Laali laali lyrics ( ಕನ್ನಡ ) – Kamblihula

Laali laali song details :

  • Song : Laali laali
  • Singer : Arfaz Ullal
  • Lyrics : Naman Gowda
  • Movie : Kamblihula
  • Music : Shiva Prasad
  • Label : Anand audio

Laali laali lyrics in kannada

ಲಾಲಿ ಲಾಲಿ ಸಾಂಗ್ ಲಿರಿಕ್ಸ್

ಹಸಿದ ಹೊಟ್ಟೆಗೆ
ತುತ್ತಿನ ಬಟ್ಟಲು ನೀನು
ನನ್ನ ನಿದ್ದೆಯ ಹೊತ್ತಿಗೆ ತೂಗುವ ತೊಟ್ಟಿಲು ನೀನು
ಚಂದ ಮಾಮನ ತೋರಿಸಿ
ಕಥೆಯ ಹೇಳಿದೆ ನೀನು
ಆ ಕಥೆಯಲಿ ಎಂದು ರಾಜಕುಮಾರನು ನಾನು
supercinelyrics.com

ನಿನ್ನ ಮಡಿಲಲಿ ನಾ ಬೆಚ್ಚಗೆ ಮಲಗಿರಲು
ಸೂರ್ಯ ಹುಟ್ಟೋದೆ ಬೇಡ ಸಾಕೆನಿಸಿತು ಒಡಲು
ಕಳೆಗಟ್ಟಿದೆ ಹಳೆ ನೆನಪಿಗೆ
ಏನೆಂದು ಹೇಳಲಿ
ಲಾಲಿ ಲಾಲಿ ಲಾಲಿ ಸುವ್ವಾಲಿ
ಜೋಗುಳ ಹಾಡಮ್ಮ
ನನ್ನ ಜನುಮ ನಿನ್ನ ಭಿಕ್ಷೆ
ಮರೆಯದಿಲ್ಲಮ್ಮ

ಲಾಲಿ ಲಾಲಿ ಲಾಲಿ ಸುವ್ವಾಲಿ
ಜೋಗುಳ ಹಾಡಮ್ಮ
ನನ್ನ ಜನುಮ ನಿನ್ನ ಭಿಕ್ಷೆ
ಮರೆಯುದಿಲ್ಲಮ್ಮ
ಬಸಿದೆ ರಕ್ತವ ಬೆವರಿನಂತೆ
ಕಂದನ ಕಣ್ಣಿಗೆ ಕಾಣದಂತೆ
ಹಗಲು ಇರುಳು ಎರಡು ಮರೆತೆ
ನೆರಳಿನಂತೆ ಜೊತೆಗೆ ನಿಂತೆ
ತಲೆಯ ಸವರಿದ ಕೈಗಳ
ತಡೆದು ನಿಲ್ಲಿಸಿ ಹೊರೆಟೆನು
ದಾರಿ ತಪ್ಪಿದ ಮಗನು ನಾನು
ನಿನ್ನ ಅರಿಯದೆ ಹೋದೆನು

ಲಾಲಿ ಲಾಲಿ ಲಾಲಿ ಸುವ್ವಾಲಿ
ಜೋಗುಳ ಹಾಡಮ್ಮ
ಹೆತ್ತ ಕರುಳ ಮರೆತ ಪಾಪಿ ನಾನಮ್ಮ
ಗುಡಿಯೊಳಗೆ ಪೂಜಿಸಲು
ಅರ್ಹಳು ನನ್ನ ತಾಯೇ
ಮನದೊಳಗೆ ಮಂದಿರವ ಕಟ್ಟಿರುವಳು ಕರುಣಮಯಿ
ನವಮಾಸ ಮಡಿಲಲ್ಲಿ
ಕಾಯುವಳು ಹೆತ್ತ ತಾಯಿ
ನೋವಲ್ಲೂ ನಗುವವಳು
ಒಬ್ಬಳೇ ಹೊತ್ತ ತಾಯೇ
supercinelyrics.com

ಜನನ ಮರಣ ಜಗದ ಸಂತೆ
ಅದಕೂ ಮೀರಿ ನೀ ಬೆಳೆದು ನಿಂತೆ
ಕರುಣೆ ಸಹನೆ ಮೂರ್ತಿಯಂತೆ
ದೇವರಿಗೂ ನೀ ಸ್ಫೂರ್ತಿಯಂತೆ
ಅದೃಷ್ಟವೋ ನನ್ನ ಪಾಲಿಗೆ
ನಿನ್ನ ಕಂದನು ನಾನಾಗಿಹೆ
ಹಾರಿ ಹೋಗಿರೋ ಹಕ್ಕಿ
ಮರಳಿ ಗೂಡು ಸೇರಲು
ಬಯಸಿದೆ

ಲಾಲಿ ಲಾಲಿ ಲಾಲಿ ಸುವ್ವಾಲಿ ಜೋಗುಳ ಹಾಡಮ್ಮ
ನನ್ನ ಜನುಮ ನಿನ್ನ ಭಿಕ್ಷೆ
ಮರೆಯದಿಲ್ಲಮ್ಮ
ಲಾಲಿ ಲಾಲಿ ಲಾಲಿ ಸುವ್ವಾಲಿ ಜೋಗುಳ ಹಾಡಮ್ಮ
ನನ್ನ ಜನುಮ ನಿನ್ನ ಭಿಕ್ಷೆ
ಮರೆಯದಿಲ್ಲಮ್ಮ
supercinelyrics.com

Laali laali song details :

Leave a Comment

Contact Us