Madarangiyalli song details :
- Song : Madarangiyalli
- Singer : Rajesh Krishnan, Shreya Ghoshal
- Lyrics : Jayanth Kaikini
- Movie : Milana
- Music : Mano Murthy
- Label : Anand audio
Madarangiyalli lyrics in kannada
ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ…
ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ…
ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ….
ಬನ್ನಿ ಕುಣಿಯೋಣ ಎಲ್ಲ ಸೇರಿ ನಲಿಯೋಣ ಶುಭ ಕೋರಿ
ಉಲ್ಲಾಸದಲ್ಲಿ ಈ ದಿನ…
ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜೊತೆಗೂಡಿ
ಎಲ್ಲೆಲ್ಲು ತಳಿರು ತೋರಣ…
ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ..
ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ..
ಆಟದ ಬಯಲಿನ ಆಟವ ತೊರೆದು
ನೂತನ ಪುಟವನು ತೆರೆಯುವ ಸಮಯ
ಕಳಶದ ಕನ್ನಡಿ ಹೊಳೆಯುತಲಿರಲು
ಮಮತೆಯ ಧಾರೆಯ ಎರೆಯುವ ಸಮಯ
ಕೈಯಲಿರಲು ಹೂಮಾಲೆ ಕಣ್ಣಿನಲ್ಲಿ ಪ್ರಾಣ
ತೆರೆಯೊಂದು ಸರಿದಾಗ ಸಂಜೀವನ…..
ಅಕ್ಷತೆಯು ಈಗ ನಾಚುತ ಕೆಂಪಗಾಗಿದೆ
ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ
supercinelyrics.com
ಮಳೆಬಿಸಿಲಿರಲಿ ಸಿಹಿ ಕಹಿ ಇರಲಿ
ಆಸರೆಯಾಗುವ ವಚನದ ಸಮಯ
ಮಂಗಳ ಸೂತ್ರದಿ ಬಾಳಿನ ಪಟವು
ಬಾನಿಗೆ ಏರುವ ಪಯಣದ ಸಮಯ
ಅಗ್ನಿ ಸಾಕ್ಷಿಯಲ್ಲೀಗ ಅಂತರಂಗ ಮಿಲನ
ಚೆಲುವಿನ ಔತಣದ ಸಮ್ಮಿಲನ….
ಪಲ್ಲಕ್ಕಿಯಿಂದು ಹಾರುವ ಹಕ್ಕಿಯಾಗಿದೆ
ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ
ಬನ್ನಿ ಕುಣಿಯೋಣ ಎಲ್ಲ ಸೇರಿ ನಲಿಯೋಣ ಶುಭ ಕೋರಿ
ಉಲ್ಲಾಸದಲ್ಲಿ ಈ ದಿನ…
ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜೊತೆಗೂಡಿ
ಎಲ್ಲೆಲ್ಲು ತಳಿರು ತೋರಣ…
ಬಲಗಾಲನಿಟ್ಟು ಬಾಳಿಂದು ಒಳಗೆ ಬಂದಿದೆ….
ಮನದಂಗಳದಲ್ಲಿ ಪ್ರೀತಿಯ ದೀಪ ಬೆಳಗಿದೆ….