Irula chandiranu – Siddhartha Belmannu Lyrics
Singer | Siddhartha Belmannu |
▪ Song : Irula Chandiranu
▪ Music : Gagan Baderiya
▪ Singer : Siddartha Belmannu
▪ Lyricist : Chandrajith Belliappa
Irula chandiranu song lyrics in Kannada – Katha sangama
ಇರುಳ ಚಂದಿರನು ಲಿರಿಕ್ಸ್
ಇರುಳ ಚಂದಿರನು…
ಕನಸೂರ ಕತೆಗಾರನು
ಕತೆಯೊಂದ ಮರೆತು…..
ಹಗಲಲ್ಲಿ ಮುಸುಕಾದನು..
ಕೊಂಚ ಹನಿದ ಮಳೆಗೆ
ಕುಂಚ ಹಿಡಿದು ರವಿಯು.
ಬಾಡಿದ ಚಂದಮಗೆ
ತುಟಿ ಅಂಚಲಿ ನಗುವ ಬರೆದ..
ಮಗುವಂತೆ ಹೀಗೆ..
ನಗುವಾಗ ಇವನು..
ಬಾನೆಲ್ಲ ರಂಗಾಗಿದೆ
ಪುಟವೊಂದು ತಿರುವಿ
ಬರೆದಂತ ಕವಿತೆ
ಹೊಸತೊಂದು ಕತೆ ಹೇಳಿದೆ..
ಅವನ ಹೊಳಪಲ್ಲಿ
ಮಿಂದ ತಾರೆ ಇವಳು
ಕಣ್ಣು ಮಿಟುಕಿಸೊ ಕಂದ
ಮಿನುಗು ಶೃಂಗಾರಳು
ಬೀಸೋ ಗಾಳಿ..
ಜೋಕಾಲಿ ಹಾಗೆ
ಮೆಲ್ಲ ತೂಗಿದೆ
ಇರುಳು ಮೌನದಲ್ಲಿ
ಇಂಪಾಗಿ ಹಾಡಿಹುದು ಲಾಲಿ
ಅವನ ಕತೆಗಾಳಿಗೆ
ತಲೆಯ ದೂಗುವಳು
ಅವನ ಪುಟ್ಟ ಮಗಳು..
ಕಣ್ಣ ಮುಚ್ಚುತಲೆ..
ಗರಿಯ ಬಿಚ್ಚಿಹಳು..
ಕನಸಿಗೆ ಹಾರಿಹಳು..
ತನ್ನ ಬೆರಳಲ್ಲಿ..
ಅವನ ಬೆರಳನಿಡಿದು
ಬಾನದೂರಲಿ
ನವಿಲಾಗಿ ನಲಿದಾಡಿಹಳು..
ಮುದ್ದಾಗಿ ಹೀಗೆ
ನಗುವಾಗ ಇವಳು
ಬಾನೆಲ್ಲ ರಂಗಾಗಿದೆ
ಪುಟ್ಟವೊಂದು ತಿರುವಿ
ಬರೆದಂತ ಕವಿತೆ
ಹೊಸತೊಂದು ಕತೆ ಹೇಳಿದೆ…