Ninna onde notakke song details
- Song : Ninna onde notakke
- Singer : Santhosh Venky
- Lyrics : Santhosh Venky
- Movie : Iravan
- Music : S Pradeep Varma
- Label : Anand audio
Ninna onde notakke lyrics in kannada
ನಿನ್ನ ಒಂದೇ ನೋಟಕ್ಕೆ ಸಾಂಗ್ ಲಿರಿಕ್ಸ್
ನಿನ್ನ ಒಂದೇ ನೋಟಕ್ಕೆ
ಬಿದ್ದೆ ಅಲ್ಲೆ ನಲ್ಲೆ
ಹಾಗೊ ಹೀಗೋ ಸುಮ್ಮನೆ
ಬಾಳೋ ಆಸೆ ನಂಗೆ
ನೀ ಕಾಣದ ಹಾಗೇನೆ
ನಾ ಪ್ರೀತಿ ಮಾಡಿದೇನೆ
ಕೇಳು ಒಮ್ಮೆ ಚಿನ್ನ
ನಾ ಕೊಡುವೆ ನನ್ನ ಜೀವ
ನಗುವೆ ಆಹಾ ಸುಂದರ
ನಿನ್ನ ಕಣ್ಣು ಚಂದಿರ
ನಿನ್ನ ನಡಿಗೆ ನಡುವ ನೋಡಿ
ನನ್ನೆ ಮರೆತೆ
ಓ ನಿನ್ನ ಒಂದೇ ನೋಟಕ್ಕೆ
ಬಿದ್ದೆ ಅಲ್ಲೆ ನಲ್ಲೆ
ನನ್ನ ಉಸಿರು ನಿನ್ನ ಹೆಸರ
ಗುನುಗುವಂತೆ ಮನಸಾಯ್ತು
ನಿನ್ನ ಪ್ರೀತಿ ಕಾಡಿ ಬೇಡಿ
ಪಡೆಯೋ ಬಯಕೆ ಶುರುವಾಯ್ತು
ಎಲ್ಲೂ ನೋಡಿಲ್ಲ
ನಿನ್ನಂತ ಅಂದ
ನಾನಾದೆ ಈಗ ಕವಿರತ್ನ ಕಾಳಿದಾಸ
ನಿನದೇ ನಿನದೇ ಭಜನೆಯ ಮನದೊಳಗೆ
ಇದೇ ನಿನ್ನ ಒಂದೇ ನೋಟಕ್ಕೆ
ಬಿದ್ದೆ ಅಲ್ಲೆ ನಲ್ಲೆ
ನಿನ್ನ ಕಂಡು ಅರಳೊ ಮರಳೊ
ನನ್ನಲು ಸರಿಯೇನಾ
ಸ್ವರ್ಗದಿಂದ ಜಾರಿಬಂದ ರೆಂಬೆ ಊರ್ವಶಿ ನೀನೆನಾ
ಆ ಬ್ರಹ್ಮ ಬರೆದ ಅಧ್ಬುತ ಗ್ರಂಥ
ನಿನ್ನಂದ ಚಂದ ಹೊಗಳೋಕೆ ಅಂತ ತಂದ
ನಿಜವ ಬ್ರಮೆಯ ಬಂದು ಕೂಡ ತಿಳಿಯದೇ ಈಗ
ನಿನ್ನ ಒಂದೇ ನೋಟಕ್ಕೆ
ಬಿದ್ದೆ ಅಲ್ಲೆ ನಲ್ಲೆ
ಹಾಗೊ ಹೀಗೋ ಸುಮ್ಮನೆ
ಬಾಳೋ ಆಸೆ ನಂಗೆ