Doora doora dhari karedhidhe song details
- Song : Doora doora dhari karedhidhe
- Singer : Vinay K N
- Lyrics : Vishwajit rao
- Movie : Bhavachitra
- Music : Gautham Srivatsaa
Doora doora dhari karedhidhe lyrics in kannada
ದೂರ ದೂರ ಸಾಂಗ್ ಲಿರಿಕ್ಸ್
ದೂರ ದೂರ ದಾರಿ ಕರೆದಿದೆ
ಮನಸ್ಸು ಗಡಿಮೀರಿ ಹೊರಟಿದೆ
ಶುರುವಾದ ಒಂದು ಕಥೆಗೆ
ಸಿಗಬಾರದೀಗ ಕೊನೆಯು
ಗೊತ್ತಿಲ್ಲ ಗಾಳಿಗೂ ಮುಂದಿನ ಮೈಲಿಯ ಗಂಧವು
ದೂರ ದೂರ ದಾರಿ ಕರೆದಿದೆ
ಮನಸ್ಸು ಗಡಿಮೀರಿ ಹೊರಟಿದೆ
ಕಣ್ಣಲ್ಲಿರೋ ಖುಷಿ ಬಾಯಾರಿದೆ
ಮಣ್ಣಲ್ಲಿರೋ ಘಮ ಕೈಚಾಚಿದೆ
ಸಾವಿರ ಭಾವವ ಇಂಪಲ್ಲಿ ಹಡೆಯುವ
ಸಂಜೆಯು ಬಂಜೆಯಲ್ಲ
ಏಕಾಂತವೇ ಉದ್ದಾಡುವ ಭಕ್ತ ಕೂತು ತುಂಬು ನನ್ನ ಖಾಲಿಯ
ದೂರ ದೂರ ದಾರಿ ಕರೆದಿದೆ
ಮನಸ್ಸು ಗಡಿಮೀರಿ ಹೊರಟಿದೆ
ಯಾರೋ ನೀನು ಅನ್ನೋ ಹುಡುಕಾಟದ
ಆರಂಭವು ಇದು ಓ ಜಂಗಮ
ಅಲ್ಲೆಲ್ಲೂ ನಿನ್ನೆಯು ಮುಂದೆಲ್ಲೋ ನಾಳೆಯು
ಬೇಕೀಗ ಇಲ್ಲಿ ಏಕಾಂತವೇ
ಉದ್ದಾಡುವ ಭಕ್ತ ಕೂತು ತುಂಬು ನನ್ನ ಖಾಲಿಯ
ದೂರ ದೂರ ದಾರಿ ಕರೆದಿದೆ
ಮನಸ್ಸು ಗಡಿಮೀರಿ ಹೊರಟಿದೆ
ಶುರುವಾದ ಒಂದು ಕಥೆಗೆ
ಸಿಗಬಾರದೀಗ ಕೊನೆಯು
ಗೊತ್ತಿಲ್ಲ ಗಾಳಿಗೂ ಮುಂದಿನ ಮೈಲಿಯ ಗಂಧವು
ದೂರ ದೂರ ದಾರಿ ಕರೆದಿದೆ
ಮನಸ್ಸು ಗಡಿಮೀರಿ ಹೊರಟಿದೆ