Ninne kaadide song details
- Song : Ninne kaadide
- Singer : Bro gowda , Sharon
- Lyrics : Ruthvik Krishnaa
- Music : John Kennady
- Label : Anand audio
Ninne kaadide lyrics in Kannada
ನಿನ್ನೇ ಕಾಡಿದೆ ಸಾಂಗ್ ಲಿರಿಕ್ಸ್
ಈ ಮುಸ್ಸಂಜೆಯಲಿ
ಬಳಿತರಲಿ ನೀ ಮರೆಯಾದೆ
ನೀ ತಿಳಿಗನಸಿನಲಿ ಬರೀ ಖಾಲಿ ಅರಮನೆಯಾದೆ
ಮನಸ್ಸು ನನ್ನೇ ಕಾಡಿದೆ ಕಾಡಿದೆ
ನಿನ್ನ ನೆನಪಿನ ದೋಣಿಯ ದೂಡಿದೆ
ಮನಸ್ಸಿನ ಹೂವು ಬಾಡಿದೆ ನೋಡದೆ
ಎದೆಯಲ್ಲಿ ನಿನ್ನ ಪ್ರೀತಿಯ ಗೂಡಿದೆ
ಈ ಬಿಳಿ ಹಾಳೆಯಲ್ಲಿ ಕನಸಂತೆ ನೀ ಮರೆಯಾದೆ
ಈ ಪರಿಶ್ರಾಹಿಯಲಿ ಪದದಂತೆ ನಾ ಸೆರೆಯಾದೆ
ಮನಸೀಗ ನಿನ್ನೇ ಕೇಳಿದೆ
ಪದಗಳೇ ಹೇಳದೆ
ಬದುಕಲಿ ಕಣ್ಣೀರು ತುಂಬಿ
ಕಡಲಾಗಿ ಓ ಓ ಓ
ಜೀವನ ವ್ಯಾಪಿಯಾಗಿ ಆವಿಯಾಗಿದೆ
ಕನಸಿಗೆ ಗಾಯವಾಗಿ ಮಾಯವಾಗಿದೆ
ಒಲವಿನ ಆಸೆಯು ಚೂರು
ಒಲವಿನ ನೋವಿನ ಊರು
ಸಾಗದು ಮನಸಿನ ತೇರು ಮಾತನು ಕೇಳದೆ
ಮನಸಿನ ಮೌನದಿ ಊರು
ಮನಸಿನ ಮಾತನು ಸೇರು
ಪ್ರೀತಿಯ ಬೆಂಕಿಯ ಗೀರು
ಮನವಿಯ ಮಾಡಲೇ ಓ ಓ ಓ
ದುಃಖದ ಹಾದಿಯು ಮೂಡಿದೆ ಮೂಡಿದೆ
ಭಾವನೆ ಬದುಕಿನ ಬಯಲಲ್ಲಿ ಆಡಿದೆ
ಕನಸಲಿ ಒಲವನು ನೀಡದೆ ಬೇಡಿದೆ
ಮನಸನೂ ಒಂಟಿ ಜೀವಿಯ ಮಾಡಿದೆ
ಈ ಮುಸ್ಸಂಜೆಯಲಿ
ಬಳಿತರಲಿ ನೀ ಮರೆಯಾದೆ
ನೀ ತಿಳಿಗನಸಿನಲಿ ಬರೀ ಖಾಲಿ ಅರಮನೆಯಾದೆ
ಮನಸ್ಸು ನನ್ನೇ ಕಾಡಿದೆ ಕಾಡಿದೆ
ನಿನ್ನ ನೆನಪಿನ ದೋಣಿಯ ದೂಡಿದೆ
ಮನಸ್ಸಿನ ಹೂವು ಬಾಡಿದೆ ನೋಡದೆ
ಎದೆಯಲ್ಲಿ ನಿನ್ನ ಪ್ರೀತಿಯ ಗೂಡಿದೆ
ಈ ಬಿಳಿ ಹಾಳೆಯಲ್ಲಿ ಕನಸಂತೆ ನೀ ಮರೆಯಾದೆ