Thamnam thamnam song details
- Song : Thamnam thamnam
- Singers : Shaan , Shreya goshal
- Lyrics : Chi. udayashankar
- Movie : Abhinetri
- Music : Manomurthy
Thamnam thamnam lyrics in Kannada
ತಂನಂ ತಂನಂ ಲಿರಿಕ್ಸ್
ತಂನಂ ತಂನಂ ನನ್ನೀ ಮನಸು ಮಿಡಿಯುತಿದೆ ಓ ಸೋತಿದೆ
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ
ಗಲ್ ಗಲ್ ಗಲ್ ಗಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೆ
ತಂನಂ ತಂನಂ ಎಂದಿದೆ
ಗಲ್ ಗಲ್ ಗಲ್ ಗಲ್ ತಾಳಕೆ
ತಂನಂ ತಂನಂ ಎಂದಿದೆ
ತಂನಂ ತಂನಂ ನನ್ನೀ ಮನಸೂ ಮಿಡಿಯುತಿದೆ
ಓ ಸೋತಿದೆ
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ
ಗಲ್ ಗಲ್ ಗಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೆ
ತಂನಂ ತಂನಂ ಎಂದಿದೆ
ಗಲ್ ಗಲ್ ಗಲ್ ತಾಳಕೆ
ತಂನಂ ತಂನಂ ಎಂದಿದೆ
ನೀ ಸನಿಹಕೆ ಬಂದರೆ ತನುವಿದು
ನಡುಗುತಿದೆ ಏತಕೆ, ಎದೆ ಜಲ್ ಎಂದಿದೆ ಹಾ
ನೀ ಸನಿಹಕೆ ಬಂದರೆ ತನುವಿದು
ನಡುಗುತಿದೆ ಏತಕೆ, ಎದೆ ಜಲ್ ಎಂದಿದೆ
ಆಹಾ
ಒಲಿದಿಹ ಜೀವವು ಬೆರೆಯಲು
ಮನ ಹೂವಾಗಿ ತನು ಕೆಂಪಾಗಿ ನಿನ್ನ ಕಾಡಿದೆ
ತಂನಂ ತಂನಂ ನನ್ನೀ ಮನಸೂ ಮಿಡಿಯುತಿದೆ
ಹಾ ಆಹಾಹಾ
ನೀ ನಡೆಯುವ ಹಾದಿಗೆ ಹೂವಿನ ಹಾಸಿಗೆಯ ಹಾಸುವೆ, ಕೈ ಹಿಡಿದು ನಡೆಸುವೆ ಆಹಾ
ನೀ ನಡೆಯುವ ಹಾದಿಗೆ ಹೂವಿನ
ಹಾಸಿಗೆಯ ಹಾಸುವೆ, ಕೈ ಹಿಡಿದು
ನಡೆಸುವೆ ಆಹಾ
ಮೆಲ್ಲಗೆ ನಲ್ಲನೆ ನಡೆಸು ಬಾ
ಎಂದು ಹೀಗೆ ಇರುವ ಆಸೆ ನನ್ನೀ ಮನಸಿಗೆ
ತಂನಂ ತಂನಂ ನನ್ನೀ ಮನಸೂ ಮಿಡಿಯುತಿದೆ ಓ ಸೋತಿದೆ
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ
ಗಲ್ ಗಲ್ ಗಲ್ ಗಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೆ
ತಂನಂ ತಂನಂ ಎಂದಿದೆ
ಗಲ್ ಗಲ್ ಗಲ್ ತಾಳಕೆ
ತಂನಂ ತಂನಂ ಎಂದಿದೆ