Olavaagidhe song details
- Song : Olavaagidhe
- Singer : Benny Dayal, Aishwarya Rangarajan
- Lyrics : Vasuki vaibhav
- Movie : Ninna sanihake
- Music : Raghu dixit
- Label : Raghu dixit music
Olavaagidhe lyrics in kannada
ಶುರುವಾದ ಮೇಲೆ ಮಾತೊಂದು
ಬದಲಾದಂತೆ
ಕಣ್ಣಲ್ಲೇ ನೀನು ನುಡಿವಾಗ
ಒಂದಾದ ಮೇಲೆ ಮತ್ತೊಂದು
ಕನಸಾದಂತೆ
ಜೊತೆಯಲ್ಲಿ ನೀನೆ ಇರುವಾಗ
ಹೊಸದಾಗಿ ಕಂಡು ಕೊಂಡೆ
ನಿನ್ನ ಕಂಡ ಗಳಿಗೆ
ಖುಷಿಯೆಲ್ಲ ಈ ಜೀವಕ್ಕೆ
ನೀನು ಕೊಟ್ಟ ಕೊಡುಗೆ
ಅತಿಯಾದರೆ ಚೆಂದ ತಾನೇ
ಪ್ರೀತಿಯಲ್ಲಿ ಸಲಿಗೆ
ಅನುರಾಗಿ ಆಗೋ ಆಸೆ
ಸಿಕ್ಕರೆ ನೀ ಬಳಿಗೆ
ಒಲವಾಗಿದೆ..
ಅನಿವಾರ್ಯವು ಏನಿದೆ ನೀನಲ್ಲದೆ?
ಒಲವಾಗಿದೆ..
ಅರಿವಾಗಿದೆ ಎಲ್ಲವು ನಿನ್ನಿಂದಲೇ
ಶುರುವಾಗಿದೆ..
ಒಲವಾಗಿದೆ..
ಶುರುವಾಗಿದೆ..
ಒಲವಾಗಿದೆ..
ಭೂಮಿ ಆಕಾಶ ಇರುವಂತೆ ಜೊತೆ ಬಿಡದಂತೆ
ನಿನ್ನಲ್ಲೇ ನಾನು ಬೆರೆತಂತೆ
ನನಗೂನು ಈಗ ನಿನ್ನಂತೆ ನೆನಪಿರದಂತೆ
ಜಗವೆಲ್ಲ ಪೂರ ಮರೆತಂತೆ
ಇರದೇನೆ ನನಗಿನ್ನೆಲ್ಲಿ ಕಾದುವಂತ ಕನಸು
ಹುಸಿಯಾಗಿ ಮುನಿದಾಗೆಲ್ಲ ನೀನೆ ನಗುವ ಮೂಡಿಸು
ಅತಿಯಾಗಿ ಎಲ್ಲ ಮರೆತು ನನ್ನೇ ವ್ಯಮೊಹಿಸು
ಜಗವೆಲ್ಲ ಮೀರಿ ಹಾರೋ ಮಾಯೆಯನ್ನೇ ಕಳಿಸು
ಒಲವಾಗಿದೆ..
ಸಿಹಿಯಾಗಿದೆ ಲೋಕವೇ ನಿನ್ನ ತೋಳಲಿ
ಒಲವಾಗಿದೆ..
ಸುಖ ಒಂದಿದೆ ನೀನಿರೆ ನನ್ನ ಸೋಲಲಿ
ಶುರುವಾಗಿದೆ..
ಒಲವಾಗಿದೆ..
ಶುರುವಾಗಿದೆ..
ಒಲವಾಗಿದೆ..
ಹೆಸರಿಲ್ಲದ ಸಂಬಂಧ ಬಿಡುವಿಲ್ಲದ ಅನುಬಂಧ
ಬಾಳೊಂದು ದಿನವು ಅರಳೋ ಬಗೆಯ ಚೆಂದ ಚೆಂದ
ಒಂದೊಂದು ಕ್ಷಣ ಕೂಡ ಆಕರ್ಷಕವಾದಂತೆ
ಹೊಸದಾಗಿದೆ ಲೋಕವೇ ನಿನ್ನ ಛಾಯೆ ಇನ್ನು ಚಂದ
ಅಪರೂಪವಾದೆ ನೀಡಿ ಬಾಳಿಗೀಗ ನೆರಳು
ಬೆಲೆ ಎಲ್ಲಿದೆ ಯಾವುದಕಾದರು ಸೋಲದೇನೆ ಮೊದಲು?
ಒಲವಾಗಿದೆ..
ಅನಿವಾರ್ಯವು ಏನಿದೆ ನೀನಲ್ಲದೆ?
ಒಲವಾಗಿದೆ..
ಅರಿವಾಗಿದೆ ಎಲ್ಲವು ನಿನ್ನಿಂದಲೇ
ಶುರುವಾಗಿದೆ..
ಒಲವಾಗಿದೆ..
ಶುರುವಾಗಿದೆ..
ಒಲವಾಗಿದೆ..