Usira thanthiye song details
- Song : Usira thanthiye
- Singer : Siddharth belamannu
- Lyrics : Shashank
- Movie : Thayige thakka maga
- Music : Judah Sandhy
- Label : Anand audio
Usira thanthiye lyrics in Kannada
ಉಸಿರ ತಂತಿಯೆ ಲಿರಿಕ್ಸ್
ಉಸಿರ ತಂತಿಯೆ ನೀನು ತಾನೆ
ಮುರಿದು ಹೋದರೆ ಬದುಕಿನ್ನೇನೆ?
ಎದೆಯ ಕೋಣೆ ನಿಂದು ತಾನೆ
ಮುಚ್ಚಿ ಹೋದರೆ ಬೆಳಕಿನ್ನೇನೆ?
ನನ್ನೊಲವೆ ನನ್ನೊಲವೆ ಹೀಗೇಕೆ ಕಾಡುತಿರುವೆ
ತಂಪೆರೆದೆ ನನ್ನೆದೆಗೆ ನೀನೇಕೆ ಬೆಂಕಿ ಸುರಿವೆ
ನೆಮ್ಮದಿಯೆ ನೆಮ್ಮದಿಯೆ ನೀನಲ್ಲವೆ ನನ್ನ ಮನಕೆ
ಗೊತ್ತಿದ್ದರೂ ಇನ್ನೇತಕೆ ನೀ ದೂರ ಹೋಗುತಿರುವೆ
ಉಸಿರ ತಂತಿಯೆ ನೀನು ತಾನೆ
ಮುರಿದು ಹೋದರೆ ಬದುಕಿನ್ನೇನೆ?
ಬಾಯಾರಿದ ಈ ಜೀವಕೆ ಬೇಕು ನೀನು
ಈ ನೋವಿನ ಪುರಾವೆಯೆ ಸಾಕಲ್ಲವೇನು
ಸಾಕಾಗಿದೆ ಒಂಟಿತನ ನೀಡು ಸಾಂತ್ವನ
ಅಪೂರ್ಣವೂ ನೀನಿಲ್ಲದೆ ನನ್ನೀ ಜೀವನ
ನಿಟ್ಟುಸಿರ ಬೇಗೆಯಲ್ಲಿ ಬೇಯುತಿದೆ ನನ್ನ ಹೃದಯ
ಕಾರಣವ ಮುಂದಿಡದೆ ನೀ ಬಂದು ಸೇರಿ ಬಿಡೆಯಾ
ಕಣ್ಣಲಿಯು ಕಾಯುತಿದೆ ನೀ ಬರುವ ದಾರಿಯನ್ನೇ
ಕಣ್ಣೀರಿಗೆ ವಿದಾಯವ ನೀ ಹೇಳೊ ವೇಳೆ ಅನ್ನೇ
ಉಸಿರ ತಂತಿಯೆ ನೀನು ತಾನೆ
ಮುರಿದು ಹೋದರೆ ಬದುಕಿನ್ನೇನೆ?
ಎದೆಯ ಕೋಣೆ ನಿಂದು ತಾನೆ ಮುಚ್ಚಿ ಹೋದರೆ ಬದುಕಿನ್ನೇನೆ?