Anthintha hennu naanalla lyrics ( ಕನ್ನಡ ) – Sampathige saval – Super cine lyrics

 Anthintha hennu naanalla lyrics – Sampathige saval



Anthintha hennu naanalla song details 


  • Song : Anthintha hennu naanalla
  • Movie : Sampathige saval
  • Singer : S Janaki
  • Lyricist : R N Jayagopal
  • Music : G K Venkatesh

Anthintha hennu naanalla lyrics in Kannada


ಅಂತಿಂತ ಹೆಣ್ಣುನಾನಲ್ಲ ಲಿರಿಕ್ಸ್

ಅಂತಿಂತ ಹೆಣ್ಣುನಾನಲ್ಲ 
ನನ್ನಂತ ಹೆಣ್ಣು ಯಾರು ಇಲ್ಲ
ನಾ ಬರುವ ದಾರಿ ಗೌರವ ತೋರಿ
ನಾ ಬರುವ ದಾರಿ ಗೌರವ ತೋರಿ
ಅತ್ತ ಇತ್ತ ಕೈಯ ಕಟ್ಟಿ ನಿಲ್ಲುವರೆಲ್ಲ

ಅಂತಿಂತ ಹೆಣ್ಣು ನಾನಲ್ಲ
ನನ್ನಂತ ಹೆಣ್ಣು ಯಾರು ಇಲ್ಲ

ಬುಗುರಿಯ ತರಹ ಎಲ್ಲರ ನಾನು 
ಆಡಿಸಬಲ್ಲೆ ನೋಟದಲ್ಲಿ 
ಬುಗುರಿಯ ತರಹ ಎಲ್ಲರ ನಾನು 
ಆಡಿಸಬಲ್ಲೆ ನೋಟದಲ್ಲಿ 
ಕರಿಗಿಲ್ಲೆ ತರಹ ನಡುಗುವರೆಲ್ಲಾ
ನನ್ನಯ ಮಾತಿನ ಸಾಟಿಯಲ್ಲಿ
ಸರಿಸಮ ನನ್ನ ಜೊತೆ ಯಾರಿಹರಿಲ್ಲಿ

ಅಂತಿಂತ ಹೆಣ್ಣು ನಾನಲ್ಲ
ನನ್ನಂತ ಹೆಣ್ಣು ಯಾರು ಇಲ್ಲ

ಹಣವನ್ನು ಚೆಲ್ಲಿ ಹಳ್ಳಿಯನೆಲ್ಲ
ಕೊಳ್ಳಬಲ್ಲೆ ಸುಲಭದಲ್ಲಿ 
ಹಣವನ್ನು ಚೆಲ್ಲಿ ಹಳ್ಳಿಯನೆಲ್ಲ
ಕೊಳ್ಳಬಲ್ಲೆ ಸುಲಭದಲ್ಲಿ 
ರೋಷದೆ ನಾನು ದುರ್ಗಿಯ ರೂಪ 
ನಿಲ್ಲುವರಿಲ್ಲ ಎದುರಿನಲ್ಲಿ 
ಸರಿ ಸಮ ನನ್ನ ಜೊತೆ ಯಾರಿಹರಿಲ್ಲಿ

ಅಂತಿಂತ ಹೆಣ್ಣು ನಾನಲ್ಲ
 ನನ್ನಂತ ಹೆಣ್ಣು ಯಾರು ಇಲ್ಲ 

ಗಂಡಿನ ಕೊಬ್ಬು ಇಳಿಸಲುಬಲ್ಲೆ
ಸುಲಭದಿ ಒಂದೇ ನಿಮಿಷದಲ್ಲಿ 
ಗಂಡಿನ ಕೊಬ್ಬು ಇಳಿಸಲುಬಲ್ಲೆ
ಸುಲಭದಿ ಒಂದೇ ನಿಮಿಷದಲ್ಲಿ 
ಮಣ್ಣನು ಮುಕ್ಕಿ ಕೈ ಕೈ ಹಿಸುಕು
ನಿಲ್ಲುವ ಭೂಪತಿ ಮೌನದಲ್ಲಿ 
ಸರಿ ಸಮ ನನ್ನ ಜೊತೆ ಯಾರಿಹರಿಲ್ಲಿ

ಅಂತಿಂತ ಹೆಣ್ಣು ನಾನಲ್ಲ 
ನನ್ನಂತ ಹೆಣ್ಣು ಯಾರು ಇಲ್ಲ 
ನಾ ಬರುವ ದಾರಿ ಗೌರವ ತೋರಿ
 ನಾ ಬರುವ ದಾರಿ ಗೌರವ ತೋರಿ
 ಅತ್ತ ಇತ್ತ ಕೈಯ ಕಟ್ಟಿ ನಿಲ್ಲುವರೆಲ್ಲಾ


Anthintha hennu naanalla song video : 

1 thought on “Anthintha hennu naanalla lyrics ( ಕನ್ನಡ ) – Sampathige saval – Super cine lyrics”

Leave a Comment

Contact Us