Oh Manase manase – Karthik Sharma Lyrics
Singer | Karthik Sharma |
About the song
▪ Song: OH MANASE MANASE
▪ Singer: KARTHIK SHARMA
▪ Film: LAMBODARA
▪ Music: KARTHIK SHARMA
▪ Lyricist: HARSHA PRIYA
Lyrics
ಓ ಮನಸೇ ಮನಸೇ
ಓ ಮನಸೇ ಮನಸೇ ಮರುಗದಿರು
ನಿನ್ನೆಯ ನೆನೆದು ಕೊರಗದಿರು
ತಿಳಿಯದ ತಿರುವು ಇರುವುದು
ಗಳೆಯಾ
ಬದುಕಿನ ಮುಂದಿನ ಪಯಣದಲ್ಲಿ
ಗೆಲುವಿನ ಬರಹವೆ ಬರೆದಿರಬಹುದು
ದೇವರು ನಿನ್ನಯ ಹೆಸರಿನಲ್ಲಿ
ಅಳಿಸುವ ನೋವನು
ಅಳಿಸುವುದು ಸಮಯ
ನಗಿಸುವ ನಾಲಿಗೆ ತೆರೆದಿದು
ನೀ ಹೃದಯ
ಮನಸೇ ಮನಸೇ ಮನಸೇ
ಓ ಮನಸೇ ಮನಸೇ ಮರುಗದಿರು
ಎಡವಿದ ಭಯದಲ್ಲಿ
ನಡೆಯದೆ ಇದ್ದರೆ
ಮುಂದಿನ ದಾರಿಯು ಕಾಣಿಸದು
ನೆನಪಿನ ಮೂಟೆಯ
ಹೆಗಲಲ್ಲಿ ಹೊತ್ತರೆ
ಹಗಲಲ್ಲೂ ಕತ್ತಲೆ ಕವಿಯುವುದು
ಒಂದೇ ರಾತ್ರಿ ಸೂರ್ಯ
ಇದ್ದು ಬರುತ್ತಾನೆ ಜನಿಸಿ
ನೀನು ಅವನಾಗು ಜಯಿಸಿ
ಓ ಮನಸೇ ಮನಸೇ
ಮರುಗದಿರು
ಅಳುವಿಗೆ ನಗುವಿನ
ಪರದೆಯ ಎಳೆದು
ಚಿಗುರಿದ ಪ್ರೀತಿಯ ಚಿವುಟದಿರು
ಗುಡಿಯಲ್ಲಿ ಇಡುವ
ಪ್ರೀತಿಯ ಕೊಂದು
ವಿರಹದ ಗೋರಿಯ ಕಟ್ಟದಿರು
ತಿರು ತಿರುಗಿ ಬಂದಂತೆ
ಗಡಿಯಾರದ ಮುಳ್ಳು
ನೆನಪಾಗೊ ಪ್ರೀತಿನ
ಮರೆಯೋದೆ ಸುಳ್ಳು
ಓ ಮನಸೇ ಮನಸೇ
ಮರುಗದಿರು
ನಿನ್ನೆಯ ನೆನೆದು ಕೊರಗದಿರು