Alubandaru – Sonu nigam Lyrics
Singer | Sonu nigam |
Alubandaru song details – Buguri
▪ Film: Buguri
▪ Song: Alubandaru
▪ Singer: Sonu Nigam
▪ Music: Micky J Meyar
▪ Lyricist: Kaviraj
Alubandaru song lyrics in Kannada – Buguri
ಅಳು ಬಂದರೂ ಅಳ ಬಾರದು
ಮನಸೇ ಇರು ತಡೆದು
ಪ್ರತಿ ಪ್ರೀತಿಗೂ ಗೆಲುವಾಗದೂ
ನಿಜವೇ ಇದೂ ಇದೂ
ಯಾರನೂ ದೂಡಲಿ
ನನ್ನದೇ ತಪ್ಪಿರುವಾಗ
ನೋಡುತಾ ನಿನ್ನಲಿ
ಹೇಗೆ ಈಗ
ಮರೆಯುವುದು ನಿನ್ನ ಮರೆಯುವುದು
ಈ ಜನುಮದಲಿ ಇದು ಸಾಧ್ಯಾನಾ
ಸಿಗದವರ ಹಿತ ಬಯಸುವುದೇ
ಶುಭ ಹರಸುವುದೇ ನಿಜ ಪ್ರೀತಿನಾ
ಯಾಕೆ ಮಾಡಿಕೊಂಡೆನಾ
ಇಂಥದೊಂದು ಆತ್ಮ ವಂಚನೆ
ನನ್ನ ಸ್ವಪ್ನ ಲೋಕಕೆ
ನಾನೆ ಬೆಂಕಿ ಹಚ್ಚಿಕುಂತೆನೆ
ಬರಿ ಮರಳಲ್ಲಿ ಗೀಚಿದ ಹೆಸರಾ
ಅಲೆ ಅಳಸಿದೆ ಒಮ್ಮೆಲೆ ಈಗ
ಅಸಹಾಯಕ ವೀಕ್ಷಕ ನಾನು
ಏನು ಮಾಡಲೀ
ಮರೆಯುವುದು ನಿನ್ನ ಮರೆಯುವುದು
ಈ ಜನುಮದಲಿ ಇದು ಸಾಧ್ಯಾನಾ
ಸಿಗದವರ ಹಿತ ಬಯಸುವುದೇ
ಶುಭ ಹರಸುವುದೇ ನಿಜ ಪ್ರೀತಿನಾ
ಇನ್ನು ಮುಂದೆ ಭೇಟಿಗೆ
ಇಲ್ಲ ಒಂದೆ ಒಂದು ಕಾರಣ
ಮಾತು ಬಂದು ಮೂಕನೇ
ಆಗಿ ಹೋದೆ ಏಕೆ ಈ ದಿನ
ಬಲು ಸನಿಹದ ಸ್ನೇಹಿತೆ ನೀನು
ಬಹು ದೂರಕೆ ಸಾಗುವೆ ಏನು
ನೀನಿರದಿರೆ ಬದುಕುವೆ ಏನು
ನಾನು ಕಾಣೆನು
ಮರೆಯುವುದು ನಿನ್ನ ಮರೆಯುವುದು
ಈ ಜನುಮದಲಿ ಇದು ಸಾಧ್ಯಾನಾ
ಸಿಗದವರ ಹಿತ ಬಯಸುವುದೇ
ಶುಭ ಹರಸುವುದೇ ನಿಜ ಪ್ರೀತಿನಾ