Moolimani muddesa song details
- Song : Moolimani muddesa
- Singer : Anthony dasan
- Lyrics : Pramod Maravanthe
- Movie : Inspector Vikram
- Music : J Anoop Seelin
- Label : Anand audio
Moolimani muddesa lyrics in Kannada
ಮೂಲಿಮನಿ ಮುದ್ದೇಸ
ಮಾಡ್ತಾನ್ ನೋಡ ಹಗಲ್ಯಾಸ..
ತ್ವಾಟದ್ ಮನಿ ಮೊಟಮ್ಮಂಗು
ಕಿತ್ತಾಡದ ಹವ್ಯಾಸ..
ಜಡೆ ಜಡೆ ಹೊಡ್ದಡದ
ನೋಡದಕ್ಕ ಚಂದ ಅಹ!
ಮೀಸೆ ಜಡೆ ಗುದ್ದಾಡುದ್ರೆ
ಊರಿಗೆಲ್ಲ ಹಬ್ಬ ಅಹ!
ಹಿಂದಕ್ಕ ಮುಂದಕ್ಕ ಎಳೆದಾಡಿ
ಹೋಗ ಇವ್ನ!
ಮೂಲಿಮನಿ ಮುದ್ದೇಸ
ಮಾಡ್ತಾನ್ ನೋಡ ಹಗಲ್ಯಾಸ..
ಮುದ್ದನೆ ಮೈಯಿ ಮುದ್ದಾಗಿರುವ
ಸುಕುಮಾರನೆ..
ಬೆಳ್ಳಕ್ಕಿ ಹಂಗ ಹೊಂಚ ಹಾಕೋ
ಸುಕುಮಾರಿಯೇ..
ಸುಕು ಸುಕು ಸುಕು ಮಾರ ಮಾರ..
ಸುಕು ಸುಕು ಸುಕು ಮಾರಿ ಮಾರಿ..
ಮಾರ ಮಾರಿ.. ಮಾರ ಮಾರಿ..
ಮಾರ ಮಾರಿಯೇ..
ಘಾಟಿ ಮೆಣಸು ಬರೋಭಾರಿ
ಖಾರ ಇರ್ತದ
ಹೆಣ್ಣು ಅಂದ್ರ ಮೈಯಗ್ ಕೊಬ್ಬು
ಇರ್ಬೇಕಾಗ್ತದ
ಹಾವಿಗೂ ಮುಂಗುಸಿಗು ಪ್ರೀತಿ
ಬಾಳ ಕಷ್ಟ ಐತಿ
ಕಾಂಗ್ರೆಸ್ ಬಿಜೆಪಿ ದೋಸ್ತಿ
ಆಗ್ಲಿಕಾಗ್ತದ?
ಎಡಕ ಬಲಕ ಜಗ್ಗ್ಯಾಡಿ
ಹೋಗ ಇವ್ಳ..
ಮೂಲಿಮನಿ ಮುದ್ದೇಸ
ಮಾಡ್ತಾನ್ ನೋಡ ಹಗಲ್ಯಾಸ..
ತ್ವಾಟದ್ ಮನಿ ಮೊಟಮ್ಮಂಗು
ಕಿತ್ತಾಡದ ಹವ್ಯಾಸ..
ಗಂಡು ಹೆಣ್ಣು ಸಂಧಿ ಮೂಲ್ಯಗ್
ಪ್ರೀತಿ ಮಾಡ್ತಾರ
ಜಗಳ ಮಾತ್ರ ಊರ ಮುಂದ
ಬಂದು ಆಡ್ತಾರ
ಟಾಮ್ & ಜೆರೀ ಸೇರಿ
ಪಾರ್ಟಿ ಮಾಡ್ಯಾರೆನ್ರಿ?
ಸಿಗಲೇ ಬೇಕ್ರಿ ವೈರಿ
ಬೆಳಿಯೋ ದಾರ್ಯಾಗ
ಮ್ಯಾಲಕ ಕೆಳಕ ಪರದಾಡಿ
ಹೋಗ ಇವ್ನ!
ಮೂಲಿಮನಿ ಮುದ್ದೇಸ
ಮಾಡ್ತಾನ್ ನೋಡ ಹಗಲ್ಯಾಸ..
ತ್ವಾಟದ್ ಮನಿ ಮೊಟಮ್ಮಂಗು
ಕಿತ್ತಾಡದ ಹವ್ಯಾಸ..