Karagida baninalli – Sowmya rao Lyrics
Singer | Sowmya rao |
KARAGIDA BAANINALLI SONG DETAILS
▪ Movie : Simpallaag Ond Love Story
▪ Song: Karagida Baaninalli
▪ Singer: Sowmya Rao
▪ Starring : Rakshith Shetty, Shwetha
▪ Lyric :Prakash Srinivas
▪ Music : Bharath B J
▪ Label : Jhankar Music
KARAGIDA BAANINALLI SONG LYRICS IN KANNADA – SIMPALLAAG OND LOVE STORY
ಕರಗಿದ ಬಾನಿನಲ್ಲಿ ಮೂಡಿ ಬಾ ನೀ ಚಂದಿರ
ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ
ಬಾಡಿದ ಈ ಮನ, ಬಯಸೊ ಹುಡುಗನು ನೀನಾ
ಅರಳುವ ಈ ಮನ, ಮೊಗ್ಗಾದೆ ನಾ…
ಕಾಡು ಮಳೆಯನು, ಮಳೆಯ ನೆನಪನು, ನೆನಪ ಹಸಿವನು ಮರೆಸು ಬಾ
ಸಿಗುವ ಒಲವನು, ಒಲವ ಕನಸನು, ಕನಸ ಉಡುಪನು ತೊಡಿಸು ಬಾ
ಕರಗಿದ ಬಾನಿನಲ್ಲಿ ಮೂಡಿ ಬಾ ನೀ ಚಂದಿರ
ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ
ನೆರಳಿನ ನೆನಪನೆ ಹೋಲುವ ಗೆಳೆಯನೆ
ಬೆಳಗಿದೆ ಬದುಕನೆ ಮೂಡಿಸಿ ಕಲ್ಪನೆ
ನೀರ ಒಳಗೆ ಅಳುವ ಮೀನು ನಾ, ಹನಿಯ ಒರೆಸೊ ಬೆರಳು ನೀನೆ ನಾ
ನಲುಗಿ ಬಾಡೋ ಹೂವು ನಾನಾದೆ, ಮೆಲ್ಲ ಒಳಗೆ ನುಸುಳಿ ನೀ ಬಂದೆ
ಹಗಲ ಶಶಿಯು ನೀನಾದೆಯ
ಕಾಡು ಮಳೆಯನು, ಮಳೆಯ ನೆನಪನು, ನೆನಪ ಹಸಿವನು ಮರೆಸು ಬಾ
ಸಿಗುವ ಒಲವನು ಒಲವ ಕನಸನು, ಕನಸ ಉಡುಪನು ತೊಡಿಸು ಬಾ
ಕರಗಿದ ಬಾನಿನಲ್ಲಿ ಮೂಡಿ ಬಾ ನೀ ಚಂದಿರ
ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ
ಚದುರಿದ ಮೋಡವ ಕೂಡಿಸೋ ಬಿಂದುವೆ
ನನ್ನಯ ನೀರವ ತೊರೆಯಲು ಸಾದ್ಯವೇ
ಸುರಿವ ಮಳೆಯ ಪರಿವೆ ನನಗಿಲ್ಲ
ನಿನ್ನ ಹೊರತು ಬೇರೆ ಸೊಗಸಿಲ್ಲ
ಸರಿದ ಸೂರ್ಯ ಕಿರಣ ಬೀರೊಲ್ಲ, ನಿನ್ನ ಹೊಳಪ ಮೀರೊ ಮಿನುಗಿಲ್ಲ
ಇರುಳ ದೀಪ ನೀನಾದೇಯಾ
ಕಳೆದ ದಿನವನು ಪಡೆದ ನೋವನು ಕಾಡೋ ಮಳೆಯನು ಮರೆಸು ಬಾ
ಸಿಗುವ ನಗುವನು ನಾಳೆ ಕನಸನ್ನು ಒಲವ ಉಡುಪನು ತೊಡಿಸು ಬಾ