Dorakidhe avakasha lyrics ( ಕನ್ನಡ ) – O movie

Dorakidhe avakasha song details :

  • Song : Dorakidhe avakasha
  • Singer : Sanjith Hegde, Anuradha bhat
  • Lyrics : Jayanth Kaikini
  • Movie : O
  • Music : Kiran Ravindranath
  • Label : Ekaakshara films

Dorakidhe avakasha lyrics in kannada

ದೊರಕಿದೆ ಅವಕಾಶ ಸಾಂಗ್ ಲಿರಿಕ್ಸ್

ಈ ವಿಸ್ಮಯ ಅನಿರೀಕ್ಷಿತ
ಆಕರ್ಷಣೆ ಅತಿಯಾಗುತ
ಈ ಕಂಪನ ಅನಿರೀಕ್ಷಿತ
ಈ ಬಂಧನ ಬಿಗಿಯಾಗುತ
ದೊರಕಿದೆ ಅವಕಾಶ
ನನ್ನನು ಅಪಹರಿಸು

ಒಲಿಯುವೇ ನವಿರಾಗಿ
ಭಯವನು ಬದಿಗಿರಿಸು
ಮೈತುಂಬ ಮುತ್ತಿನ ಕವಿತೆ
ಬರೆದೆ ಬಿಡಲೇ
ಅಥವಾ ನಾ ಸುಮ್ಮನೆ ಕೂತು
ನಿನ್ನೇ ನೋಡಲೇ
ದೊರಕಿದೆ ಅವಕಾಶ
ನನ್ನನು ಅಪಹರಿಸು

ಕರಗುತ್ತ ಕೋಮಲ ಜೀವ
ನಿನ್ನ ಜ್ವಾಲೆಗೆ
ಕಥೆಯನ್ನು ಹೇಳಲಿ ಈಗ
ಕಣ್ಣ ಕಾಡಿಗೆ
ಇದ್ದಲ್ಲೇ ನನ್ನ ದೈವಿಕ
ನಿನ್ನಿಂದ ಇನ್ನು ರೋಚಕ….
ಕಿವಿಯಲಿ ಪಿಸು ಮಾತು
ಉಸುರಲು ತಡವರಿಸು
ದೊರಕಿದೆ ಅವಕಾಶ
ನನ್ನನು ಅಪಹರಿಸು
supercinelyics.com

ಈ ವಿಸ್ಮಯ ಅನಿರೀಕ್ಷಿತ
ಆಕರ್ಷಣೆ ಅತಿಯಾಗುತ
ಒಂದಿಷ್ಟು ಖಾಸಗಿಯಾದ
ಮೌನ ಇಲ್ಲಿದೆ
ಒಂದಾಗಿ ಹೋಗಿದೆ ಜೀವ
ಮಾತೆ ಇಲ್ಲದೆ
ಸ್ಪರ್ಶಕ್ಕೆ ದಾಹ ಉಲ್ಬಣ….
ಹರ್ಷಕ್ಕೆ ನೂರು ಸ್ಪಂದನ….
ಮಿಲನದ ಮೊರೆಯನ್ನು
ಅನುಕ್ಷಣ ಅನುಸರಿಸು
ದೊರಕಿದೆ ಅವಕಾಶ
ನನ್ನನು ಅಪಹರಿಸು

ಮೈತುಂಬ ಮುತ್ತಿನ ಕವಿತೆ
ಬರೆದೆ ಬಿಡಲೇ
ಅಥವಾ ನಾ ಸುಮ್ಮನೆ ಕೂತು
ನಿನ್ನೇ ನೋಡಲೇ
ಈ ವಿಸ್ಮಯ ಅನಿರೀಕ್ಷಿತ
ಆಕರ್ಷಣೆ ಅತಿಯಾಗುತ
ಈ ಕಂಪನ ಅನಿರೀಕ್ಷಿತ
ಈ ಬಂಧನ ಬಿಗಿಯಾಗುತ

Dorakidhe avakasha song video :

Leave a Comment

Contact Us