Koti pallavi haaduva lyrics ( ಕನ್ನಡ ) – Kanasugara – Super cine lyrics

 Koti pallavi haaduva lyrics – Kanasugara



Koti pallavi haaduva song details 


  • Song : Koti pallavi haaduva
  • Singer : K S Chitra
  • Lyrics : K Kalyan
  • Movie : Kanasugara

Koti pallavi haaduva lyrics in Kannada 


ಕೋಟಿ ಪಲ್ಲವಿ ಹಾಡುವ ಲಿರಿಕ್ಸ್

ಕೋಟಿ ಪಲ್ಲವಿ ಹಾಡುವ
 ಕನಸೋ ಇದು 
ಕನಸುಗಾರನ ಕಣ್ಣಿನ ಬೆಳಕು ಇದು 
ಈ ಯವ್ವನ ತುಂಬಿದ ಬದುಕಿನಲ್ಲಿ 
ದಿನ ಬೆಳ್ಳಿ ಹಬ್ಬದ ನಗುರಿನಲಿ(2)

ಒಂದೇ ಇಬ್ಬನಿ ಒಳಗೆ ಕೋಟಿ ಸೂರ್ಯನು ಬಿಂಬವಿದೆ
ಒಂದೇ ಕೊರಳಿನ ಧ್ವನಿಗೆ ಕೋಟಿ ಹೃದಯದ ಸ್ಪರ್ಶವಿದೆ

ಕೋಟಿ ಪಲ್ಲವಿ ಹಾಡುವ 
ಕನಸೋ ಇದು 
ಕನಸುಗಾರನ ಕಣ್ಣಿನ ಬೆಳಕು ಇದು 
ಮನಸ್ಸು ಮರೆತು ಹಾಡಿದರೆ ಸ್ವರ್ಗಗಳೆ ಇಂಚರ
ಮೈಯ ಮರೆತು ಹಾಡಿದರೆ ಪದಗಳೇ ಪಂಜರ 
ಕೋಗಿಲೆಗಳ ಗುಂಪಲ್ಲಿ ಹುಟ್ಟೋ ಗುಬ್ಬಿಯ ಮಾತುಗಳು 
ಪ್ರತಿ ಕವಿಗಳ ಕಿವಿಗಳ ಸೇರಿ ಮೂಡಿತು ಸಾಲುಗಳು 
ಏಳು ಸ್ವರ್ಗಗಳೆ ನಮ್ಮ ಏಳು ಜನುಮಗಳು
ಧಮನಿ ಧಮನಿಗೆ ಸರಾಗ ಮದನೀಯ ಮೀಟೊ ತಂತಿಗಳು

ಕೋಟಿ ಪಲ್ಲವಿ ಹಾಡುವ ಕನಸೋ ಇದು 
ಕನಸುಗಾರನ ಕಣ್ಣಿನ ಬೆಳಕು ಇದು 

ನೂರು ನೂರು ತಿರುವುಗಳು ಬದುಕಿನ ದಾರಿಗೆ 
ಯಾರೊ ದಾರಿದೀಪಗಳು ಅವರವರ ಪಾಲಿಗೆ 
ಭರವಸೆಯಲ್ಲಿ ನಡೆಯುವ ನೀತಿ ತುಂಬಿದೆ ಎದೆಯಲ್ಲಿ 
ಬಯಸುವ ಪ್ರತಿ ನಿಮಿಷವು ಸ್ಪೂರ್ತಿ ದೇವರೆ ನಮಗಿಲ್ಲಿ
ಏಳು ಸ್ವರಗಳೆ ನಮ್ಮ ಏಳು ಲೋಕಗಳು 
ಸ್ವರಗಳ ತೊಟ್ಟಿಲ ತೂಗುವ ಕೈಯಲ್ಲಿ ಉಂಗುರ ನಾವುಗಳು 

ಕೋಟಿ ಪಲ್ಲವಿ ಹಾಡುವ ಕನಸೋ ಇದು 
ಕನಸುಗಾರನ ಕಣ್ಣಿನ ಬೆಳಕು ಇದು 

ಈ ಯವ್ವನ ತುಂಬಿದ ಬದುಕಿನಲ್ಲಿ ದಿನ ಬೆಳ್ಳಿ ಹಬ್ಬದ ನಗುರಿನಲ್ಲಿ(2)

ಒಂದೇ ಇಬ್ಬನಿ ಒಳಗೆ ಕೋಟಿ ಸೂರ್ಯನ ಬಿಂಬವಿದೆ
ಒಂದೇ ಕೊರಳಿನ ಧ್ವನಿಗೆ ಕೋಟಿ ಹೃದಯದ ಸ್ಪರ್ಶವಿದೆ.. 

ಲಾಲಾಲಾ…


Koti pallavi haaduva song video : 

Leave a Comment

Contact Us