Upavasa e kannige lyrics ( ಕನ್ನಡ ) – Mr and Mrs Ramachari – Super cine lyrics

Upavasa e kannige – Sonu nigam , Shreya goshal Lyrics

Singer Sonu nigam , Shreya goshal

Upavasa e kannige song details – Mr and Mrs Ramachari

▪ Song – Upavasa
▪ Movie – Mr & Mrs Ramachari
▪ Singer – Sonu Nigam & Shreyas Ghoshal
▪ Music – V Harikrishna
▪ Lyrics – Ghouse Peer

Upavasa e kannige song lyrics in Kannada – Mr and Mrs Ramachari

ಉಪವಾಸ ಈ ಕಣ್ಣಿಗೆ
ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ ಈಗ ಅರೆಗಳಿಗೆ
ದೂರ ನೀ ನಿಂತರೆ
ಪ್ರೀತಿ ಅಂದರೆ ಇಂತ ತೊಂದರೆ
ತೀರ ಸಹಜ ಬಿಡು
ನನ್ನಲ್ಲು ಹೀಗೆ ಆಗಿದೆ ಏನು ಮಾಡೋದು
ಎಲ್ಲಿ ಹೋದರು ಎಲ್ಲಿ ಬಂದರು
ನಿನ್ನದೆ ಅಮಲು
ವಿರಾಮ ನೀಡುತಿಲ್ಲ ಯಾರಿಗೆ ಹೇಳುವುದು

ಉಪವಾಸ ಈ ಕಣ್ಣಿಗೆ
ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ
ಈಗ ಅರೆಗಳಿಗೆ
ದೂರ ನೀ ನಿಂತರೆ

ಸೇರು ನನ್ನ ತೋಳಿಗೆ
ಚಿಂತೆ ತೂರಿ ಗಾಳಿಗೆ
ನನ್ನ ನೆರಳಿಗೆ ಈಗ
ನಿನ್ನ ನೆರಳು ಅಂಟಿರಬೇಕು
ಕೈಯ ಬೆರಳಿಗೆ ಬೇಗ
ನಿನ್ನ ಮುಂಗುರುಳು ಸಿಗಬೇಕು
ಪ್ರಣಯದ ಪಯಣವಿದು
ನಿನ್ನಿಂದಲೆ ಆರಂಭ
ನಿಂತಲೆ ಕರಗುತ
ನಾ ನೀರಾಗೊ ಸಂದರ್ಭ
ನೀ ನನ್ನವಳೆಂಬುವ ಹಂಸ ಸಾಕು
ಹೃದಯಕೆ ಒಳ ಜಂಭ
ಹೇಗೆ ಮೂಡಿತು ಹೇಗೆ ಮಾಡಿತು ಹುಚ್ಚು ಪ್ರೀತಿ ಇದು
ನನ್ನಲಿ ನಾನೆ ಇಲ್ಲ ಎಲ್ಲಿ ಹುಡುಕುವುದು

ಮಾತು ಮಾತಿಗು ನಿನ್ನ ಸೆಳೆತವೆ
ಜೀವ ಹಿಂಡಿರಲು
ನಿನ್ನಿಂದ ತುಂಬಾ ಕಷ್ಟ
ದೂರ ಉಳಿಯುವುದು

ಉಪವಾಸ ಈ ಕಣ್ಣಿಗೆ
ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ ಈಗ ಅರೆಗಳಿಗೆ
ದೂರ ನೀ ನಿಂತರೆ

ರಬದ ರಬದ ದಿಲ್ರುಬಾ ತು ಮೇರಿ ತು ಮೇರಿ ಜಾನ್
ರಬದ ರಬದ ದಿಲ್ರುಬಾ ತು ಮೇರಿ ತು ಮೇರಿ ಜಾನ್
ತು ಹೇ ಮೇರಾ ರಸತ ತು ತು ಹೇ ಮೇರಿ ಜಾನ್

ಒಂಟಿ ಅಲ್ಲ ನಾ ಎಂದಿಗೂ
ಇನ್ನೂ ಮುಂದೆ ಈ ಬಾಳಲಿ
ತುಂಬಾ ಮುದ್ದು ಮಾಡೊ ಒಂದು ಜೀವ ಈಗ ಸ್ವಂತ
ತಲುಪೆ ಬಿಟ್ಟೆ ನಾನು
ದಾರಿಯಲಿ ತೇಲೊ ಹಂತ

ಇದು ಬಹು ಜನುಮಗಳ ಅನುಬಂಧವೆ ಸರಿ
ಪ್ರತಿ ಜನುಮಕೂ ಹೀಗೆ ನೀ ನೀಡುವ ಜಗಿ
ನವಿಲಾದ ಪ್ರತಿ ಸಾಲನು
ಹಣೆಯಲ್ಲಿ ನೀನು ಬರಿ
ನೀನು ಇಲ್ಲದೆ ನಾನು ಇರುವುದು ಯಾವ ಸುಖಕಾಗಿ
ಪ್ರೀತಿಸು ಇಂದು ಹೀಗೆ ಲೋಕ ಮರೆತೋಗಿ
ಏನೆ ಆಗಲಿ ಏನೆ ಹೋಗಲಿ ನನ್ನ ಹೃದಯವಿದು
ನಿನ್ನದೆ ಇಲ್ಲ ಸಂಶಯ ನಾನು ನಿನಗಾಗಿ

ಉಪವಾಸ ಈ ಕಣ್ಣಿಗೆ
ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ ಈಗ ಅರೆಗಳಿಗೆ
ದೂರ ನೀ ನಿಂತರೆ

Leave a Comment

Contact Us