Ammana korala laaliyali – Anuradha bhat Lyrics
Singer | Anuradha bhat |
Ammana korala laaliyali song details – Chowki
▪ Film : Chowki
▪ Song: Ammana Korala Laaliyali
▪ Singer: Anuradha Bhat
▪ Lyrics: Nischal Dambekodi
▪ Music : Shakeel Ahmed
Ammana korala laaliyali song lyrics in Kannada – Chowki
ಅಮ್ಮನ ಕೊರಳ ಲಾಲಿಯಲಿ
ಚಂದಿರನ ಬೆಳದಿಂಗಳಲಿ
ಮೊದ ಮೊದಲು ನನತೂಗಿದ
ನಿದಿರೆ ಕವಿತೆ
ಮಮತೆ ಕವಿತೆ
ಮಂಜು ಮುಸುಕಿದ ಗಾಜಿನಲಿ
ಖುಷಿಯಲಿ ಬರಸಿ ಬೆರಳಿನಲಿ
ತುಂಟಾಟ ಕಲಿಸಿದ
ಮಗುವ ವರಸೆ
ನಿನದೆ ಕವಿತೆ
ಮಗುವ ವರಸೆ
ನಿನದೆ ಕವಿತೆ
ಪ್ರಿಯಹೃದಯ ನೀ ಕ್ಷೇಮವೆ
ನಿನ್ನ ನೆನಪಲೇ ನಾ ಇರುವೆ
ಹೀಗಿಂದು ನನ ಕೇಳುವಾ
ಪ್ರತಿ ಪ್ರೇಮ ಬರವಣಿಗೆಯೂ ಕವಿತೆ
ಮದರಂಗಿಯಲೂ ಶಾಯರಿ
ಸೋಬಾನೆಗೂ ನೀ ಸರಿ
ಈ ಮನದ ಸುಖ ಸಾಗರಿ
ಎಲ್ಲೆಲ್ಲೂ ನಿನದೇ ಪರಿ ಕವಿತೆ
ಸುಪ್ರಭಾತವೇ ಹಗಲಲ್ಲಿ
ಜೋಗುಳ ನೀನು ಇರುಳಿನಲಿ
ಮುಂಜಾನೆ ಮುಸ್ಸಂಜೆಗೂ
ಭಾನು ಕವಿತೆ
ಭುವಿಯು ಕವಿತೆ
ಮೈಗೆದರೋ ನವಿಲು ಗರಿ
ಹಸಿರುಟ್ಟ ಗಿರಿಯ ಸಿರಿ
ನಾ ಮುಡಿದ ಕನಕಾಂಬರಿ
ಕಾವೇರಿ ಕಾದಂಬಿನೀ ಕವಿತೆ
ಸಿಹಿ ನೀರಲಿ ಸುಳಿಗಳು
ಹೂ ಅರಳಿತು ಎನಿಸಲು
ಕಹಿ ನೋವಿನ ದಿನಗಳು
ಮಂಜಾಗಿಯೇ ಕರಗಲು ಕವಿತೆ
ನೀನೆ ಹೇಳು ಹೇಗಿರಲಿ
ಕೂಗೊ ಆಸೆ ಮನದಲ್ಲಿ
ಆಗಂತು ಕುಹೂ ಕೋಗಿಲೆ
ಕೊರತೆ ಚಿಂತೆ
ನಿನದೆ ಕವಿತೆ
ನಿದಿರೆ ಕವಿತೆ
ಮಮತೆ ಕವಿತೆ