Kadiyalenu lyrics ( ಕನ್ನಡ ) – Girki

Kadiyalenu song details :

  • Song : Kadiyalenu
  • Singer : Chinmayi Sripada
  • Lyrics : Jayanth kaikini
  • Movie : Girki
  • Music : Veer Samarth
  • Label : A2 music

Kadiyalenu lyrics in kannada

ಕದಿಯಲೇನು ಸಾಂಗ್ ಲಿರಿಕ್ಸ್

ಕದಿಯಲೇನು ಮನದ ಮಾತು
ಹೃದಯದೀ ಕೂತು
ದೂರ ಹೇಗೆ ಇರಲಿ ನಾನು
ಸೆಳೆತಕೆ ಸೋತು
ಕಣ್ಣಮುಂದೆ ನೀನಿರೆ ಬಾಕಿ ಎಲ್ಲಾ ಮರೆಯುವೆ
ನನ್ನ ಒಂಟಿ ಕನಸಿಗೆ ನಿತ್ಯ ನಿನ್ನ ಕರೆಯುವೆ
ಬಡ ಹೃದಯಕೀಗ ಒಲವಿಗಿಂತ ಉಂಟೇ ಹೇಳು ಬೇರೆ ನಿಧಿಯು

ಕದಿಯಲೇನು ಮನದ ಮಾತು
ಹೃದಯದೀ ಕೂತು
ದೂರ ಹೇಗೆ ಇರಲಿ ನಾನು
ಸೆಳೆತಕೆ ಸೋತು
ಮೈತುಂಬಾ ಏನೋ ಮಿಂಚು
ತುಟಿಯಲ್ಲಿ ಮಂದಹಾಸ
ಇರಲಿಲ್ಲ ಏಂದೂ ಇಂತ ಜೀವಂತಿಕೆ
ನಿನ್ನನ್ನು ಬಿಟ್ಟು ಈಗ ಇನ್ನೇನು ತೋಚುತ್ತಿಲ್ಲ
ತುಂಬಾನೆ ಹಚ್ಚಿಕೊಂಡ ಈ ಜೀವಕೆ
ಹಲವು ನೆಪದಲಿ ನಿನ್ನ ಬಳಿಗೆ
ಸುಳಿವ ಬಯಕೆಯು ಹಗಲು ಇರುಳು

ಕನಸು ಮನಸಲೂ ಎಣಿಸದಿರುವ
ಮಧುರ ಅಲೆಗಳು ಮೂಡುತಿರಲು
ಬಣ್ಣಿಸು ನೀನು ರಮಿಸುವಾಗ
ಉಂಟೇ ಹೇಳು ಬೇರೆ ಖುಷಿಯು

ಕದಿಯಲೇನು ಮನದ ಮಾತು
ಹೃದಯದೀ ಕೂತು
ದೂರ ಹೇಗೆ ಇರಲಿ ನಾನು
ಸೆಳೆತಕೆ ಸೋತು
supercinelyrics.com

ಕಾಡುವ ನಿನ್ನ ಮೇಲೆ ತಕರಾರು ನೂರಾರುಂಟು
ಸಿಕ್ಕಾಗ ಎಲ್ಲಾ ಮಾಯ ತಾನಾಗಿಯೆ
ಒಂದಲ್ಲ ನೂರು ರೀತಿ ಅನುರಾಗ ತೋರು ನೀನು
ಹಾಗೆಲ್ಲ ಕೇಳೊದಿಲ್ಲ ನಾನಾಗಿಯೆ

ಈಜಲು ಬಯಸುತ ಎದೆಗೆ ಒರಗಿ
ನನ್ನ ಪಯಣವು ನಿನ್ನ ಒರಗಿ
ವರಸಿ ನನ್ನನ್ನು ಬರಲು ನೀನು
ನೋಡಿ ನಲಿಯುವೆ ನಿಂತು ಮರೆಗೆ
ಜೊತೆಗೆ ನಾವು ಕಳೆದ ಮೇಲೆ
ಉಂಟೇ ಹೇಳು ಬೇರೆ ಕಥೆಯು
ಕದಿಯಲೇನು ಮನದ ಮಾತು
ಹೃದಯದೀ ಕೂತು
ದೂರ ಹೇಗೆ ಇರಲಿ ನಾನು
ಸೆಳೆತಕೆ ಸೋತು
supercinelyrics.com

Kadiyalenu song video :

Leave a Comment

Contact Us