Ee sanje lyrics ( ಕನ್ನಡ ) – Rangitaranga

Ee sanje song details

  • Song : Ee sanje
  • Singer : Abhay Jodhpurkar, Gokul Abhishek, Monisha
  • Lyrics : Anup bhandari
  • Movie : Rangitaranga
  • Music : Anup bhandari
  • Label : T series

Ee sanje lyrics in kannada

ಈ ಸಂಜೆ ಏಕೆ ಜಾರುತಿದೆ
ಸದ್ದಿಲ್ಲದಂತೆ ಸಾಗುತಿದೆ
ಬೆಳಕ ಸೆರೆಯ ತೊರೆದು
ಈ ಸಂಜೆ ಏಕೆ ಜಾರುತಿದೆ
ನೆರಳನೇ ಅರಿಯದ ಅಪರಿಚಿತ ದಾರಿಯಲಿ
ಇರುಳಿನ ಸನಿಹಕೆ
ಈ ಸಂಜೆ ಏಕೆ ಜಾರುತಿದೆ

ಕಾರ್ಮೋಡ ಮಡಿಲಲ್ಲಿ ಹಸಿ ಮಲಗಿಸಲು
ಶಶಿ ಇನ್ನೂ ಬರಲಿಲ್ಲ ಭುವಿ ಬೆಳಗಿಸಲು
ಸೂರ್ಯನು ಅರಳುವವರೆಗೆ
ಬೆಳಕನೆ ಕಾಣದ ಧರೆಗೆ
ವಿಹಾರಿಸೋ ಈ ಹಂಬಲದೊಂದಿಗೆ
ಹತ್ತಿರ ತೀರವ ಸೇರಿ, ಕತ್ತಲೆಯ ತೇರನ್ನೇರಿ
ಬೀಸುವ ಗಾಳಿಯ ಜೊತೆಗೆ
ಈ ಸಂಜೆ ಏಕೆ ಜಾರುತಿದೆ

ಮುಸುಕನ್ನು ತೆರೆದಾಗ ಬರೊ ನಸುಕಿನಲಿ
ಮಸುಕುಂಟು ಜೋಪಾನ ಕಳ್ಳುಸುಕಿನಲಿ
ಸೆಳೆಯುವ ನೆನಪಿನ ಮರಳು
ಹೋದರೆ ಶಾಶ್ವತ ಇರುಳು
ಈ ಮಾತಿನ ತಿರುಳನು ಅರಿಯದೆ
ಮುಂಗುರುಳನ್ನು ಹಿಂದೆ ತಳ್ಳಿ
ನಿಲ್ಲದಂತ ವೇಗದಲ್ಲಿ ಹಾರುವ ಹಕ್ಕಿಯ ಜೊತೆಗೆ
ಈ ಸಂಜೆ ಏಕೆ ಜಾರುತಿದೆ

Ee sanje song video :

Leave a Comment

Contact Us