Nadheem dheem song details
- Song : Nadheem dheem
- Singer : Chitra
- Lyrics : Jayanth kaikini, Yogaraj bhat, Hrudaya Shiva
- Movie : Gaalipata
- Music : V Harikrishna
- Label : Anand audio
Nadheem dheem lyrics in kannada
ನಧೀಮ್ ಧೀಮ್ ತನ ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ
ನಧೀಮ್ ಧೀಮ್ ತನ ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ
ತಾಕಿಟ ತರಿಕಿಟ ಎನ್ನುತಿದೆ ಈ ಹೃದಯ ಮೃದಂಗ
ಸುಂದರ ಮಾನಸ ಸರೋವರದಲಿ ಪ್ರೇಮ ತರಂಗ
ಈ ಕಣ್ಣಿನ ಕವನ ಓದೊ ಓ ಹುಡುಗ
ನಧೀಮ್ ಧೀಮ್ ತನ ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ
ಮೊದಲ ಹೆಜ್ಜೆಗೆ ಎನೊ ಕಂಪನ ಏನೀ ರೋಮಾಂಚನ
ಪ್ರೇಮದ ಸರಿಗಮ ಸ್ವರ ತಾಳದ ಕೊಳದಲ್ಲಿ
ಹಾಡುತ ತೇಲಾಡುತ ಜ್ವರವೇರಿಸು ಮಳೆಯಲ್ಲಿ
ಒಂದೂರಲ್ಲಿ ರಾಜ ರಾಣಿ ನೂರು ಮಕ್ಕಳ ಹೆತ್ತ ಕಥೆಗೆ
ದುಂಡು ಮುಖದ ರಾಜಕುಮಾರ ಕೋಟೆ ದಾಟಿ ಬಂದ ಕಥೆಗೆ
ನಾಯಕ ನೀನೇ, ಆ ಚಂದಮಾಮ ಕಥೆಗೆ ನಾಯಕಿ ನಾ
ನಧೀಮ್ ಧೀಮ್ ತನ ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ
ಮೊದಲ ಹೆಜ್ಜೆಗೆ ಎನೊ ಕಂಪನ ಏನೀ ರೋಮಾಂಚನ
ಸುಮ್ಮನೆ ತಿಳಿ ತಿಳಿ ನಾನಾಡದ ಪದಗಳನು
ಸೋಲುವೆ ಪ್ರತಿ ಕ್ಷಣ ನನ್ನ ಮನದಲೆ ನಾನು
ನಿದ್ದೆ ಬರದ ಕಣ್ಣಾ ಮೇಲೆ ಕೈಯಾ ಮುಗಿವೆ ಚುಂಬಿಸು ಒಮ್ಮೆ
ನಾನೆ ನಾಚಿ ನಡುಗೊ ವೇಳೆ ಮಲ್ಲೆ ಹೂವ ಮುಡಿಸೊ ಒಮ್ಮೆ
ನಾನು ಭೂಮಿ ಆವರಿಸು ಸುರಿವ ಮಳೆಯಂತೆ ನನ್ನ
ನಧೀಮ್ ಧೀಮ್ ತನ ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ
ತಾಕಿಟ ತರಿಕಿಟ ಎನ್ನುತಿದೆ ಈ ಹೃದಯ ಮೃದಂಗ
ಸುಂದರ ಮಾನಸ ಸರೋವರದಲಿ ಪ್ರೇಮ ತರಂಗ
ಈ ಕಣ್ಣಿನ ಕವನ ಓದೊ ಓ ಹುಡುಗ