Hudugaru tumba ollevru lyrics ( ಕನ್ನಡ ) – Chaithra kotoor

Hudugaru tumba ollevru song details

  • Song : Hudugaru tumba ollevru
  • Singer : Chaithra kotoor , Shwetha prabhu
  • Music : Chaithra kotoor
  • Lyrics : Chaithra kotoor
  • Label : Anand audio

Hudugaru tumba ollevru lyrics in Kannada

ಹುಡುಗರು ತುಂಬಾ ಒಳ್ಳೇವ್ರು ಲಿರಿಕ್ಸ್

ಹುಡುಗರು ತುಂಬಾ ಒಳ್ಳೇವ್ರು
ಟೈಮ್ ಬೇಕು ಒಂಚೂರು
ಇಷ್ಟ ಆದ್ರೆ ಬಿಡದೋರು
ಕಷ್ಟ ಆದ್ರೆ ಕರಗೋರು
ಮಾತಿನ ಮೇಲೆ ನಿಲ್ಲೋರು
ನಿಯತ್ತಿಂದ ದುಡಿಯೋರು
ಲವ್ ಆದಾಗ ಕುಣಿಯೋರು
ಬ್ರೇಕ್ ಅಪ್ ಆದಾಗ ನರಳುವರು

ಒಳ್ಳೆ ಹುಡುಗರ ಬುದ್ದಿ ನಿಂಗೆ ಗೊತ್ತೇ ಇಲ್ವೇನೆ
ಅನ್ಯಾಯ ಅನ್ನೋ ಮಾತು ಅವರ ಹಿಸ್ಟರಿಲೇ ಇಲ್ವೇ
ತಳಕು ಬಳಕು ಅಂದ ಚಂದ ಎಷ್ಟು ನೋಡ್ತಾರೆ
ನಿನ್ನ ಪ್ರೀತಿ ಸತ್ಯಗಿದ್ರೆ ಹೇಗಿದ್ರೂ ಬರ್ತಾರೆ
ನೀನು ಅವನ ಹುಡುಗಿ ಅಂತ ಫಿಕ್ಸ್ ಆದ್ಮೇಲೆ ಜಗತ್ತೇ ತಿರುಗಿ ಬರಲಿ ಮಾಡ್ತಾನೆ ಕಮಲೆ
ನಿನ್ನ ಲವ್ ಅಲ್ಲಿ ಮಾಡ್ಕೋಬೇಡ ಚೊಂಬು
ನೀನು ಸ್ವಲ್ಪ ಅವನ ನಂಬು ನಂಬು ನಂಬು

ಚಟ ಇದೆ ಅಂತ ಅವನಿಗೆ complent ಮಾಡಬೇಡ್ವೆ
ನಿನ್ನ ಹಿಂದೆ ಬಿದ್ದು ಪ್ರೀತ್ಸೋದು ಚಟ ಅಲ್ವೇನೆ
ಗೇಮ್ ಆಟ್ಕೊಂಡು ಕೂರ್ತಾನೆ ಅಂತ ಕೊರಗಬೇಡವ್ವೆ
ನಿನ್ನ ಫೀಲಿಂಗ್ಸ್ ಜೊತೆ ಆಡೋದಕ್ಕಿಂತ ಬೆಸ್ಟ್ ಅಲ್ವೇನೆ
ಕೇಳ್ತನಲ್ಲ ನಿನ್ನ ಮಾತನ್ನ
ನೀನೆಷ್ಟು ಅವನ ಮಾತು ಕೇಳ್ತೀಯ
ಎಂತಾದ್ರು ಕೇಳಿದೆನವ್ವಾ ಹೆಂಗಿದಿಯಪ್ನ
ಹುಡುಗ ಅಂತ
ನನಗೆ ಕಷ್ಟ ಅಯ್ತೆ ಅಂತ ಹೇಳಿ ನೋಡು ಇರೋದಿಲ್ಲ ಚೂರು ಗೋಳು
ಮಾತಿಲ್ದೆ ಮಾಡಾಕಿದ್ದು ತಿಂದು ಹೋಗಲ್ವೇ
ಅಂತ ವರ ಸಿಗೋದು ನಿನ್ನ ಪುಣ್ಯ ಅಲ್ವೇ

ನೀವು ಹಂಗೆ ಹಿಂಗೆ ಅಂತ ಸುಮ್ನೆ ಹೇಳ್ತಾರೆ ಅನ್ನಿಸಬಹುದು
ಗಾಗಲ್ಸ್ ಹಾಕೊಂಡು ಕರ್ಚೀಫ್ ಕಟ್ಕೊಂಡು ಬೀದಿ ಸುತ್ತಬಹುದು
ಅವನು ಹೇಳೋದು ನಿಜನ ಸುಳ್ಳ ಅಂತ cunfuse ಆಗಬಹುದು
Over act ಮಾಡೋ ದೊಡ್ಡ ರೀಲ್ ಮಾಸ್ಟರ್ ಅನ್ನಿಸಬಹುದು
ಇವ್ನಿಗ್ ಯಾಕ್ ಶೋಕಿ ಅಂತ ನಿಂಗೆ ಉರಿಬೋದು
ಬಾಯಿ ಬಿಟ್ಟರೆ ಬರೀ ಬಾಲ್ಡಪ್ ಅಂತ ಅನ್ಸಬಹುದು
ಆದ್ರೆ ಅವನ ಲೈಫಿಗೆ ಅವನೆ ಹೀರೋ ಅಲ್ವೆನೆ
ಕೊಡಲಿ ಬಿಡೆ ಬಿಲ್ಡಪ್ ಕೊಡಲಿ ಬಿಡೆ
ಬಿಲ್ಡಪ್ ಕೊಟ್ಕೊಂಡು ಅವನು ಹೀರೋ ಆಗಲಿ ಬಿಡೆ

ನಿನ್ನಿಷ್ಟದ ಬಗ್ಗೆ ಯೋಚನೆ ಮಾಡದೆ ಇರಬಹುದು
ಆದ್ರೆ ನಿನಗಿಂತ ನಿನ್ನ ಹೆಚ್ಚು ಹಚ್ಕೊಂಡಿರಬಹುದು
ಹಠ ಮಾಡದೆ ಮುಂದೆ ಸಾಗು ಒಳ್ಳೆಯವನು ಸಿಕ್ಕರೆ ನೀನು ಬಾಗು ಬಾಗು ಬಾಗು ಬಾಗೆಲೇ
ಕೇಳ್ತಾರೆ ಎಲ್ಲಾ ಹುಡುಗೀರು ನಾನು ಹೆಚ್ಚ ನಿಮ್ಮ ತಾಯಿ ಹೆಚ್ಚ
ನಮ್ ಹುಡುಗ ಹೇಳ್ತಾನೆ ಇಬ್ಬರೂ ಹೆಚ್ಚು ಹಿಡಿಸಬೇಡ್ವೆ ಹುಚ್ಚು
ಅಕ್ಕ ತಂಗಿ ಬೇಕು ತಾಯಿ ಬೇಕು ನಿನ್ನಂಗೆ ಅವನಿಗೆ ಎಲ್ಲರೂ ಬೇಕು
ಮನೆ ಮಠ ಅಂತ ಕಟ್ಟೋಕೆ ಒದ್ದಾಡ್ತಾನೆ
ಹೆಂಡ್ತಿ ಮಕ್ಕಳು ಅಂತ ಜೀವ ಸವಿಸುತ್ತಾನೆ
ನಿನ್ನ ಬಾಡಿಗಾರ್ಡ್ ಪ್ರೊಟೆಕ್ಟರ್ ಕೇರ್ ಟೇಕರ್ ಲೈಫ್ ಮೇಕರ್ most of the time ನಿನ್ನ ಮುಖದಲ್ಲಿ ನಗು ಮೂಡಿಸೋ ಜೋಕರ್
ಹುಡುಗರಿಲ್ದೆ ಹುಡುಗಿರಿಲ್ಲ
ಹುಡುಗಿರಿಲ್ದೆ ಹುಡುಗರಿಲ್ಲ
ತಿಳ್ಕೊಂಡ್ರೆ ಸಾಕು ಇದು ಬದುಕೆಲ್ಲಾ ಸಕ್ಕರೆ ಬೆಲ್ಲ

ಹಳೆದೆಲ್ಲಾ carry ಮಾಡಬೇಡ
ಹಿಂದಿಂದು ತಗಿಯಬೇಡ
ಬಿಟ್ಟಾಕು ಬಿಟ್ಟಾಕು ಬಿಟ್ಟಾಕಿ ಮುಂದೆ ಸಾಗು
ಹುಡುಗರಂದ್ರೆ ಗೊತ್ತಲ್ವಾ no comparison they Always tried to rules invention

ಹುಡುಗರು ತುಂಬಾ ಒಳ್ಳೇವ್ರು
ಟೈಮ್ ಬೇಕು ಒಂಚೂರು
ಹೆಂಡ್ತೀನ ದೇವ್ರು ಅನ್ನೋರು
ಮಕ್ಕಳನ್ನು ಆಡಿಸಿ ನಗಿಸೋರು
ಹುಟ್ತನೆ ಹೀರೋ ಆದವರು
ಹೀರೋಯಿನ್ ನಾ ಕಾಯೋರು
ಸೃಷ್ಠಿಕರ್ತರೂ ಇವರೇನೆ
ದೃಷ್ಟಿ ತೆಗೆದು ಬಿಡಲೇನೆ

Hudugaru tumba ollevru song video :

Leave a Comment

Contact Us