Kavithe Kavithe – Rajesh Krishnan Lyrics
Singer | Rajesh Krishnan |
Kavithe kavithe song details – Chowki
▪ Film : Chowki
▪ Song: Kavithe Kavithe
▪ Singer: Rajesh Krishnan
▪ Lyrics : Vijesh Devadiga Mangaladevi, Nischal Dambekodi
▪ Music : Shakeel Ahmed
Kavithe Kavithe song lyrics in Kannada – Chowki
ಕನಸು ಒಂದು ಕಂಡಾಗ
ಮಾತುಗಳು ಮರೆತಾಗ
ನಾನಾಗ ಬರುಯುವೆನು
ಕವಿತೆ ಕವಿತೆ…
ಕವಿತೆ ಕವಿತೆ..
ನನ್ನೆ ನಾನು ಕಳೆದಾಗ
ಕುಡಿನೋಟ ಸೆಳೆದಾಗ
ನಾನಾಗ ಬರುಯುವೆನು
ಕವಿತೆ ಕವಿತೆ..
ಕವಿತೆ ಕವಿತೆ..
ಕವಿತೆ ಕವಿತೆ..
ಹೆಸರೆ ಕವಿತೆ..
ಮನಮಿಡಿದು ನಲಿವಾಗ
ಸಂತಸದಿ ನಗುವಾಗ
ತನು ನೊಂದು ಮೈ ಸುಡುವಾಗ
ಬರೆಯುವೆನು ಕವಿತೆ
ಧ್ವನಿಯೊಂದು ಸುಳಿವಾಗ
ಏಕಾಂತ ಖುಷಿ ತರುವಾಗ
ಕಣ್ಣೀರ ಹರಿ ಸುರಿವಾಗ
ಬರೆಯುವೆನು ಕವಿತೆ
ನನ್ನೆ ನಾನು ತಿಳಿದಾಗ
ಲೋಕವೆಲ್ಲಾ ಮರೆತಾಗ
ನಾನಾಗ ಬರುಯುವೆನು
ಕವಿತೆ ಕವಿತೆ..
ಉಸಿರೆ ಕವಿತೆ..
ಹನಿಯೊಂದು ಸುರಿವಾಗ
ಕೊಡೆಯಿರದೆ ನಡೆವಾಗ
ಅನುರಾಗ ನೆನಪಾದಾಗ
ಹಾಡುವುದೆ ಕವಿತೆ
ಬಿಳಿಹಾಳೆ ದೊರೆತಾಗ
ಲೇಖನಿಯ ಹಿಡಿದಾಗ
ನಿಶಬ್ದ ಮಾತಾದಾಗ
ಗೀಚುವದೆ ಕವಿತೆ
ಕವಿಯ ಹೃದಯಕ್ಕಿಳಿದಾಗ
ಸಾಗರ ಸಾಲೆಲ್ಲವು
ಕವಿತೆ ಕವಿತೆ..
ಒಲವೆ ಕವಿತೆ..
ಕವಿತೆ ಕವಿತೆ..
ಒಲವೆ ಕವಿತೆ..