Saaguva daariyalli lyrics ( ಕನ್ನಡ ) – Kalyan Manjunath – Super cine lyrics

 Saaguva daariyalli lyrics – Kalyan Manjunath



Saaguva daariyalli song details 

  • Song : Saaguva daariyalli
  • Singer : Kalyan Manjunath
  • Lyrics : Pattabhi
  • Music : Jen martin
  • Label : Anand audio

Saaguva daariyalli lyrics in Kannada

ಸಾಗುವ ದಾರಿಯಲ್ಲಿ 

ಒಲವಿನ ತೇರಲ್ಲಿ
ಉತ್ಸವ ಸಾಗಲಿ
ಮನಸ್ಸಿನ ಊರಲಿ ಮಳೆಹನಿ ಚೆಲ್ಲಲಿ
ಕಣ್ಣಿನ ಅಂಚಲಿ
ಪ್ರೀತಿಯು ಮೂಡಲಿ
ನನ್ನಯ ಲೋಕವು ನಿನ್ನದೆ ಆಗಲಿ
(music) 

ಮಿಂಚಿನಂತೆ ಮಾಯವಾದೆ
ಸಣ್ಣ ಸುಳಿವು ಹೇಳದೆ
ಹೊಂಚು ಹಾಕಿ ನನ್ನ ಕೊಂದೆ
ಮನಸ್ಸಿಗಿಲ್ಲಾ ದೀವಿಗೆ

ಒಂದು ಬಾರಿ ಹೋದ ಸಮಯ
ಮತ್ತೆ ಎಂದೂ ಬಾರದು
ಒಡೆದ ಹೃದಯದಲ್ಲಿ ಈಗ 
ನಿನ್ನ ಹೆಸರು ಕೇಳದು
ಮೋಸದಿಂದ ಸೋತ ಪ್ರೀತಿ ಎಂದೂ ನನ್ನ ಕಾಡದು
ಮತ್ತೇ ಮತ್ತೇ ನಿನ್ನ ಹೆಸರು 
ಮನಸ್ಸೂ ಎಂದೂ ಹೇಳದು
ಸಾಗೊ ದಾರಿಯಲ್ಲಿ ಕೂಡ 
ನಿನ್ನ ನೆರಳು ಕಾಡದು
ಸಾವು ನೋವಿನಲ್ಲೂ ನಿನ್ನ ನೆನಪು ನನಗೆ ತಾಕದು
ಇನ್ನೂ ನಿನ್ನ ಕೂಡ ಕಣ್ಣಿನಿಂದ ಜಾರದು
ಇನ್ನೂ ಮುಂದೆ ನಿನ್ನ ಹಿಂದೆ ಮನಸ್ಸು ಎಂದೂ ಹೋಗದು

ಸಾಗುವ ದಾರಿಯಲ್ಲಿ ಕೋಟಿ ಕನಸಿದೆ
ನಿನ್ನ ನಗುವಲ್ಲಿ ನನ್ನ ಉಸಿರಿದೆ
ಭಾವನೆಯ ನಡುವಲ್ಲಿ ಬಂಧವೂ ಮೂಡಿದೆ
ಬೇರೆ ಆಗದ ಪ್ರೀತಿಯು ನಮ್ಮದೆ
ನಮ್ಮದೆ ನಮ್ಮದೆ
ಪ್ರೀತಿಯು ನಮ್ಮದೆ
ನಮ್ಮದೆ ನಮ್ಮದೆ
ಪ್ರೀತಿಯು ನಮ್ಮದೆ
ನಮ್ಮದೆ ನಮ್ಮದೆ

ಮಿಂಚಿನಂತೆ ಮಾಯವಾದೆ
ಸಣ್ಣ ಸುಳಿವು ಹೇಳದೆ
ಹೊಂಚು ಹಾಕಿ ನನ್ನ ಕೊಂದೆ
ಮನಸಿಗಿಲ್ಲಾ ದೀವಿಗೆ

ಒಲವಿನ ತೇರಲ್ಲಿ
ಉತ್ಸವ ಸಾಗಲಿ
ಮನಸ್ಸಿನ ಊರಲಿ
ಮಳೆಹನಿ ಜಿನುಗಲಿ
ಕಣ್ಣಿನ ಅಂಚಲಿ
ಪ್ರೀತಿಯೂ ಮೂಡಲಿ
ನನ್ನಯ ಲೋಕವು
ನಿನ್ನದೆ ಆಗಲಿ
ಈ ಪ್ರೀತಿ ಮಾತಲ್ಲಿ 
ಈ ನನ್ನ ಬಾಳಲ್ಲಿ 
ಜೊತೆಯಾಗಿ ನೀ ನಿಲ್ಲು ಬಾ 
ಈ ರೀತಿ ನನ್ನಲ್ಲಿ 
ನಿನ್ನ ಕಣ್ಣಲ್ಲಿ
ನೀ ಪ್ರೀತಿ ಮಾಡು ಬಾ

ಸಾಗುವ ದಾರಿಯಲ್ಲಿ ಕೋಟಿ ಕನಸಿದೆ
ನಿನ್ನ ನಗುವಲ್ಲಿ ನನ್ನ ಉಸಿರಿದೆ
ಭಾವನೆಯ ನಡುವಲ್ಲಿ 
ಬಂಧವು ಮೂಡಿದೆ 
ಬೇರೆ ಆಗದ ಪ್ರೀತಿಯು ನಮ್ಮದೆ 
ನಮ್ಮದೆ ನಮ್ಮದೆ 
ಪ್ರೀತಿಯು ನಮ್ಮದೆ 
ನಮ್ಮದೆ ನಮ್ಮದೆ 
ಪ್ರೀತಿಯು ನಮ್ಮದೆ 
ನಮ್ಮದೆ ನಮ್ಮದೆ

Saaguva daariyalli lyrics video : 

Leave a Comment

Contact Us