Olithu madu manusa lyrics ( ಕನ್ನಡ ) – C Ashwath – super cine lyrics

Olithu madu manusa – C Ashwath Lyrics

Singer C Ashwath

About the song

▪ Song: Olithu Maadu Manusa
▪ Album : Marubhoomi
▪ Singer: C.Ashwath
▪ Music Director: Sri Madhura
▪ Lyricist: Rushi
▪ Music Label : Lahari Music

Olithu madu manusa lyrics

ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ
ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ
ಉಸಿರು ನಿಂತ ಮೇಲೆ ನಿನ್ನ ಹೆಸರು ಹೇಳುತಾರ
ಉಸಿರು ನಿಂತ ಮೇಲೆ ನಿನ್ನ ಹೆಸರು ಹೇಳುತಾರ
ಹೆಣ ಅನ್ನುತಾರ ಮಣ್ಣಾಗ ಹೂಳುತಾರ
ಚಟ್ಟ ಕಟ್ಟುತಾರ ನಿನ್ನ ಸುಟ್ಟು ಹಾಕುತಾರ
ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ ||ಒಳಿತು||

ಮೂರು ದಿನದ ಸಂತೆ ನಗುನಗುತಾ ಮಾಡಬೇಕು
ದ್ವೇಷವೆಂಬ ಕಂತೆ ನೀ ಸುಟ್ಟು ಹಾಕಬೇಕು
ಮೂರು ದಿನದ ಸಂತೆ ನಗುನಗುತಾ ಮಾಡಬೇಕು
ದ್ವೇಷವೆಂಬ ಕಂತೆ ನೀ ಸುಟ್ಟು ಹಾಕಬೇಕು
ಪ್ರೀತಿ ಪ್ರೇಮ ಹಂಚಿ ನೀ ಹೋಗಬೇಕು ಅಲ್ಲಿ
ಸತ್ತ ಮೇಲೂ ನಿನಗೆ ಹೆಸರು ಉಂಟು ಇಲ್ಲಿ
ಪ್ರೀತಿ ಪ್ರೇಮ ಹಂಚಿ ನೀ ಹೋಗಬೇಕು ಅಲ್ಲಿ
ಸತ್ತ ಮೇಲೂ ನಿನಗೆ ಹೆಸರು ಉಂಟು ಇಲ್ಲಿ
ಭೂಮಿಯಲ್ಲಿರೋದು ಬಾಡಿಗೆ ಮನೆಯಾಗೆ
ಮೇಲೆ ಹೋಗಬೇಕು ನಮ್ಮ ಸ್ವಂತ ಮನೆಗೆ
ಬರಲು ಏನು ತಂದೆ ಬರದು ಏನು ಹಿಂದೆ
ಏ…..….. ||ಒಳಿತು||

ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಜನಕ
ಇಲ್ಲೆ ಕಾಣಬೇಕು ಉಸಿರಿರೋ ಕೊನೆತನಕ
ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಜನಕ
ಇಲ್ಲೆ ಕಾಣಬೇಕು ಉಸಿರಿರೋ ಕೊನೆತನಕ
ನಾನು ನಾನು ಎಂದು ಮೆರೆಯಬ್ಯಾಡ ಮೂಡ
ನಾನು ಎಂಬುದು ಮಣ್ಣು ಮರೆತು ಹೋಗಬೇಡ
ನಾನು ನಾನು ಎಂದು ಮೆರೆಯಬ್ಯಾಡ ಮೂಡ
ನಾನು ಎಂಬುದು ಮಣ್ಣು ಮರೆತು ಹೋಗಬೇಡ
ದ್ವೇಷವೆಂಬ ವಿಷವ ಸುರಿಯಬೆಡ ಮೂಡ
ಪ್ರೀತಿ ಅಮೃತವ ಒಮ್ಮೆ ಸವಿದು ನೋಡ
ಅದೇ ಸ್ವರ್ಗ ಕೇಳ ಮನುಜನಾಗಿ ಬಾಳ
ಏ…..….. ||ಒಳಿತು||

Leave a Comment

Contact Us