Gare kelsa lyrics ( ಕನ್ನಡ ) – Mareyade kshamisu

Gare kelsa song details

  • Song : Gare kelsa
  • Singer : Naveen Sajju
  • Lyrics : Raghav K
  • Movie : Mareyade kshamisu
  • Music : Aaron karthik Venkatesh
  • Label : Siri music

Gare kelsa lyrics in kannada

ಮರೆಯದೆ ಕ್ಷಮಿಸು ಸಾಂಗ್ ಲಿರಿಕ್ಸ್

ನಾವು ಕೆಲ್ಸಕ್ಕೆ ಹೋಯ್ತಿವಿ
ಗಾರೆ ಕೆಲಸ ಮಾಡ್ತೀವಿ
ಮೈ ಬಗ್ಗಿಸಿ ದುಡೀತೀವಿ
ರಾತ್ರಿ ಆದ್ರೆ ಕುಡೀತೀವಿ
ನಾವು ಕೆಲ್ಸಕ್ಕೆ ಹೋಯ್ತಿವಿ
ಗಾರೆ ಕೆಲಸ ಮಾಡ್ತೀವಿ
ಮೈ ಬಗ್ಗಿಸಿ ದುಡೀತೀವಿ
ರಾತ್ರಿ ಆದ್ರೆ ಕುಡೀತೀವಿ
ತಿನ್ಕೊಂಡು ಉಣ್ಕೊಂಡು ಕುಡ್ಕೊಂಡು ನಾವು ಅರಾಮಾಗಿರ್ತಿವಲ್ಲ
ಬಿ.ಪಿ ಶುಗರ್ ಕಾಯಿಲೇನೆ ಇಲ್ಲದಂಗೆ
ಗಟ್ಟುಮುಟ್ಟಾಗಿದ್ದಿವಲ್ಲ
ತಿನ್ಕೊಂಡು ಉಣ್ಕೊಂಡು ಕುಡ್ಕೊಂಡು ನಾವು ಅರಾಮಾಗಿರ್ತಿವಲ್ಲ
ಬಿ.ಪಿ ಶುಗರ್ ಕಾಯಿಲೇನೆ ಇಲ್ಲದಂಗೆ
ಗಟ್ಟುಮುಟ್ಟಾಗಿದ್ದಿವಲ್ಲ

ಹೇ ಚಿಂಗನಕ್ಕು ನಕ್ ನಕ್ ತಕಿಟ ತಕಿಟ ತಾ
ಚಿಂಗನಕ್ಕು ನಕ್ಕು ನಕ್ಕು ನಕಿಟ ನಕಿಟ ತಾ

ನಾವು ಕೆಲ್ಸಕ್ಕೆ ಹೋಯ್ತಿವಿ
ಗಾರೆ ಕೆಲಸ ಮಾಡ್ತೀವಿ
ಮೈ ಬಗ್ಗಿಸಿ ದುಡೀತೀವಿ
ರಾತ್ರಿ ಆದ್ರೆ ಕುಡೀತೀವಿ
ಜಾತಿ ಮತ ಕೇಳಕಿಲ್ಲ
ಸ್ನೇಹ ಮಾಡೋದು ಬುಡಕ್ಕಿಲ್ಲ
ಒಟ್ಟಿಗ್ ಸೇರಿ ದುಡೀತೀವಿ
ಅಣ್ತಮ್ಮಂಗೆ ಬದುಕುತೀವಿ
ಸಿರಿವಂತ ಹೆಚ್ಚೇನಲ್ಲ
ಬಡವನ ದೂರೋದಿಲ್ಲ
ಬಂಗಾಲೆ ಆಗ್ಲಿ ಗುಡಿಸ್ಲೇ ಆಗ್ಲಿ
ಇಷ್ಟ ಪಟ್ಟೇ ಕಟ್ತೀವಿ

ಕೈಯಲಿದ್ರೆ ಕಾಸು
ಊರಿಗೆಲ್ಲ ನಾವು ಬಾಸು
ಖಾಲಿಯಾದ್ರೆ ಕಾಸು
ನಮ್ಮ ಹೊಟ್ಟೆಗೆ ಲಾಸು
ಸ್ವಂತ ಮನೆ ಕಟ್ಟೋರ್ ಕನಸು
ನಾವೀಡೇರ್ಸ್ತೀವಿ
ಬಾಡಿಗೆ ಮನೆನೆ ಅರಮನೆ ಅನ್ಕೊಂಡು ಜೀವನ ಮಾಡ್ತೀವಿ

ಹೇ ಚಿಂಗನಕ್ಕು ನಕ್ ನಕ್ ತಕಿಟ ತಕಿಟ ತಾ
ಚಿಂಗನಕ್ಕು ನಕ್ಕು ನಕ್ಕು ನಕಿಟ ನಕಿಟ ತಾ

ನಾವು ಕೆಲ್ಸಕ್ಕೆ ಹೋಯ್ತಿವಿ
ಗಾರೆ ಕೆಲಸ ಮಾಡ್ತೀವಿ
ಮೈ ಬಗ್ಗಿಸಿ ದುಡೀತೀವಿ
ರಾತ್ರಿ ಆದ್ರೆ ಕುಡೀತೀವಿ
ದುಡ್ಡಿಗ್ ಬೆಲೆ ಕೊಡಕಿಲ್ಲ
ಸ್ನೇಹಕ್ ಜೀವ ಕೊಡ್ತಿವಲ್ಲ
ದುಡ್ಡು ಮಾಡೋ ಚಿಂತೇನೆ ಇಲ್ಲ
ಬ್ಯಾಂಕ್ ಅಲ್ಲಿ ಅಕೌಂಟೆ ಇಲ್ಲ
ಬಗ್ಗದ್ರೆ ಜುಟ್ಟು ಹಿಡಿತಾರೆ
ಎದ್ದು ನಿಂತರೆ ಕಾಲಿಡಿತಾರೆ
ನಾವಂತು ಬಲವನ್ನೆ ನಂಬಿ
ಬಲಶಾಲಿ ಆಗುವೆವಲ್ಲ
ಜಗತ್ ಚಿಂತೆ ನಮಗಿಲ್ಲ
ಚಿಂತೆ ಮಾಡೋಕ್ ಟೈಮಿಲ್ಲ
ಸಾಲ ಆದ್ರೂ ಮಾಡ್ತೀವಿ
ಶಿವಣ್ಣನ ಸಿನಿಮಾ ನೋಡ್ತೀವಿ

ಅಣ್ಣನಿಗೆ ಜೈ ಶಿವಣ್ಣನಿಗೆ ಜೈ
ಹ್ಯಾಟ್ರಿಕ್ ಹೀರೋ ಜೈ
ಶಿವಣ್ಣನಿಗೆ ಜೈ
ಓಂ ಸತ್ಯ ಜೈ ಜೋಗಯ್ಯನಿಗೆ ಜೈ ಜೈ
ಕರುನಾಡ ಚಕ್ರವರ್ತಿ ಜೈ ಜೈ ಜೈ

ನಾವು ಕೆಲ್ಸಕ್ಕೆ ಹೋಯ್ತಿವಿ
ಗಾರೆ ಕೆಲಸ ಮಾಡ್ತೀವಿ
ಮೈ ಬಗ್ಗಿಸಿ ದುಡೀತೀವಿ
ರಾತ್ರಿ ಆದ್ರೆ ಕುಡೀತೀವಿ

Gare kelsa song video :

Advertisement Advertisement

Leave a Comment

Advertisement Advertisement

Contact Us