Thanuvige Thanaya Song Lyrics

Thanuvige Thanaya song details :

SongThanuvige Thanaya
SingersRatnamala Prakash
LyricsHamsalekha
LabelAnand audio

Thanuvige Thanaya song lyrics in Kannada :

ತನುವಿನ ತನಯ ಜನಿಸಿದ ಕಥೆಯಾ
ಧರಣಿಗೆ ಹೇಳೆ ಗೌರಮ್ಮಾ…
ತನುವಿನ ತನಯ ಜನಿಸಿದ ಕಥೆಯಾ
ಧರಣಿಗೆ ಹೇಳೆ ಗೌರಮ್ಮಾ…

ಧರಣಿಯು ತಾನೆ ನನ್ನ ತನುವೂ
ಅದರಲ್ಲಿ ಬಂದ ಈ ಮಗುವೂ
ಇ ಧರಣಿಯಾ ಸ್ನಾನ ಮುಗಿಯದ ಮುನ್ನ
ಪರಶಿವನೆ ಬಂದರು ಬಿಡನೂ

ತನುವಿನ ತನಯ ಆನೆಯ ತಲೆಯ
ಪಡೆದುದ ಹೇಳೆ ಗೌರಮ್ಮಾ…
ತನುವಿನ ತನಯ ಆನೆಯ ತಲೆಯ
ಪಡೆದುದ ಹೇಳೆ ಗೌರಮ್ಮಾ…

ನನ್ನನು ನೋಡಲು ಶಿವ ಬಂದಾ
ಮನೆ ಹೊರಗಿದ್ದಾ ನನ್ನ ಕಂದಾ

ಶಿವನು ನುಗ್ಗಿದ ದಾಹದಿ ಗಂಗೆ ಸೇವಿಸಲು
ಮಗನು ತಡೆದ ತಾಯಿಯ ವಾಕ್ಯ ಪಾಲಿಸಲೂ
ಉರಿಉರಿಯಾದರು ಮುಕ್ಕಣ್ಣ
ಜಗ್ಗನು ಮಣ್ಣಿನ ಇ ಚಿಣ್ಣ

ಕೋಪವೆಂದರೇನೆಂದು ದುತ್ತ ತೋರಿಸಿದಾ
ಶೂಲದಿಂದ ಬಾಲನ ಶಿರವ ಛೇಧಿಸಿದಾ
ಕರುಳಿನ ಕೂಗು ಸಿಡಿಲಾಗಿ
ಅತ್ತೆನು ನಾನು ಮಳೆಯಾಗಿ
ಒಂದು ಆನೆಯ ತಲೆಯ ಛೇದಿಸಿ ತಂದು
ಮಗನಿಗೆ ಇರಿಸಿ ಗಜಮುಖ ಎಂದನು

ತನುವಿನ ತನಯ ಶಶಿಯ ಶಪಿಸಿದ
ಕಥೆಯಾ ಹೇಳೆ ಗೌರಮ್ಮಾ
ತನುವಿನ ತನಯ ಶಶಿಯ ಶಪಿಸಿದ
ಕಥೆಯಾ ಹೇಳೆ ಗೌರಮ್ಮಾ

ಭಾದ್ರಪದಾ ಶುಕ್ಲ ಚೌತಿಯಲಿ
ಲೋಕದ ಪೂಜೆಯ ಸ್ವೀಕರಿಸಿ
ಹೊಟ್ಟೆ ಬಿರಿಯೆ ಕಡುಬುಂಡು
ಗಣಪ ತೇಗುತಲಿ
ಇಲಿಯ ಮೇಲೆ ಹೊರಹೊಂಟ
ವಾಯು ಮಾರ್ಗದಲಿ
ಮೂರ್ಛೆ ಹೋದನು ಮೂಷಿಕನು
ಸರ್ಪಗಳು ಎದುರಿಗೆ ಬರಲಾಗಿ

ಜಾರಿಬಿದ್ದ ಗಜರಾಜ ಹೊಟ್ಟೆ ಹೋಳಾಗಿ
ಲಡ್ಡು ಕಡುಬು ಹೊರಬಂತು,ಹಿಂಡು ಹಿಂಡಾಗಿ
ತುಂಬಿದ ಮತ್ತೆ ಎಲ್ಲವನು
ಹೊಟ್ಟೆಗೆ ಹಾವು ಕಟ್ಟಿದನು
ಇ ಚಿತ್ರವ ನೋಡಿ ಚಂದ್ರನು ನಗಲು
ಕ್ರಶನಾಗೆಂದು ಶಾಪವ ಕೊಟ್ಟ

ಚೌತಿಯ ದಿವಸ ಚಂದ್ರನ ನೋಡೆ
ಯಾರಿಗು ತಪ್ಪದು ಅಪವಾದ
ಸಂಕಷ್ಟಹರ ಗಣಪತಿಯನ್ನು
ನೆನೆದರೆ ನಿಂದೆ ಪರಿಹಾರ

ಹಿರಿಯರು ಮೇಲೆ ಇದ್ದಾಗ
ಕಿರಿಯರು ಜಾರಿ ಬಿದ್ದಾಗ
ಗಹಗಹಿಸಿ ನಗುವ ರೀತಿಯ ಬಿಡುವ
ನೀತಿಯು ತಾನೆ ಇ ಕಥೆಯು

ಚೌತಿಯ ದಿವಸ ಚಂದ್ರನ ನೋಡೆ
ಯಾರಿಗು ತಪ್ಪದು ಅಪವಾದ
ಸಂಕಷ್ಟಹರ ಗಣಪತಿಯನ್ನು
ನೆನೆದರೆ ನಿಂದೆ ಪರಿಹಾರ

Leave a Comment

Contact Us