Neenilladhe nanagenide lyrics ( ಕನ್ನಡ ) – Super cine lyrics

Neenilladhe nanagenide – Mangala ravi Lyrics

Singer Mangala ravi

Neenilladhe nanagenide song details

▪ Song: Neenilladhe
▪ Album : Mumbaiyiyalli C Ashwath – Live Program
▪ Singer: Mangala Ravi
▪ Music Director: C.Ashwath
▪ Lyricist: M N Vyasa Rao
▪ Music Label : Lahari Music

Neenilladhe nanagenide song lyrics in Kannada

ನೀನಿಲ್ಲದೆ ನನಗೇನಿದೆ.
ಮನಸೆಲ್ಲ ನಿನ್ನಲ್ಲೆ ನೆಲೆಯಾಗಿದೆ, ಕನಸೆಲ್ಲ ಕಣ್ಣಲ್ಲೆ ಸೆರೆಯಾಗಿದೆ.
ನೀನಿಲ್ಲದೆ ನನಗೇನಿದೆ.

ನಿನಗಾಗಿ ಕಾದು ಕಾದು, ಪರಿತಪಿಸಿ ನೊಂದೆ ನಾನು
ಕಹಿಯಾದ ವಿರಹದ ನೋವು ಹಗಲಿರುಳು ತಂದೆ ನೀನು
ಎದೆಯಾಸೆ ಏನೋ ಎಂದು ನೀ ಕಾಣದಾದೆ
ನಿಶೆಯೊಂದೆ ನನ್ನಲ್ಲಿ ನೀ ತುಂಬಿದೆ
ಬೆಳಕೊಂದೆ ನಿನ್ನಿಂದ ನಾ ಬಯಸಿದೆ ||೧||

ಒಲವೆಂಬ ಕಿರಣ ಬೀರಿ, ಒಳಗಿರುವ ಬಣ್ಣ ತೆರೆಸಿ
ಒಣಗಿರುವ ಎದೆನೆಲದಲ್ಲಿ ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದ ನಾ ತಾಳುವೆ
ಹೊಸ ಲೋಕ ನಿನ್ನಿಂದ ನಾ ಕಾಣುವೆ ||೨||

ನೀನಿಲ್ಲದೆ ನನಗೇನಿದೆ
ಮನಸೆಲ್ಲ ನಿನ್ನಲ್ಲೆ ನೆಲೆಯಾಗಿದೆ,
ಕನಸೆಲ್ಲ ಕಣ್ಣಲ್ಲೆ ಸೆರೆಯಾಗಿದೆ.

Leave a Comment

Contact Us