Helu shiva lyrics ( ಕನ್ನಡ ) – Lucia

Helu shiva song details

  • Song : Helu shiva
  • Singer : Naveen sajju , Rakshith Nagarle, Yogaraj bhat
  • Lyrics : Yogaraj bhat
  • Movie : Lucia
  • Music : Poornachandra Tejaswi S V
  • Label : Anand audio

Helu shiva lyrics in kannada

ಹೇಳು ಶಿವ
ಹೇಳು ಶಿವ
ಹೇಳು ಶಿವ ಯಾಕಿಂಗಾದೆ,
ಯಾಕಿಷ್ಟು ವೀಕಾದೆ ?
ಹೇಳು ಶಿವ ಯಾಕಿಂಗಾದೆ,
ಏನಯ್ಯ ನಿನ ಭಾದೆ

ಹೈಸ್ಕೂಲು ಪಾಸಾದೆ,
ಪ್ರೇಮದಲಿ ಫೇಲಾದೆ
ಹೈಸ್ಕೂಲು ಪಾಸಾದೆ,
ಪ್ರೇಮದಲಿ ಫೇಲಾದೆ

ಆ ನಿಮ್ಮ ಕಥೆ, ಈ ನನ್ನ ಕಥೆ…
ಎರಡರಲು ಒಂದೇ ವ್ಯಥೆ
ಎಲ್ಲಿಂದ ಹೇಳುವುದೋ,
ಶುರುವಿನಲೇ ಮುಗಿಯುವುದೋ ?
ಮುಗಿತಪ್ಪ ಅಂದುಕೊಂಡ್ರೆ ,
ಮತ್ತೆ ಶುರುವಗುವುದೋ ?

ಹೇಳು ಶಿವ ಯಾಕಿಂಗಾದೆ,
ಯಾಕಿಷ್ಟು ವೀಕಾದೆ ?
ಹೇಳು ಶಿವ ಯಾಕಿಂಗಾದೆ,
ಏನಯ್ಯ ನಿನ ಭಾದೆ

ಎದೆ ಬಾಗಿಲು ಬೆಲ್ಲು ಒತ್ತಿ,
ನಸುನಕ್ಕಿತು ಹೂವೊಂದು…
ಒಳ ಬಾರದೆ ಹೊರಟೇ ಹೋಯಿತು,
ಹಳೆ ವ್ಯಾನಿಟಿ ಬ್ಯಾಗೊಂದು..
ಅವಳ ಕಣ್ಣ ನಗುವಿನಲ್ಲೂ ಮಿನುಗುತಿತ್ತು,
ಹನಿಯೊಂದು…
ಬೆಳದಿಂಗಳ ಹೀಟಿಗೆ ಎದ್ದು ಓ..
ಹೆಟ್ಟಿತು ನಾಯೊಂದು…
ಸತ್ತ ಚಂದಮನಿಗೊಂದು ,
ಶವಪೆಟ್ಟಿಗೆ ಸಿಗಬಹುದೇ ?
ಆಟೋರಿಕ್ಷಾ ಹಿಂದೆ ಹೀಗೆ,
ಸಾಲೊಂದ ನಾ ಬರೆದೆ..

ಏನಿದೆ ಹಳೇ ಹುಡುಗಿ ಕನಸಲಿ,
ಏಳಲೇ ಶಿವ ಬೆಳಕಾಯ್ತು..
ಬ್ರಷಿಗೆ ಒಸಿ ಪೇಷ್ಟು ಹಾಕಲೇ,
ಎಣ್ಣೆಗೆ ಬಾಯ್ ಕೊಳಕಾಯ್ತು…

ಹೇಳು ಶಿವ
ಹೇಳು ಶಿವ
ಹೇಳು ಶಿವ ಯಾಕಿಂಗಾದೆ,
ಯಾಕಿಷ್ಟು ವೀಕಾದೆ ?
ಹೇಳು ಶಿವ ಯಾಕಿಂಗಾದೆ,
ಏನಯ್ಯ ನಿನ ಭಾದೆ

ನೆನ್ನೆಗಳ ಊರಿನಲ್ಲಿ,
ಹುಡುಗಿಯರ ಸಂತೆ ಇದೆ..
ಹುಡುಗಿಯರ ಸಂತೆಯಲಿ,
ನಾಳೆಗಳ ಚಿಂತೆ ಇದೆ..
ನೋಟುಬುಕ್ಕು ಕೊನೇಯ ಪೇಜು ಗೀಚಿಕೊಂಡ, ಹೆಸರುಗಳು..
ಸೆಲ್ಫೋನು ಗ್ಯಾಲೆರಿಯಲ್ಲಿ ಕೆನ್ನೆ ತೂರಿಸೋ,
ಫೋಟೋಗಳು..
ಸತ್ತ ಕನಸಿಗೇಲ್ಲೂ ನೀನು,
ನನ ಹುಡುಗಿ ಬಿಡಬಹುದು..
ತೂತು ಮಡಿಕೆಯಂಥ ಹೃದಯ,
ಏಷ್ಟು ಬೀರು ಕುಡಿಬಹುದು ?

ಹೃದಯಕೆ ಇಚ್ಚುಗಾರ್ಡು ಹಚ್ಚಲೇ
ನೆನಪು ತುಂಬಾ ಕೆರೆದಾಗ ?
ಮುಗಿವೆವು ಕೈ ನಿನ್ನಾ ಮೂತಿಗೆ,
ನಿಲ್ಸಲೇ ನಿನ್ ಹಳೆ ರಾಗ

ಹೈಸ್ಕೂಲು ಪಾಸಾದೆ,
ಪ್ರೇಮದಲಿ ಫೇಲಾದೆ…
ಹೈಸ್ಕೂಲು ಪಾಸಾದೆ …
ಓಕೆ ಶಿವ
ಸಾಕು ಶಿವ
ಟಾಟಾ ಶಿವ
ಮಲ್ಕೋ ಶಿವ

Helu shiva song video :

Leave a Comment

Contact Us