Akka nanna dukkhavanna lyrics ( ಕನ್ನಡ ) – Ananya bhat – Super cine lyrics

 Akka nanna dukkhavanna lyrics – Ananya bhat



Akka nanna dukkhavanna song details 

  • Song : Akka nanna dukkhavanna
  • Singer : Ananya bhat
  • Lyrics : H S Venkatesmurthy
  • Music : Sunitha ananthswamy

Akka nanna dukkhavanna lyrics in Kannada

ಅಕ್ಕ ನನ್ನ ದುಃಖವನ್ನ

ಚಳಿಯು ಕೊರೆವ ಕೋಣೆಯಲ್ಲಿ 
ಚಳಿಯ ಕೊರೆವ ಕೋಣೆಯಲ್ಲಿ 
ಚದುರಿ ಬಿದ್ದ ಮಲ್ಲಿಗೆ 
ಆ ಆ ಆ ಆ ಆ ಆ ಆ ಆ 
ಚಳಿಯು ಕೊರೆವ ಕೋಣೆಯಲ್ಲಿ
ಚದುರಿ ಬಿದ್ದ ಮಲ್ಲಿಗೆ 
ತಿರುಗಿ ನೋಡದಂತೆ ಗಾಳಿ
 ತಿರುಗಿ ನೋಡದಂತೆ ಗಾಳಿ
ಹೋಯಿತೀಗ ಎಲ್ಲಿಗೆ….. 

ಅಕ್ಕ ನನ್ನ ದುಃಖವನ್ನ
ಹೇಗೆ ಹೇಳಲಿ 
ಅಕ್ಕ ನನ್ನ ದುಃಖವನ್ನ
ಹೇಗೆ ಹೇಳಲಿ 
ಪ್ರೀತಿ ಕೊಟ್ಟ ಪಾಡ ಸಹಿಸಿ
ಹೇಗೆ ತಾನೇ ಬಾಳಲಿ
ಹೇಗೆ ತಾನೇ ಬಾಳಲಿ ॥2॥

ತಿಂಗಳಿರುಳು ಹೊರಗೆ ಬರಲು
ಬಿಸಿಲಂತೆ ಸುಡುವುದು 
ಬಳ್ಳಿಯಲ್ಲಿ ಅರಳಿ ಮಲ್ಲಿಗೆ 
ಕಂಡರೇಕೋ ನಗುವುದು॥2॥

ಕಣ್ಣಿನಲ್ಲಿ ಅಲೆಗಳುರಳಿ
ಕಣ್ಣಿನಲ್ಲಿ ಅಲೆಗಳುರಳಿ
ಅಲೆ ಅಲೆ ಅಲೆ ಅಲೆ ಅಲೆಗಳುರಳಿ
ಕಣ್ಣಿನಲ್ಲಿ ಅಲೆಗಳುರಳಿ
ಕೊರಳು ಒತ್ತುತ್ತಿರುವುದು
ಸೆರಗ ಬೇಕು ತನಗೆ ತಾನೇ 
ಸೆರಗ ಬೇಕು ತನಗೆ ತಾನೇ 
ತುಟಿಯ ಬಳಿಗೆ ಬರುವುದು
ತುಟಿಯ ಬಳಿಗೆ ಬರುವುದು

ಅಕ್ಕ ನನ್ನ ದುಃಖವನ್ನ
ಹೇಗೆ ಹೇಳಲಿ 
ಇರುಳಿನಲ್ಲಿ ನಿದ್ದೆ ಬರದೆ
ಕನಸು ಕೂಡ ಸುಳಿಯದು
ಬಾನಿನಲ್ಲಿ ಚಂದ್ರನಿಲ್ಲ
ತಾರೆಯೊಂದು ಹೊಳೆಯದು
ಇರುಳಿನಲ್ಲಿ ನಿದ್ದೆ ಬರದೆ 
ಕನಸು ಕೂಡ ಸುಳಿಯದು
ಬಾನಿನಲ್ಲಿ ಚಂದ್ರನಿಲ್ಲ
ತಾರೆಯೊಂದು ಹೊಳೆಯದು

ಮುಗಿಲು ಜಾರಿ ಹೋದಮೇಲೂ…. 
ಮುಗಿಲು ಜಾರಿ ಜಾರಿ ಜಾರಿ ಜಾರಿ ಜಾರಿ  ಹೋದಮೇಲೂ…..
ಮರದ ಕೆಳಗೆ ಮಳೆಹನಿ
ಮುಗಿಲು ಜಾರಿ ಹೋದಮೇಲೂ….
ಮರದ ಕೆಳಗೆ ಮಳೆಹನಿ
ಕಣ್ಣಿನಲ್ಲಿ ಒತ್ತುತ್ತಿರುವ
ಕಣ್ಣಿನಲ್ಲಿ ಒತ್ತುತ್ತಿರುವ
ಕರಗದಂತ ಕಂಬನಿ
ಕರಗದಂತ ಕಂಬನಿ

ಅಕ್ಕ ನನ್ನ ದುಃಖವನ್ನ
ಹೇಗೆ ಹೇಳಲಿ 
ಪ್ರೀತಿ ಕೊಟ್ಟ ಪಾಡ ಸಹಿಸಿ 
ಹೇಗೆ ಬಾಳಲಿ
ಹೇಗೆ ತಾನೇ ಬಾಳಲಿ 
ಹೇಗೆ ತಾನೇ ಬಾಳಲಿ 
ಹೇಗೆ ತಾನೇ ಬಾಳಲಿ

Akka nanna dukkhavanna Lyrics video

Leave a Comment

Contact Us