಿ ಇದು ಪ್ರೀತಿನಾ
ಆಹಾ ಅಗದಗಲ ಇಡೀ ಜಗದಗಲ ಖುಷಿ ಅರಳುತಿದೆ
ಇದೇ ಪ್ರೀತಿನಾ
ಮತ್ತೆ ಮತ್ತೆ ಭೇಟಿಗೆ ಬೇಡ ಈಗ ಏನು ಕಾರಣ
ಜೀವಕೇಕೆ ಹಾಕಿದೆ ಕಣ್ಣ ಮುಂದೆ ಬಂದ ತಕ್ಷಣ
ಜೊತೆ ನೆನೆಯಲು ಹೂ ಮಳೆಯೊಳಗೆ ಜೇಂಕರಿಸಿದೆ ಜೀವದ ವೀಣ
ಕಿರುಬೆರಳಿನ ಸ್ಪರ್ಶಕೆ ಮನದೆ ಕೋಟಿ ಕಂಪನ
ತವಕಗಳೆ ಸಿಹಿ ಪುಳಕಗಳೆ ತುಸು ತಿಳಿಸಿ ಬಿಡಿ ಇದು ಪ್ರೀತಿನಾ
ಆಹಾ ಅಗದಗಲ ಇಡೀ ಜಗದಗಲ ಖುಷಿ ಅರಳುತಿದೆ ಇದೇ ಪ್ರಿತಿನಾ
ತವಕಗಳೆ ಸಿಹಿ ಪುಳಕಗಳೆ ತುಸು ತಿಳಿಸಿ ಬಿಡಿ ಇದು ಪ್ರೀತಿನಾ
ಆಹಾ ಅಗದಗಲ ಇಡೀ ಜಗದಗಲ ಖುಷಿ ಅರಳುತಿದೆ ಇದೇ ಪ್ರಿತಿನಾ