Devaru bareda katheyalli lyrics – Neelakanta
Devaru bareda katheyalli song details
- Song : Devaru bareda katheyalli
- Movie : Neelakanta
- Singer : S P Balasubhramanya , Nanditha
- Lyrics : V Ravichandran
Devaru bareda katheyalli lyrics in Kannada
ದೇವರು ಬರೆದ ಕಥೆಯಲ್ಲಿ, ತಾಯಿಯ ಪ್ರೀತಿಯೆ ಮೊದಲಿಲ್ಲಿ
ಹೆತ್ತವಳು ಬರೆದ ಕಥೆಯಲ್ಲಿ,
ಕಂದನ ಪ್ರೀತಿಯೆ ಮೊದಲಿಲ್ಲಿ
ಆರಾರಿರಾರೊ ಹಾಡು,
ಪ್ರೀತಿಗೆ ಮೊದಲ ಹಾಡು
ಅಮ್ಮ ಅನ್ನೊ ಮಾತು,
ಪ್ರೀತಿಗೆ ಮೊದಲ ತುತ್ತು
ದೇವರು ಬರೆದ ಕಥೆಯಲ್ಲಿ,
ತಾಯಿಯ ಪ್ರೀತಿಯೆ ಮೊದಲಿಲ್ಲಿ
ಹೆತ್ತವಳು ಬರೆದ ಕಥೆಯಲ್ಲಿ,
ಕಂದನ ಪ್ರೀತಿಯೆ ಮೊದಲಿಲ್ಲಿ
ನೋವಿಗೆ ಮೊದಲ ಔಷದಿ,
ಅಮ್ಮ ಅನ್ನೊ ಕೂಗೆ
ಕಂದನ ಮೊದಲ ಆಸೆಗೆ,
ತಾಯಿ ನಾಂದಿಯಂತೆ
ಮೊದಲಿಗೆ ಮೊದಲಿಲ್ಲಿ,
ಈ ತಾಯಿಯೆ ಮೊದಲಿಲ್ಲಿ
ಒಂಬತ್ತಾದರು ತೊಂಬತ್ತಾದರು,
ಈ ಪ್ರೀತಿ ಬದಲಾಗದು
ಗರ್ಭದ ಗುಡಿಗಲಿ ಭಗವಂತ,
ತಾನೆ ಕುಳಿತ ಸ್ವಾರ್ಥಿ ಕಣೊ
ತಾಯಿಯು ಗರ್ಭವ ಕಂದನಿಗೆ, ಮೀಸಲು ಇಡುವ ನಿಸ್ವಾರ್ಥಿ ಕಣೊ
ಕರುಳನೆ ತೊಟ್ಟಿಲ ಮಾಡಿ,
ಕಂದನನ್ನು ತೂಗುವಳು
ಮನಸನೆ ಮೆಟ್ಟಿಲ ಮಾಡಿ,
ಕನಸನು ಜೈಸುವಳು
ಕೊನೆಗೆ ಕೊನೆಯೆಲ್ಲಿ,
ತಾಯಿ ಪ್ರೀತಿಗೆ ಕೊನೆಯೆಲ್ಲಿ
ಜೊತೆಗೆ ಇದ್ದರು ಇಲ್ಲದಿದ್ದರು,
ಈ ಪ್ರೀತಿ ಬದಲಾಗದು
ದೇವರು ಬರೆದ ಕಥೆಯಲ್ಲಿ,
ತಾಯಿಯ ಪ್ರೀತಿಯೆ ಮೊದಲಿಲ್ಲಿ
ಹೆತ್ತವಳು ಬರೆದ ಕಥೆಯಲ್ಲಿ,
ಕಂದನ ಪ್ರೀತಿಯೆ ಮೊದಲಿಲ್ಲಿ
ಆರಾರಿರಾರೊ ಹಾಡು,
ಪ್ರೀತಿಗೆ ಮೊದಲ ಹಾಡು
ಅಮ್ಮ ಅನ್ನೊ ಮಾತು,
ಪ್ರೀತಿಗೆ ಮೊದಲ ತುತ್ತು
ದೇವರು ಬರೆದ ಕಥೆಯಲ್ಲಿ,
ತಾಯಿಯ ಪ್ರೀತಿಯೆ ಮೊದಲಿಲ್ಲಿ
ಹೆತ್ತವಳು ಬರೆದ ಕಥೆಯಲ್ಲಿ,
ಕಂದನ ಪ್ರೀತಿಯೆ ಮೊದಲಿಲ್ಲಿ