Arre idu yentha bhavane song details :
- Song : Arre idu yentha bhavane
- Singer : Haricharan
- Lyrics : Yogaraj Bhat
- Movie : Hoysala
- Music : B Ajaneesh Loknath
- Label : Anand audio
Arre idu yentha bhavane lyrics in kannada :
ಅರೇ ಇದು ಎಂಥ ಭಾವನೆ
ಬರೀ ಸುಡುವಂಥ ಕಾಮನೆ
ಕೋಮಲೆ ನೀನು
ಕಳ್ಳನು ನಾನು
ವಿರಹವ ನೀನೇ
ಇಳಿಸುವೆ ಏನೇ
ನಿನ್ನಯ ರೂಪವ ಇನ್ನೆಷ್ಟು ನೋಡಲಿ
ಅರೇ ಇದು ಎಂಥ ಭಾವನೆ
ಬರೀ ಸುಡುವಂಥ ಕಾಮನೆ
ಪಿಸು ನುಡಿಯಲ್ಲೂ ಸುಖವಿದೆ ಎಂದು
ಸನಿಹ ತಿಳಿಸಿ ಹೇಳಿದೆ
ಉಸಿರಿನ ಶಾಖಾ, ತವಕದ ತೂಕಾ
ಈ ಹೃದಯ ತಡೆಯದಾಗಿದೆ
ರೂಪಸಿ ನೀನು, ರಾಕ್ಷಸ ನಾನು
ಮುತ್ತಿನ ಸೋನೆ, ಸುರಿಸುವೆ ಏನೇ
ಅಧರದ ಅಮೃತ ಈ ಪ್ರಾಣ ಉಳಿಸಲಿ
ಅರೇ ಇದು ಎಂಥ ಭಾವನೆ
ಬರೀ ಸುಡುವಂಥ ಕಾಮನೆ
ರಮಣಿಯೇ ಕೇಳು, ಧಮನಿಯ ಆಣೆ
ನೀ ನನ್ನ ಕೊನೆಯ ಆಸರೆ
ಸೆರಗಲಿ ಹೀಗೆ, ಕರಗುವ ಆಸೇ
ಬಿಡಿಸಬೇಡ ತೋಳಿನ ಸೆರೆ
ದೇವತೆ ನೀನು, ದೀನನು ನಾನು
ಒಲವಿದು ಬೇನೆ, ಔಷಧ ನೀನೆ
ಹೆರಳಿನ ನೆರಳು ತೊರೆದು ಎಲ್ಲಿ ಹೋಗಲಿ
ಅರೇ ಇದು ಎಂಥ ಭಾವನೆ
ಬರೀ ಸುಡುವಂಥ ಕಾಮನೆ