kannige kaanada naatakakaara lyrics ( ಕನ್ನಡ ) – Olavina udugore

kannige kaanada naatakakaara song details

  • Song : kannige kaanada naatakakaara
  • Singer : S P Balasubhramanya
  • Lyrics : R N Jayagopal
  • Movie : Olavina udugore
  • Music : M Ranga Rao

kannige kaanada naatakakaara lyrics in Kannada

ಕಣ್ಣಿಗೆ ಕಾಣದ ನಾಟಕಕಾರ
ನಿನಗೇ ನನ್ನ ನಮಸ್ಕಾರ
ಪಾತ್ರಗಳಲ್ಲಿ ತಿರುವುಗಳೆನಿತೋ
ಪಾತ್ರಗಳಲ್ಲಿ ತಿರುವುಗಳೆನಿತೋ
ಬಲ್ಲವ ನೀನೆ ಸೂತ್ರಧಾರ

ಕಣ್ಣಿಗೆ ಕಾಣದ ನಾಟಕಕಾರ
ನಿನಗೇ ನನ್ನ ನಮಸ್ಕಾರ

ಶಿಶುವೇ ಜೋಗುಳ ಹಾಡುವುದು
ಇರುಳಲಿ ಸೂರ್ಯನು ತೋರುವನು
ಮಹಿಮನೇ ನೀ ನೆನೆದಾಗ
ಬಡವ ಬಲ್ಲಿದ ಆಗುವನು
ಕುರುಡನು ಎಲ್ಲವ ನೋಡುವನು
ಅವನಲಿ ನೀ ಒಲಿದಾಗ
ನೆನೆದದು ಎಲ್ಲಾ, ನಡೆದೇ ಹೋದರೆ
ದೇವನೇ ನಿನಗೆ, ಬೆಲೆ ಎಲ್ಲಿ
ನಡೆಯುವುದೆಲ್ಲ, ಮುಂಚೆಯೇ ತಿಳಿದರೆ
ಮಾನವ ಗರ್ವಕೆ, ಮಿತಿ ಎಲ್ಲಿ
Man proposes, god disposes

ಕಣ್ಣಿಗೆ ಕಾಣದ ನಾಟಕಕಾರ
ನಿನಗೇ ನನ್ನ ನಮಸ್ಕಾರ

ಪ್ರೇಮಿಗಳನ್ನು ಬೇರ್ಪಡಿಸಿ
ನೂತನ ಜೋಡಿಯ ಸೇರಿಸುವೆ
ಗೊಂಬೆಯ ರೀತಿ ಆಡಿಸುವೆ
ಮಾವಿಗೆ ಬೇವಿನ ರುಚಿ ಬೆರಸಿ
ನಾಲಿಗೆ ಅದನು ಅನುಭವಿಸಿ
ಹೀರುವ ಹಾಗೆ ಮಾಡಿಸುವೆ
ಮಾನವನಾಗಿ, ಹುಟ್ಟಿ ನೀ ಬಂದರೆ
ಕಷ್ಟದ ಅರ್ಥ, ನೀ ತಿಳಿವೆ
ಪ್ರೇಮಿಸಿ ನೀನು, ವಿರಹದೆ ಬೆಂದರೆ
ನಮ್ಮಯ ನೋವನು, ನೀ ಅರಿವೆ

They say love is god
But i say god doesn’t know anything about love

ಕಣ್ಣಿಗೆ ಕಾಣದ ನಾಟಕಕಾರ
ನಿನಗೇ ನನ್ನ ನಮಸ್ಕಾರ, ನಮಸ್ಕಾರ

kannige kaanada naatakakaara song video :

Leave a Comment

Contact Us