The sound of chaos song details
- Song : The sound of chaos
- Singer : Raghu Dixit
- Lyrics : Vasuki Vaibhav
- Movie : Ninna sanihake
- Music : Raghu Dixit
The sound of chaos lyrics in Kannada
ಯಾರೂ ಯಾರೂ
ನಾನ್ ಯಾರು
ಈ ನಶೆಯು
ಹೇಳಿದೇ ಪತ್ತೆಯಾ
ಬದುಕೆ ನಿನಗೊಂದು ವಿದಾಯ
ಬಡಿಯೋ ಈ ಮನಸ್ಸು ಮೃಘೀಯ
ಪ್ರೀತಿ ಗೀತಿ ವ್ಯರ್ಥ ಪೂರ
ಲೋಕವೆಲ್ಲ ಕ್ರೂರ!!
ಹೇ!! ಉರಿವ ಗಾಯ ಹೀರಿದಂತ
ರಕುತ ಲೆಕ್ಕವಿಲ್ಲ
ಹೊತ್ತಿ ಉರಿವ ಚಿತೆಯು
ಎಂದು ಬೆಳಗೊ ದೀಪವಲ್ಲ
ಹರಿತವಾದ ಕತ್ತಿ ಮಾಡದೆಂದು ಒಳ್ಳೆದನ್ನ
ಹೆಪ್ಪುಗಟ್ಟಿದಂತ ನೆನಪು ಕೂಡ ಕಪ್ಪು ಬಣ್ಣ
ಯಾಕೆ ಯಾಕೆ
ಮೋಹಕ್ಕೆ ಮನ ಸೋಲೋದು
ಜೋಕೇ ಜೋಕೇ
ಪ್ರೀತೀನೆ ನಂಜಾಗೋದು
ಏಯ್!! ನಂಬೋದು ಬೇಡ
ಸಾಯೋದು ಬೇಡ
ಮುಳ್ಳಾಗೋ ಪ್ರೀತಿಯಂತು ಬೇಡ
ಬೇಡ ಏನು ಬೇಡ
ಕತ್ತಲೆ ಸತ್ಯವು ಇನ್ನೆಂದಿಗೂನು
ಬೆಳಕಿದು ಮೋಸಗಾರ
ನಶೆ ಇದು ಶಾಶ್ವತ
ಹೀಗಾದರೂನೂ ಬದುಕನು
ಸರಿಸು ದೂರ
ಕತ್ತಲೆ ಸತ್ಯವು ಇನ್ನೆಂದಿಗೂನು
ಬೆಳಕಿದು ಮೋಸಗಾರ
ನಶೆ ಇದು ಶಾಶ್ವತ
ಹೀಗಾದರೂನೂ ಬದುಕನು
ಸರಿಸು ದೂರ
ಏ!! ಇಂದಿಗೂ ಇಲ್ಲ ನಾಳೆಗೂ
ಮುಚ್ಚಿ ಹೋಗುವಂತ ಹಾಳು ಬಾಳು ನಮ್ಮದು
ಕೆಟ್ಟದು ಒಳ್ಳೆದು
ಅಂತೇನು ಇಲ್ಲ ಎಲ್ಲ ಸುಳ್ಳು
ನಾವೆ ಮಾಡಿಕೊಂಡಿರೋದು