Anuraga aralo samaya song details
- Song : Anuraga aralo samaya
- Singer : Karthik
- Lyrics : Kaviraj
- Movie : Mussanje maatu
- Music : V Sridhar
- Label : Jhankar music
Anuraga aralo samaya lyrics in kannada
ಅನುರಾಗ ಅರಳೋ ಸಮಯ
ಮನಸುಗಳು ಮಾತಾಡೋ ಸಮಯ
ಅನುರಾಗ ಅರಳೋ ಸಮಯ
ಮನಸುಗಳು ಮಾತಾಡೋ ಸಮಯ
ಯಾರೋ ಯಾರ ದಾರಿಯನ್ನು ಕಾಯೋ ಸಮಯ
ಮೊಗ್ಗು ಮೆಲ್ಲ ಹಿಗ್ಗಿ ಹೂವು ಆಗೋ ಸಮಯ
ಕದ್ದು ಕೊಂಡರು ಯಾರೋ ನನ್ನ ಹೃದಯ
ಹಿಂದೆ ಎಂದು ಕಂಡೆ ಇಲ್ಲ ಇಂಥ ಖುಷಿಯ ..
ಪ್ರೀತಿನ ಇದು..
ಪ್ರೀತಿನ ಇದು…
ನನ್ನಲ್ಲೇ ನಾನೇ ಇಲ್ಲ ಈಗ
ಯಾಕೋ ಯಾಕೋ ಯಾಕೋ….
ಅನುರಾಗ ಅರಳೋ ಸಮಯ
ಮನಸುಗಳು ಮಾತಾಡೋ ಸಮಯ
ಅನುರಾಗ ಅರಳೋ ಸಮಯ
ಮನಸುಗಳು ಮಾತಾಡೋ ಸಮಯ
ಚಲಿಸೋ ಓ ಬೆಳ್ಳಿ ಮೋಡ
ಇಳಿದು ಬಾ ನಿನ್ನ ಕೂಡ
ಕುಳಿತು ಮಾತಾಡೊವಾಸೆ ಆಗಿದೆ
ಅವಳ ಅಂದಾನ ಕುರಿತೆ
ಮನಸು ಬರೆದಂತ ಗೀತೆ
ಬಳಿಗೆ ನೀ ಬಂದು ಕೇಳಬಾರದೆ
ಇನ್ನು ಎಂದು ನೆರಳ
ಹಾಗೆ ನಾನು ಇವಳ
ಜೊತೆಯಲೇ ಇರಲ
ಅನುಗಾಲ
ನಡೆ ನುಡಿ ಸರಳ
ಮೆಚ್ಚಿಕೊಂಡೆ ಬಹಳ
ನನಗೆ ಅಂತ ಹುಟ್ಟಿ ಬಂದ ತಾರೆ ಇವಳ
ಪ್ರೀತಿನ ಇದು..
ಪ್ರೀತಿನ ಇದು…
ನನ್ನಲ್ಲೇ ನಾನೇ ಇಲ್ಲ ಈಗ
ಯಾಕೋ ಯಾಕೋ ಯಾಕೋ….
ನಮ್ಮ ಈ ಪುಟ್ಟ ಗೂಡು
ಇಲ್ಲಿ ಪ್ರೀತಿಯ ಹಾಡು
ಗುನುಗೋ ಈ ಸಮಯ ಹೀಗೆ ಇರಲಿ
ಜೊತೆಗೆ ನಡೆವಾಗ ಹೀಗೆ
ಬಾಳು ಒಂದಾದ ಹಾಗೆ
ಅನಿಸೋ ಈ ಸಮಯ ಎಂದು ಸಿಗಲಿ
ಮಾತು ಮರೆತು ಹೋಗಿದೆ
ಮನಸು ಕಳೆದು ಹೋಗಿದೆ
ಕಂಗಳಂತೆ ನೋಡಲು
ಹೃದಯ ಕಲೆಯಬಾರದೆ
ನಿನ್ನ ನಾನು ನೋಡದೆ
ಒಂದು ಕ್ಷಣ ಜಾರದೆ
ಸಮಯ ಮೀರಿ ಹೋಗೊ ಮುನ್ನ ಹೇಳು ಆಸೆಯಾ…
ಪ್ರೀತಿನ ಇದು..
ಪ್ರೀತಿನ ಇದು…
ನನ್ನಲ್ಲೇ ನಾನೇ ಇಲ್ಲ ಈಗ
ಯಾಕೋ ಯಾಕೋ ಯಾಕೋ….