Raktha sambandhagala – Karthik Lyrics
Singer | Karthik |
Raktha sambandhagala song details – Jolly days
- Song Name: RAKTHA SAMBANDHAGALA
- Singer: KARTHIK
- Lyrics: KAVIRAJ
- Film: JOLLY DAYS
Raktha sambandhagala song lyrics in Kannada – Jolly days
ರಕ್ತ ಸಂಬಂಧಗಳ, ಮೀರಿದ ಬಂಧವಿದು
ಯಾವ ಬಿಂದುವಿನಲ್ಲಿ ಸಂಧಿಸಿಹುದು
ಚಾಚಿ ತೋಳುಗಳನ್ನು ಬಿಗಿದಪ್ಪಿಕೊಳ್ಳುವುದು
ನಮ್ಮ ಪ್ರತಿ ನೋವನ್ನು, ತನ್ನದೆಂದು
ಕೈಯ್ಯ ಹಿಡಿದು ಹೆಜ್ಜೆ ಬೆಸೆದು
ಮುಂದೆ ಮುಂದೆ ನಡೆವ ಎಂದು
O my friend ಕಣ್ಣ ಕಂಬನಿಯ ಒರೆಸುವ ಸ್ನೇಹಿತ
O my friend ನಮ್ಮ ಸ್ನೇಹವಿದು, ಇರಲಿ ಶಾಶ್ವತ
ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು
ಸೇರಿಕೊಂಡು ನಮ್ಮ ದಾರಿ
ಬದುಕು ಎಷ್ಟೋ ಚಂದವೆಂದು
ಸಾರುತಿಹುದು ಸಾರಿ ಸಾರಿ
ನೀವು-ನೀವು ಅಂತ ಶುರುವಾಯ್ತು ಮೊದಲು
ಲೊ-ಲೊ ಅಂತ ಈಗ ಬದಲು
ನಮ್ಮ ನಡುವೆ ಇಲ್ಲ ಕೊಂಚ ಸಂಕೋಚವೂ
ಕೈಯ್ಯ ಹಿಡಿದು ಹೆಜ್ಜೆ ಬೆಸೆದು
ಮುಂದೆ ಮುಂದೆ ನಡೆವ ಎಂದು
O my friend ಕಣ್ಣ ಕಂಬನಿಯ ಒರೆಸುವ ಸ್ನೇಹಿತ
O my friend ನಮ್ಮ ಸ್ನೇಹವಿದು, ಇರಲಿ ಶಾಶ್ವತ
ಮಳೆಯು ಬರಲು, ಕಾದ ದಾರಿ, ದೋಣಿ ಮಾಡಿ, ಬೆಟ್ಟ ನೆನಪು
ನಿನ್ನ ಕಂಡೂ ಬಾಲ್ಯವೆಲ್ಲ ಆಟವಂತೆ ಆಡೊ ಹುರುಪು
ತುಂಟತನವು ಸೇರಿ ನಮ್ಮ ಸಂಘದಲ್ಲಿ,
ಪಟ್ಟ ಖುಷಿಗೆ, ಲೆಕ್ಕ ಎಲ್ಲಿ
ತಿಳಿಸು ಬಗೆಗೆ ಅರಿವೆ, ನಿನಗೆ ಧನ್ಯವಾದವೆ
ಕೈಯ್ಯ ಹಿಡಿದು ಹೆಜ್ಜೆ ಬೆಸೆದು
ಮುಂದೆ ಮುಂದೆ ನಡೆವ ಎಂದು
O my friend ಕಣ್ಣ ಕಂಬನಿಯ ಒರೆಸುವ ಸ್ನೇಹಿತ
O my friend ನಮ್ಮ ಸ್ನೇಹವಿದು, ಇರಲಿ ಶಾಶ್ವತ
Thanks its very helpful