Kamana bille song details
- Song : Kamana bille
- Singer : S P Balasubramanyam, K S Chitra
- Lyrics : K Kalyan
- Movie : Kanasugara
- Music : Rajesh Ramanath
Kamana bille lyrics in kannada
ಕಾಮನ ಬಿಲ್ಲೇ…
ಕಾಮನ ಬಿಲ್ಲೇ ಮಾತಾಡೆ
ಕಣ್ಣಲ್ಲೆ ಒಂದು ಕಾಗದ
ಬರೆಯುವೆ ಜೊತೆ ಗೂಡೆ
ಕಣ್ಣಲ್ಲೆ ಒಂದು ಕಾಗದ
ಬರೆಯುವೆ ಜೊತೆ ಗೂಡೆ
ಸ್ನೇಹದ ಅಕ್ಷರಗಳಿಗೆ
ಇಲ್ಲಿ ಪ್ರೀತಿಯ ಅರ್ಥಗಳುಂಟು
ಪ್ರೀತಿಯ ಅರ್ಥಗಳಲ್ಲಿ
ಸವಿ ಸ್ನೇಹದ ಕನಸುಗಳುಂಟು
ಎದೆಯ ಈ ಜೋಗದ ಸಿರಿಯ ಸಿರಿನೋಡೆ
ಎದೆಯ ಈ ಜೋಗದ ಸಿರಿಯ ಸಿರಿನೋಡೆ
ಕಾಮನ ಬಿಲ್ಲೇ…
ಕಾಮನ ಬಿಲ್ಲೇ ಮಾತಾಡೆ
ಮನಸಲ್ಲಿ ಒಂದು ಮಲ್ಲಿಗೆ
ಮಂಟಪವಾ ಮಾಡೆ
ಸಣ್ಣ ಸಣ್ಣ ಹೂಗಳಿಗೂ
ಬಣ್ಣ ಬಣ್ಣ ಕನಸು ಇದೆ
ಚಿಗುರು ಚಿಗುರೊ ಮುಂಚೇನೆ
ಚೈತ್ರಕೊಂದು ಬಯಕೆ ಇದೆ
ಚುಕ್ಕಿಗಳ ಕರೆದು ಅಂತರಂಗ
ತೆರೆದು ಆಸೆಗಳ ತಿಳಿಸೋಣ
ಆಸೆಗಳ ಅಳೆದು ಹೃದಯ
ತೊಳೆದು ಭಾವನೆ ಬೆಳೆಸೋಣ
ಭಾವನೆಗಳ ಮೇಲೆ ಭಾವನೆಗಳ ಬೆರೆಸಿ
ಬದುಕು ಒಂದು ಸುಂದರ
ತೋಟವ ಮಾಡೋಣ
ಕಾಮನ ಬಿಲ್ಲೇ…
ಕಾಮನ ಬಿಲ್ಲೇ ಮಾತಾಡೆ
ಕಣ್ಣಲ್ಲೆ ಒಂದು ಕಾಗದ
ಬರೆಯುವೆ ಜೊತೆ ಗೂಡೆ…
ಮೊದಲ ಮೊದಲ ಕುಡಿನೋಟ
ತೊದಲು ಮನಸ ಕೈಯಲಿದೆ
ತೊದಲ ತೊದಲ ಒಡನಾಟ
ಅದಲು ಬದಲು ಆಗಲಿದೆ
ದಿನ ಪ್ರತಿ ಘಳಿಗೆ ನಮ್ಮ ಒಳ ಹೊರಗೆ
ನಿರ್ಮಲ ಮನಸು ಇದೆ…..
ಮನಸಿನ ಕನ್ನಡಿ ಬರೆಯುವ
ಮುನ್ನುಡಿ ಬಯಸುವ ಕಣ್ಣಲಿದೆ
ನಿಮಿಷದ ಬರವಸೆಯೆ ವರುಷದ ಆನಂದ
ಬದುಕು ಒಂದು ಸುಂದರ
ತೋಟವ ಮಾಡೋಣ
ಕಾಮನ ಬಿಲ್ಲೇ
ಕಾಮನ ಬಿಲ್ಲೇ ಮಾತಾಡೆ
ಮನಸಲ್ಲೆ ಒಂದು ಮಲ್ಲಿಗೆ
ಮಂಟಪವ ಮಾಡೆ
ಮನಸಲ್ಲೆ ಒಂದು ಮಲ್ಲಿಗೆ
ಮಂಟಪವ ಮಾಡೆ
ಸ್ನೇಹದ ಅಕ್ಷರಗಳಿಗೆ
ಇಲ್ಲಿ ಪ್ರೀತಿಯ ಅರ್ಥಗಳುಂಟು
ಪ್ರೀತಿಯ ಅರ್ಥಗಳಲ್ಲಿ
ಸವಿ ಸ್ನೇಹದ ಕನಸುಗಳುಂಟು
ಎದೆಯ ಈ ಜೋಗದ ಸಿರಿಯ ಸಿರಿ ನೋಡೆ
ಎದೆಯ ಈ ಜೋಗದ ಸಿರಿಯ ಸಿರಿ ನೋಡೆ…