Kanasa benneri lyrics – Kanasu maratakkide
Kanasa benneri song details
- Song : Kanasa benneri
- Singer : Vijay Prakash
- Lyrics : Dr V Nagendra prasad
- Movie : Kanasu maratakkide
- Music : Manasa holla
Kanasa benneri lyrics in Kannada
ಕನಸ ಬೆನ್ನೇರಿ
ಕಲ ಕಲ ಕಲ ಕನಸ ಬೆನ್ನೇರಿ
ಹೊರಟಿರುವೆನು ಹೃದಯ ಸವರಿ
ಕಲ ಕಲ ಕಲ ಕನಸ ಬೆನ್ನೇರಿ
ಹುಡುಕಿರುವೆನು ಹೊಸ ನಗರಿ
ಪಯಣ ಸಾಗುತಿದೆ
ಖುಷಿಯ ನೀಡುತಿದೆ
ಹೊಸ ಮೋಡದ
ಕೆಳಗೆ ನಾನು
ಹೊಸ ದಾರಿಯ
ಗಮನ ಇನ್ನು
ಕಲ ಕಲ ಕಲ ಕನಸ ಬೆನ್ನೇರಿ
ಹೊರಟಿರುವೆನು ಹೃದಯ ಸವರಿ
ಈ ಸೌಂದರ್ಯದ ಈ ಸೌಗಂಧದ
ಈ ಸಮ್ಮೇಳಕೆ ನಾ ಸೋತೆ
ಈ ಶ್ರೀಮಂತದ ಈ ಜೀವಂತದ
ಈ ಮಣ್ಣಲ್ಲಿನ ಕೂಸಂತೆ
ಹಗುರಾದೆ ನಾ
ಗರಿಯ ಹಾಗೆ
ದನಿಯಾದೆನಾ ನಾ
ಝರಿಯ ಹಾಗೆ
ಕಲ ಕಲ ಕಲ ಕನಸ ಬೆನ್ನೇರಿ
ಹೊರಟಿರೊ ಈ ಬದುಕೇ ಅಂಬಾರಿ
ಈ ತಂಗಾಳಿಯ
ಈ ಜೋಲಾಲಿಯು
ಈ ಕಾಡಂಚಿನ ಝೇಂಕಾರ
ಈ ಸದ್ದಿಲ್ಲದ ಈ ಹೆದ್ದಾರಿಗೆ
ಈ ಸಾಲು ಮರ ಸಿಂಗಾರ
ವರವಾಗಲಿ ಹುಡುಕೊ ಜಾಡು
ಚಿರವಾಗಲಿ ಎದೆಯ ಹಾಡು
ಕಲ ಕಲ ಕನಸ ಬೆನ್ನೇರಿ
ಹೊರಟಿರುವೆನು ಹೃದಯ ಸವರಿ
ಪಯಣ ಸಾಗುತಿದೆ
ಖುಷಿಯ ನೀಡುತಿದೆ
ಹೊಸ ಮೋಡದ ಕೆಳಗೆ ನಾನು
ಹೊಸ ದಾರಿಯ ಗಮನ ಇನ್ನು
ಕಲ ಕಲ ಕಲ ಕಲ ಕನಸ ಬೆನ್ನೇರಿ
ಹೊರಟಿರೋ ಈ ಬದುಕೇ ಅಂಬಾರಿ
Kanasa benneri lyrics video :