Kunidu kunidu baare – Udit Narayan , Sunidhi Chauhan , Stefen Lyrics
Singer | Udit Narayan , Sunidhi Chauhan , Stefen |
Kunidu kunidu baare song details
▪ Song: KUNNIDU KUNNIDU BAARE
▪ Singer: UDIT NARAYAN, SUNIDHI CHAUHAN, STEFEN
▪ Lyricist: JAYANTH KAIKINI
▪ Film: MUNGARU MALE
▪ Music: MANO MURTHY
Kunidu kunidu baare song lyrics in Kannada
ಕುಣಿದು ಕುಣಿದು ಬಾರೆ ಒಲಿದು ಒಲಿದು ಬಾರೆ
ಕುಣಿವ ನಿನ್ನ ಮೇಲೆ ಮಳೆಯ ಹನಿಯ ಮಾಲೆ
ಜೀವಕೆ ಜೀವ ತಂದವಳೇ ಜೀವಕ್ಕಿಂತ ಸನಿಹ ಬಾರೆ
ಒಲವೆ ವಿಸ್ಮಯ ಒಲವೆ ವಿಸ್ಮಯ ನಿನ್ನ ಪ್ರೇಮ ರೂಪ ಕಂಡು ನಾನು ತನ್ಮಯ
ಹುಚ್ಚು ಹುಡುಗ ನೀನು ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ ಬಾನಿಗೇರಿ ಹಾರುವ ಬಾರ ಒಲವೆ ವಿಸ್ಮಯ………
ಇರುಳಲ್ಲಿ ನೀನೆಲ್ಲೋ ಮೈ ಮುರಿದರೆ ನನಗಿಲ್ಲಿ ನವಿರಾದ ಹೂ ಕಂಪನ
ಕಣ್ಣಲ್ಲಿ ನೀ ಕಣ್ಣಿಟ್ಟು ಬರಸೆಳೆದರೆ ಮಾತಿಲ್ಲ ಕತೆಯಿಲ್ಲ ಬರಿ ರೋಮಾಂಚನ
ನಿನ್ನ ಕಣ್ಣ ತುಂಬಾ ಇರಲಿ ನನ್ನ ಬಿಂಬ
ಹೂವಿಗ ಬಣ್ಣ ತಂದವನೆ ಪರಿಮಳದಲ್ಲಿ ಅರಳುವ ಬಾರೊ ಒಲವೆ ವಿಸ್ಮಯ…….
ಒಲವೆ ನೀನೊಲಿದ ಕ್ಷಣದಿಂದಲೆ ಈ ಭೂಮಿ ಈ ಬಾನು ಹೊಸದಾಗಿದೆ
ಖುಷಿಯಿಂದ ಈ ಮನವೆಲ್ಲ ಹೂವಾಗಿರೆ ಬೇರೇನು ಬೇಕಿಲ್ಲ ನೀನಲ್ಲದೆ
ಕುಣಿದು ಕುಣಿದು ಬಾರೆ ಒಲಿದು ಒಲಿದು ಬಾರೆ
ಕುಣಿವ ನಿನ್ನ ಮೇಲೆ ಮಳೆಯ ಹನಿಯ ಮಾಲೆ ……