Payana saagali song details
- Song : Payana saagali
- Singer’s : Siddharth belmannu , Ajay warriar ,Shruti Tumkur
- Lyrics : Kaviraj
- Music : Gurukiran
- Movie : Aayushmanbhava
Payana saagali lyrics in Kannada
ಪಯಣ ಸಾಗಲಿ ಲಿರಿಕ್ಸ್
ಪಯಣ ಸಾಗಲಿ
ಚಲನೆ ಭೂಮಿಯ ನಿಯಮ
ಪಯಣ ಸಾಗಲಿ
ಛಲವೆ ಗೆಲ್ಲುವ ನಿಯಮ
ಗಗನ ನಿನ್ನದು
ಭುವನ ನಿನ್ನದು
ಇಲ್ಲಿ ಹಾರಾಡಲು ಭಯವೂ ಸಲ್ಲದು
ನೀನೆ ನೀನೆ ಅತ್ಯುತ್ತಮ
ನಿನಗ್ಯಾರು ಸಮ
ಪಯಣ ಸಾಗಲಿ
ಚಲನೆ ಭೂಮಿಯ ನಿಯಮ
ಬೆಂಕಿ ಧ್ವಗಿಸುವುದು
ಗಾಳಿ ಬೀಸುವುದು
ಅದರ ಸಹಜ ಗುಣ
ಏಳು ಬೀಳುಗಳ ದಾಟಿ ಗೆಲ್ಲುವುದು
ಮನುಜ ನಿನ್ನ ಗುಣ
ಭೂಮಿ ಸುತ್ತುವುದು
ಕಾಲ ಸರಿಯುವುದು
ನಿತ್ಯ ಆವರ್ತನ
ಇಂದು ನಾಳೆಯಲು ಬಂಧಿ ತೀರುವುದು
ನೀನು ಗೆಲ್ಲೋ ಕ್ಷಣ
ಕೋಪ ನೀರಾಗು
ಸಿಡಿಲು ಚೂರಾಗು
ಸುಡುವ ಕಿಡಿಯಾಗು ಧಗಧಗನೆ
ಅಖಿಲ ನೀನಾಗು
ಕಿರಣ ನೀನಾಗು
ಬೆಳಕು ಬರಲಿ
ಕಗ್ಗತ್ತಲ ಎದೆಯ ಸೀಳುತ
ಪಯಣ ಸಾಗಲಿ
ಛಲವೆ ಗೆಲ್ಲುವ ನಿಯಮ
ಗಗನ ನಿನ್ನದು
ಭುವನ ನಿನ್ನದು
ಇಲ್ಲಿ ಹಾರಾಡಲು ಭಯವೂ ಸಲ್ಲದು
ನೀನೆ ನೀನೆ ಅತ್ಯುತ್ತಮ
ನಿನಗ್ಯಾರು ಸಮ
(music)
ಪಯಣ………