Ee prema lyrics ( ಕನ್ನಡ ) – Love mocktail 2

Ee prema song details

  • Song : Ee prema
  • Singer : Ramya Bhat
  • Lyrics : Raghavendra Kamath
  • Movie : Love mocktail 2
  • Music : Nakul Abhyankar

Ee prema lyrics in Kannada

ಯಾಕೆ ಹೀಗೆ ಸುಳಿದೆ ನೀನು
ಯಾವ ಬಣ್ಣ ಬಳಿದೆ ನೀನು
ನಿನ್ನ ಸೇರೋ ಕನಸು ಕಂಡೆನು
ಸೋತೆನು ಹಾ ಸೋತೆನು

ಸೂರ್ಯ ಚಂದ್ರ ಇರುವ ವರೆಗೂ
ಹಗಲು ರಾತ್ರಿ ನೀನೆ ಬೆರಗು
ಕಂಡ ಕ್ಷಣದಲ್ಲೇ ಕರಗಿ
ನಾ ಸೋತೆನು ಹಾ ಸೋತೆನು

ಪ್ರೀತಿಯೇ ಏನು ನಿನ್ನ ಮಾಯೆ?
ಮನಸಿದು ನಿಂತಲ್ಲೇ ಹಾರಿದೆ
ಆಸೆಯು ದಿನ ರಂಗೇರಿದೆ
ಸವಿಗನಸೆ ಇಡಾಡಿದೆ

ಈ ಪ್ರೇಮ!
ನಿನ್ನ ಕೊಡುಗೆ ನನಗೆ
ಈ ಪ್ರೇಮ!
ನೀನಿರಲು ಬಳಿಗೆ
ಈ ಪ್ರೇಮ!
ಕಣ್ಣ ಸಲುಗೆ ಸಲುಗೆ
ಈ ಪ್ರೇಮ..

ಈ ಪ್ರೇಮ!
ನೀನೆ ವರವು ನನಗೆ
ಈ ಪ್ರೇಮ!
ನೀನಿರಲು ಜೊತೆಗೆ
ಈ ಪ್ರೇಮ!
ಭಾವ ಬೆಸದ ಬೆಸುಗೆ
ಈ ಪ್ರೇಮ..

ಏಕೋ ಏನೋ ಮನಸು ಈಗ
ಉಯ್ಯಾಲೆ ಅಂತಾಗಿದೆ..
ಬೀಸೋ ಗಾಳಿ ಕಿವಿಯನು ಸೋಕಿ
ಇಂಪಾದ ಹಾಡಾಗಿದೆ
ಹೊಸತು ಒಂದು ಭಾವ ಲೋಕ
ನನ್ನಲ್ಲಿ ತೆರದಂತಿದೆ
ತರಲೆ ತಾಜಾ ತಾಜಾ ಆಸೆಗಳು
ಬಿಟ್ಟು ಬಿಡದೆ ಮುಟ್ಟಿದೆ
ಸದ್ದಿಲ್ಲದೇ ಗೊತ್ತಿಲ್ಲದೇ
ಈ ಜ್ವರವು ಶುರುವಾಗಿದೆ

ಪ್ರೀತಿಯೇ ಏನು ನಿನ್ನ ಲೀಲೆ?
ನನಗಿದೋ ಈಗೆಲ್ಲ ಖುಶಿಯಾಗಿದೆ
ಆಸೆಯು ದಿನ ರಂಗೇರಿದೆ
ಸವಿಗನಸೆ ಇಡಾಡಿದೆ

ಈ ಪ್ರೇಮ!
ನಿನ್ನ ಕೊಡುಗೆ ನನಗೆ
ಈ ಪ್ರೇಮ!
ನೀನಿರಲು ಬಳಿಗೆ
ಈ ಪ್ರೇಮ!
ಕಣ್ಣ ಸಲುಗೆ ಸಲುಗೆ
ಈ ಪ್ರೇಮ..

ಈ ಪ್ರೇಮ!
ನೀನೆ ವರವು ನನಗೆ
ಈ ಪ್ರೇಮ!
ನೀನಿರಲು ಜೊತೆಗೆ
ಈ ಪ್ರೇಮ!
ಭಾವ ಬೆಸದ ಬೆಸುಗೆ
ಈ ಪ್ರೇಮ..

Ee prema song video :

Leave a Comment

Contact Us